ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: ತಾಜಾ ಹಣ್ಣು, ತರಕಾರಿ ಮಾರಾಟಕ್ಕೆ ಸಂಚಾರಿ ವಾಹನ

Published 8 ಜುಲೈ 2024, 15:19 IST
Last Updated 8 ಜುಲೈ 2024, 15:19 IST
ಅಕ್ಷರ ಗಾತ್ರ

ಚಾಮರಾಜನಗರ: ‘ಸಾರ್ವಜನಿಕರಿಗೆ ತಾಜಾ ಹಣ್ಣು ಹಾಗೂ ತರಕಾರಿ ಮಾರಾಟವಾಗಲು ಅನುಕೂಲವಾಗುವಂತೆ ಹಾಪ್‌ಕಾಮ್ಸ್  ವತಿಯಿಂದ ಸಂಚಾರಿ ವಾಹನ ಸೇವೆ ಆರಂಭಿಸಲಾಗಿದ್ದು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಹಾಪ್‌ ಕಾಮ್ಸ್ ಅಧ್ಯಕ್ಷ ಕುರುಬರಹುಂಡಿ ಕೆ.ಆರ್.ಲೋಕೇಶ್ ಹೇಳಿದರು.

ನಗರದ ಹಾಪ್ ಕಾಮ್ಸ್ ಪ್ರಾಂಗಣದಲ್ಲಿ ಸಂಚಾರಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಸಾರ್ವಜನಿಕರ ಅನುಕೂಲಕ್ಕಾಗಿ ರಿಯಾಯಿತಿ ದರದಲ್ಲಿ ತಾಜಾ ಹಣ್ಣು ಹಾಗೂ ತರಕಾರಿಗಳನ್ನು ಮಾರಾಟ ಮಾಡಲು ಹಾಪ್‌ಕಾಮ್ಸ್‌ನಿಂದ ₹ 10 ಲಕ್ಷ ವೆಚ್ಚದ ಸಂಚಾರಿ ವಾಹನ ನೀಡಲಾಗಿದೆ. ಪ್ರಾಥಮಿಕ ಹಂತದಲ್ಲಿ ಜಿಲ್ಲಾ ಕೇಂದ್ರದಲ್ಲಿ ಸಂಚಾರಿ ವಾಹನ ಸೇವೆ ಆರಂಭಿಸಿದ್ದು ಮುಂದಿನ ದಿನಗಳಲ್ಲಿ ಗ್ರಾಮಗಳಿಗೂ ಸೌಲಭ್ಯ ವಿಸ್ತರಿಸುವ ಉದ್ದೇಶ ಜಿಲ್ಲಾ ಹಾಪಕಾಮ್ಸ್ ಆಡಳಿತ ಮಂಡಳಿ ಹೊಂದಿದೆ’ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಹಾಪಕಾಮ್ಸ್ ಉಪಾಧ್ಯಕ್ಷೆ ಶ್ರುತಿ ಕುಮಾರಸ್ವಾಮಿ, ನಿರ್ದೇಶಕ ವೈ.ಪಿ.ರಾಜೇಂದ್ರ ಪ್ರಸಾದ್, ಆರ್.ಪುರುಷೋತ್ತಮ, ಬಸವಶೆಟ್ಟಿ ಎಸ್., ಎಂ.ಪಿ.ನಿರಂಜನಮೂರ್ತಿ, ಪುಟ್ಟಸುಬ್ನಪ್ಪ, ಆರ್.ಜಯಲಕ್ಷ್ಮಿ, ರಾಜಮ್ಮ, ಪುಟ್ಟಅರಸು, ವ್ಯವಸ್ಥಾಪಕ ನಿರ್ದೇಶಕ ಜಿ.ಎಸ್‌.ರಾಜು, ಸಿಬ್ಬಂದಿ ಯತಿರಾಜು, ನವೀನ್, ಕೆ.ಎಚ್.ಎಫ್ ಪ್ರತಿನಿಧಿ ಲೋಕೇಶ್‌, ಸೂರ್ಯಕುಮಾರ್, ಸದಸ್ಯರಾದ ಮಹೇಶ್, ಬಿ.ಎಸ್.ಮಹದೇವಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT