ಕೊಳ್ಳೇಗಾಲ: ತಾಲ್ಲೂಕಿನ ಗುಂಡೇಗಾಲ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಶಾರ್ಟ್ ಸರ್ಕಿಟ್ನಿಂದಾಗಿ ಗ್ರಾಮದ ಮಹದೇವ ಪ್ರಕಾಶ್ ಎಂಬುವರ ಕಟಾವಿಗೆ ಬಂದಿದ್ದ ಮೂರುವರೆ ಎಕರೆ ಕಬ್ಬು ಬೆಳೆ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಜೋತು ಬಿದ್ದಿದ್ದ ವಿದ್ಯುತ್ ತಂತಿ ಕಟಾವಿಗೆ ಬಂದಿದ್ದ ಕಬ್ಬು ಬೆಳೆಗೆ ತಗುಲಿ ಬೆಂಕಿ ಹೊತ್ತಿಕೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಅಕ್ಕಪಕ್ಕದ ಜಮೀನಿಗೆ ಬೆಂಕಿ ತಾಗದಂತೆ ಬೆಂಕಿಯನ್ನು ನಂದಿಸಿದರು. ಸುಮಾರು ₹9 ಲಕ್ಷ ಬೆಲೆಬಾಳುವ 300 ಟನ್ ಕಬ್ಬು ಮತ್ತು ಡ್ರಿಪ್ಗೆ ಅಳವಡಿಸಿದ್ದ ₹1.50 ಲಕ್ಷ ಬೆಲೆಯ ಪೈಪ್ಲೈನ್ ಸುಟ್ಟು ಭಸ್ಮವಾಗಿದೆ.

ಕಳೆದ ವರ್ಷವೂ ಕಬ್ಬು ಕಟಾವು ಮಾಡುವಾಗಲೇ ವಿದ್ಯುತ್ ತಂತಿ ಕಂಬದಿಂದ ತುಂಡಾಗಿ ಬಿದ್ದು ಬೆಂಕಿ ಹೊತ್ತಿಕೊಂಡು ಒಂದೂವರೆ ಎಕರೆ ಕಬ್ಬು ಸುಟ್ಟು ₹3 ಲಕ್ಷ ನಷ್ಟ ಉಂಟಾಗಿತ್ತು. ಸೆಸ್ಕ್ ಅಧಿಕಾರಿಗಳಿಗೆ ಮತ್ತು ತಹಶೀಲ್ದಾರ್ ಅವರಿಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದರು ಇಲ್ಲಿಯವರೆಗೂ ಪರಿಹಾರ ಬಂದಿಲ್ಲ. ಈಗ ಮತ್ತೆ ಹಾನಿಯಾಗಿದೆ ಎಂದು ರೈತ ಅಳಲನ್ನು ತೋಡಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.