ಚಿಕ್ಕಬಳ್ಳಾಪುರ: ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಕಿರುಕುಳಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಆಂಧ್ರಪ್ರದೇಶದ ಕಾಕಿನಾಡಿನ 19ರ ಯುವಕ ವಂಶಿ ಮಲ್ಲೇಶ್ ಸೈಕಲ್ ಯಾತ್ರೆ ಕೈಗೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ.

ಸೋಮವಾರ ವಂಶಿ ಅವರ ಈ ಸೈಕಲ್ ಯಾತ್ರೆ ಚಿಕ್ಕಬಳ್ಳಾಪುರ ಹಾದು ಆಂಧ್ರಪ್ರದೇಶದತ್ತ ಸಾಗಿತು. ಕಳೆದ ಫೆಬ್ರುವರಿಯಲ್ಲಿ ವಂಶಿ ಮಲ್ಲೇಶ್ ಈ ಸೈಕಲ್ ಯಾತ್ರೆ ಕೈಗೊಂಡಿದ್ದಾರೆ. ಅಲ್ಲಿಂದ ದೇಶದ ವಿವಿಧ ರಾಜ್ಯಗಳಲ್ಲಿ 9 ಸಾವಿರದಿಂದ 10 ಸಾವಿರ ಕಿ.ಮೀ ಸೈಕಲ್ ಯಾತ್ರೆ ನಡೆಸಿದ್ದಾರೆ.

‘ಚಿಕ್ಕವಯಸ್ಸಿನಲ್ಲಿಯೇ ವಿದ್ಯಾಭ್ಯಾಸ ಮೊಟಕುಗೊಳಿಸಿದೆ. ನಮ್ಮ ಸುತ್ತಲಿನ ಸಮಾಜದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿದ್ದ ದೌರ್ಜನ್ಯವು ಬೇಸರ ತರಿಸಿತು. ಮಹಿಳೆಯರ ಹಕ್ಕುಗಳ ರಕ್ಷಣೆ ಮತ್ತು ಅವರ ಪರವಾಗಿ ಕೆಲಸ ಮಾಡಬೇಕು ಎನಿಸಿತು. ಆ ಸಮಯದಲ್ಲಿ ಹೊಳೆದಿದ್ದೇ ಈ ಸೈಕಲ್ ಯಾತ್ರೆ ಎನ್ನುತ್ತಾರೆ ವಂಶಿ ಮಲ್ಲೇಶ್.

‘ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವ ಉದ್ದೇಶದಿಂದ ಜಾಗೃತಿ ಮೂಡಿಸಬೇಕಾಗಿದೆ. ಇದಕ್ಕಾಗಿ ಈ ಯಾತ್ರೆ. ದೇಶದ ಎಲ್ಲ ರಾಜ್ಯಗಳಲ್ಲಿಯೂ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ನಾನು ಹೋದ ಸ್ಥಳಗಳಲ್ಲಿ ಕೆಲವು ಕಡೆ ಸಾರ್ವಜನಿಕರಿಗೆ ಈ ಬಗ್ಗೆ ತಿಳಿವಳಿಕೆ ಮೂಡಿಸಿದೆ’ ಎಂದರು.

ನಿತ್ಯ ಸರಾಸರಿ 50 ಕಿ.ಮೀ ಸೈಕಲ್ ಯಾತ್ರೆ ಮಾಡುತ್ತೇನೆ. ಪೆಟ್ರೋಲ್ ಬಂಕ್ಗಳಲ್ಲಿ ಉಳಿಯುತ್ತಿದ್ದೆ. ಅಲ್ಲಿಗೆ ಬಂದವರು ನನ್ನ ನೋಡಿ ಏನು ಯಾತ್ರೆ ಮಾಡುತ್ತಿದ್ದೀರಿ ಎಂದು ಕೇಳುತ್ತಿದ್ದರು. ಅವರೇ ಊಟ, ತಿಂಡಿಯನ್ನು ಸಹ ಕೊಡಿಸುತ್ತಿದ್ದರು ಎಂದರು.

ಚಿಕ್ಕಬಳ್ಳಾಪುರದ ಜನರು ಸಹ ಉತ್ತಮವಾಗಿ ಸ್ಪಂದಿಸಿದರು. ನನ್ನ ಬಗ್ಗೆ ಮಾಹಿತಿ ತಿಳಿದರು. ಕೈಲಾದ ನೆರವು ನೀಡಿದರು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.