ಪೆರೇಸಂದ್ರ (ಚಿಕ್ಕಬಳ್ಳಾಪುರ): ತಾಲ್ಲೂಕಿನ ಪೆರೇಸಂದ್ರದಲ್ಲಿರುವ ಬಾಗೇಪಲ್ಲಿ ಠಾಣೆ ಎಎಸ್ಐ ನಾರಾಯಣಸ್ವಾಮಿ ಅವರ ಮನೆಗೆ ಬುಧವಾರ ರಾತ್ರಿ ನುಗ್ಗಿರುವ ನಾಲ್ಕು ಮಂದಿ ದುಷ್ಕರ್ಮಿಗಳು ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ.

ದರೋಡೆ ತಡೆಯಲು ಮುಂದಾಗ ಎಎಸ್ಐ ಪುತ್ರ ಶರತ್ ಅವರ ಮೇಲೆ ಗುಂಡು ಹಾರಿಸಿದ್ದು ಅವರ ಸೊಂಟಕ್ಕೆ ಗುಂಡು ತಗುಲಿದೆ. ಶರತ್ ಅವರನ್ನು ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾರಾಯಣಸ್ವಾಮಿ ಕೆಲಸ ಮುಗಿಸಿ ರಾತ್ರಿ 9 ಸುಮಾರಿನಲ್ಲಿ ಪೆರೇಸಂದ್ರ ಕ್ರಾಸ್ಗೆ ಬಂದಿದ್ದಾರೆ. ಅವರ ಪುತ್ರ ಶರತ್, ನಾರಾಯಣಸ್ವಾಮಿ ಅವರನ್ನು ಕರೆ ತರಲು ಹೋಗಿದ್ದಾರೆ. ಈ ವೇಳೆ ನಾಲ್ಕು ಮಂದಿ ಅಪರಿಚಿತರು ನಾರಾಯಣಸ್ವಾಮಿ ಅವರ ಮನೆಗೆ ನುಗ್ಗಿದ್ದಾರೆ. ಈ ವೇಳೆ ಮನೆಯಲ್ಲಿ ನಾರಾಯಣಸ್ವಾಮಿ ಅವರ ಪತ್ನಿ ಮತ್ತು ಸೊಸೆ ಇದ್ದರು. ನಗದು ಮತ್ತು ಚಿನ್ನಾಭರಣವನ್ನು ದುಷ್ಕರ್ಮಿಗಳು ದೋಚಿದ್ದಾರೆ.

ನಾರಾಯಣಸ್ವಾಮಿ ಮತ್ತು ಶರತ್ ಮನೆಯ ಬಳಿ ಬಂದಿದ್ದು ದುಷ್ಕರ್ಮಿಗಳು ಪರಾರಿ ಆಗುವ ಯತ್ನದಲ್ಲಿ ಶರತ್ ಮೇಲೆ ಗುಂಡು ಹಾರಿಸಿದ್ದಾರೆ.

ದರೋಡೆಕೋರರು ಬ್ರಿಜ್ಜಾ ಕಾರಿನಲ್ಲಿ ಬಂದಿದ್ದರು. 20ರಿಂದ 25 ವರ್ಷದ ಒಳಗಿನವರಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.