ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಬಳ್ಳಾಪುರ: ಗಮನ ಸೆಳೆಯುತ್ತಿದೆ ಪೊಲೀಸರ ಪೋಸ್ಟರ್ ಅಭಿಯಾನ

ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದಲೇ ಗ್ರೂಪ್‌ಗಳಿಗೆ ಪೋಸ್ಟರ್ ಹಂಚಿಕೆ
Published : 21 ಅಕ್ಟೋಬರ್ 2024, 7:13 IST
Last Updated : 21 ಅಕ್ಟೋಬರ್ 2024, 7:13 IST
ಫಾಲೋ ಮಾಡಿ
Comments
...
...
...
...
...
...
‘ಕಡಿಮೆಯಾದ ಸೈಬರ್ ಅಪರಾಧ’
ನಮಗೂ ವಿಡಿಯೊ ಮತ್ತು ಪೋಸ್ಟರ್‌ಗಳನ್ನು ಕಳುಹಿಸಿ ನಮ್ಮ ಗ್ರೂಪ್‌ಗಳಲ್ಲಿ ಹಂಚಿಕೊಳ್ಳುತ್ತೇವೆ ಎಂದು ಹಲವರು ನಮ್ಮನ್ನು ಕೋರುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳ ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿಯೂ ಹಂಚಿಕೆ ಆಗುತ್ತಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ‘ಪ್ರಜಾವಾಣಿ’ಗೆ ತಿಳಿಸಿದರು. ಸಾಮಾಜಿಕ ಮಾಧ್ಯಮಗಳು ಜನರನ್ನು ತಲುಪುವ ಉತ್ತಮ ಮಾರ್ಗಗಳು. ಎಲ್ಲರ ಬಳಿಯೂ ಮೊಬೈಲ್‌ಗಳಿವೆ. ಬಹಳಷ್ಟು ಜನರು ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಾರೆ. ಆದ್ದರಿಂದ ಇಂತಹ ಜಾಗೃತಿ ಅಭಿಯಾನ ನಡೆಸುತ್ತಿದ್ದೇವೆ ಎಂದು ಹೇಳಿದರು. ಸೈಬರ್ ಅಪರಾಧ ಪ್ರಕರಣಗಳು ಹೆಚ್ಚು ದಾಖಲಾಗುತ್ತಿತ್ತು. ಪರಿಣಾಮಕಾರಿಯಾಗಿ ಜಾಗೃತಿ ನಡೆಸಿದ ಪರಿಣಾಮ ಸೈಬರ್ ಅಪರಾಧಗಳು ಕಡಿಮೆ ಆಗಿವೆ. ಅಪರಾಧ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ. ಪೊಲೀಸರ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಬೇಕು ಎಂದರು.
ಎಚ್ಚರಿಕೆ ಸಂದೇಶ
ರಾಜ್ಯದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸುಳ್ಳು ಸುದ್ದಿಗಳು ಜಾಲತಾಣಗಳಲ್ಲಿ ಪ್ರವಹಿಸಿದ್ದವು. ಇದು ತೀವ್ರವಾದ ಚರ್ಚೆಗೆ ಕಾರಣವಾಗಿ ಪ್ರಕರಣಗಳೂ ದಾಖಲಾದವು. ತಕ್ಷಣವೇ ಜಿಲ್ಲಾ ಪೊಲೀಸ್ ಇಲಾಖೆಯು ಪೋಸ್ಟರ್ ಅಭಿಯಾನದ ಮೂಲಕ ಎಚ್ಚರಿಕೆಯ ಸಂದೇಶ ನೀಡಿತು.  ದೇಶದ ಸಾರ್ವಭೌತಮತ್ವ ಮತ್ತು ಭದ್ರತೆಗೆ ಧಕ್ಕೆ ತರುವ ನಕಲಿ ಸುದ್ದಿ ಅಥವಾ ತಪ್ಪು ಮಾಹಿತಿಗಳನ್ನು ಹರಡುವವರಿಗೆ ಸೆಕ್ಷನ್ 195ರ ಅಡಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಇಲ್ಲವೆ ಎರಡನ್ನೂ ವಿಧಿಸಬಹುದು ಎಂದು ಎಚ್ಚರಿಕೆಯ ಪೋಸ್ಟರ್ ಅನ್ನು ಪೊಲೀಸರು ಹರಿಬಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT