‘ತಾಲ್ಲೂಕಿನ ಶ್ರೀನಿವಾಸಪುರ(ಸಾಕೋಳ್ಳಪಲ್ಲಿ) ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಮಳೆಯ ನೀರು ಪಾಯದ ಮೂಲಕ ಹಾಗೂ ಮೇಲೆ ಸಂಗ್ರಹ ಆಗಿ ನೀರು ಸೋರುತ್ತಿದೆ. ಸಂಬಂಧಪಟ್ಟ ಎಂಜಿನಿಯರ್ ಜೊತೆ ಚರ್ಚಿಸಿ ಸುವ್ಯವಸ್ಥಿತ ಕಟ್ಟಡ ನಿರ್ಮಿಸಲಾಗುವುದು’ ಎಂದು ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿ ತನುಜಾ ತಿಳಿಸಿದರು.
ಶಾಲಾ ಕಟ್ಟಡ ಶಿಥಿಲಾವಸ್ಥೆ ತಲುಪಿ ಆರು ವರ್ಷ ಕಳೆದಿದೆ. ಇದರಿಂದ ಶಾಲಾ ಮಕ್ಕಳಿಗೆ ಪಾಠ ಕೇಳಲು ತೊಂದರೆ ಆಗಿದೆ.ಕೂಡಲೇ ಶಾಲಾ ಕಟ್ಟಡವನ್ನು ನವೀಕರಣ ಮಾಡಬೇಕು
ಗೋಪಾಲಕೃಷ್ಣ, ಸ್ಥಳೀಯ
ಮಳೆಗಾಲದೊಂದಿಗೆ ಶಾಲೆಗಳು ಆರಂಭವಾಗುತ್ತಿವೆ. ಮಕ್ಕಳಿಗೆ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಬೇಕು. ಸರ್ಕಾರ ಕೂಡಲೇ ನೂತನ ಕಟ್ಟಡ ನಿರ್ಮಿಸಬೇಕು