ಚಿಂತಾಮಣಿ: ತಾಲ್ಲೂಕಿನ ಅನುಪ್ಪಲ್ಲಿ ಗ್ರಾಮದ ಪ್ರಗತಿಪರ ರೈತ ಎ.ಸಿ. ಶಿವಾರೆಡ್ಡಿ ಅವರು 2024ನೇ ಸಾಲಿನ ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ (ಜಿಕೆವಿಕೆ) ಇತ್ತೀಚೆಗೆ ನಡೆದ ಕೃಷಿ ಮೇಳದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಶಿವಾರೆಡ್ಡಿ ತಮ್ಮ ಏಳು ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಅಳವಡಿಸಿಕೊಂಡು ಸ್ವಾವಲಂಬಿ ರೈತರಾಗಿದ್ದಾರೆ. ಸುಧಾರಿತ ಬೇಸಾಯ ಕ್ರಮಗಳನ್ನು ಅನುಸರಿಸಿ ಭತ್ತ, ರಾಗಿ, ಮುಸುಕಿನ ಜೋಳ, ತೊಗರಿ, ಸ್ವೀಟ್ ಕಾರ್ನ್, ನೆಲಗಡಲೆ ಬೆಳೆಯುತ್ತಿದ್ದಾರೆ. ತರಕಾರಿ ಬೆಳೆಗಳಾದ ಬೀಟ್ ರೂಟ್, ಕ್ಯಾರೆಟ್, ಕುಂಬಳಕಾಯಿ, ಎಲೆಕೋಸು, ಹೂಕೋಸು, ಈರುಳ್ಳಿ, ಟೊಮೆಟೊ, ಕೊತ್ತಂಬರಿ ಹಾಗೂ ಗುಲಾಬಿ ಬೆಳೆದು ಉತ್ತಮ ಬದುಕು ಕಟ್ಟಿಕೊಂಡಿದ್ದಾರೆ. ಅರಣ್ಯ ಬೆಳೆಗಳಾದ ಹಬ್ಬೇವು, ಸಿಲ್ವರ್ ಓಕ್ ಮರಗಳನ್ನು ಬೆಳೆಸಿದ್ದಾರೆ.

ಪಶುಸಂಗೋಪನೆಯಲ್ಲಿ ಮಿಶ್ರತಳಿ ಹಸು, ಎಮ್ಮೆ ಸಾಕಣೆ ಮಾಡಿ ಹೈನುಗಾರಿಕೆಯನ್ನು ಲಾಭದಾಯಕವಾಗಿಸಿಕೊಂಡಿದ್ದಾರೆ. ಅವುಗಳಿಗೆ ಅಗತ್ಯವಾದ ಸೀಮೆ ಹುಲ್ಲು, ಮೆಕ್ಕೆ ಜೋಳ, ಸಬಾಬುಲ್ ಬೆಳೆಯುತ್ತಾರೆ. ಕುರಿ, ಮೇಕೆ, ಕೋಳಿ ಸಾಕಣೆ ಮಾಡಿದ್ದಾರೆ. ವೈಜ್ಞಾನಿಕ ಕೃಷಿ ಮಾಡಲು ಮಣ್ಣು ಮತ್ತು ನೀರು ಪರೀಕ್ಷೆ ಮಾಡಿಸಿ ಅಗತ್ಯಕ್ಕೆ ಅನುಸಾರವಾಗಿ ಸಾವಯವ ಮತ್ತು ಜೈವಿಕ ಗೊಬ್ಬರ ನೀಡಿ ಮಣ್ಣಿನ ಫಲವತ್ತತೆ ಕಾಪಾಡುತ್ತಿದ್ದಾರೆ. ಹನಿ ನೀರಾವರಿ ಮತ್ತು ತುಂತರು ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಸಾವಯವ ಕೃಷಿಗೆ ಒತ್ತು ನೀಡಲು ಹಸಿರೆಲೆ ಗೊಬ್ಬರ, ಎರೆಹುಳು ಗೊಬ್ಬರ, ಕಾಂಪೋಸ್ಟ್ ಗೊಬ್ಬರ, ಜೀವಾಮೃತ, ಪಂಚಗವ್ಯ, ವೇಸ್ಟ್ ಡಿಕಾಂಪೋಸರ್ ಮೊದಲಾದ ದ್ರವ ರೂಪದ ಗೊಬ್ಬರ ಬಳಕೆ ಮಾಡುತ್ತಿದ್ದಾರೆ.

ಕೀಟ ಮತ್ತು ರೋಗ ನಿರ್ವಹಣೆಗಾಗಿ ಬೇವಿನ ಎಣ್ಣೆ, ಮೋಹಕ ಬಲೆ, ಅಂಟುಪಟ್ಟಿಗಳು ಹಾಗೂ ಅಗತ್ಯತೆಗೆ ಅನುಗತುಣವಾಗಿ ಕನಿಷ್ಠ ಪ್ರಮಾಣದ ರಾಸಾಯನಿಕ ಬಳಸುತ್ತಿದ್ದಾರೆ. ವಿಜ್ಞಾನಿಗಳು ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಜತೆ ಉತ್ತಮ ಸಂಪರ್ಕ ಹೊಂದಿದ್ದು, ಇಲಾಖೆಗಳ ತರಬೇತಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮ ಅನುಭವಗಳನ್ನು ರೈತರೊಂದಿಗೆ ಹಂಚಿಕೊಳ್ಳುತ್ತಾರೆ.

2020–21ರಲ್ಲಿ ತೊಗರಿಯಲ್ಲಿ ಹೆಚ್ಚಿನ ಇಳುವರಿ ಪಡೆದು ಕೃಷಿ ಇಲಾಖೆಯಿಂದ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ, 2024 ರಲ್ಲಿ ಕೆಂಪೇಗೌಡ ಕೃಷಿಕ ಪ್ರಶಸ್ತಿ ಪಡೆದು, ಪ್ರಗತಿಪರ ರೈತರಾಗಿದ್ದಾರೆ. ಅವರ ಪ್ರಗತಿಪರ ಕೃಷಿಯನ್ನು ಗುರುತಿಸಿ 2024ನೇ ಸಾಲಿನ ಜಿಲ್ಲ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ ನೀಡಲಾಗಿದೆ ಎಂದು ಪ್ರಶಸ್ತಿ ಪತ್ರದಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.