ಬಾಗೇಪಲ್ಲಿ: ಮಹಿಳೆಯರು ಹಾಗೂ ರೈತರ ಆರ್ಥಿಕ ಸಬಲಿಕರಣಕ್ಕೆ ಡಿಸಿಸಿ ಬ್ಯಾಂಕ್ನ ಕೇಂದ್ರ ಕಚೇರಿಯಿಂದ ವಿತರಣೆ ಮಾಡುತ್ತಿದ್ದ ಬಡ್ಡಿರಹಿತ ಸಾಲ ಸೌಲಭ್ಯ ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ಮೈಕ್ರೊ ಫೈನಾನ್ಸ್ ಮೀಟರ್ ಬಡ್ಡಿ ದಂಧೆಕೋರರು ಬಡಜನರ ರಕ್ತ ಹೀರುತ್ತಿದ್ದಾರೆ ಎಂಬ ಆರೋಪವೂ ಇದೆ. ಸಂಬಂಧಪಟ್ಟ ಪೊಲೀಸ್ ಇಲಾಖೆ ಜಾಣ ಮೌನ ವಹಿಸಿದೆ ಎಂದು ದೂರಲಾಗಿದೆ.

ಡಿಸಿಸಿ ಬ್ಯಾಂಕ್ನಿಂದ ಪಡೆದ ಸಾಲ ಸೌಲಭ್ಯ ಮಹಿಳೆಯರು, ರೈತರಿಗೆ ವರದಾನ ಆಗಿದೆ. ಸೀಮೆ ಹಸು, ಕುರಿ, ಮೇಕೆ, ಹಂದಿ ಸಾಗಾಣಿಕೆ, ಹೈನುಗಾರಿಕೆ, ಹೊಲಿಗೆ ಯಂತ್ರ ಖರೀದಿ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಹಾಗೂ ಗೃಹೋಪಯೋಗಿ ಕೆಲಸಗಳಿಗೆ ಸಾಲದ ಹಣ ಬಳಕೆ ಮಾಡುತ್ತಿದ್ದರು. ಮಕ್ಕಳ ವಿದ್ಯಾಭ್ಯಾಸ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಕೂಲ ಆಗಿತ್ತು.

ರೈತರಿಗೆ ವಿತರಿಸಿದ ಕೆಸಿಸಿ ಸಾಲದಲ್ಲಿ ಹಸು, ಕುರಿ ಶೆಡ್, ಸೀಮೆಹಸು ಖರೀದಿ ಮಾಡಿ ಜೀವನ ಕಟ್ಟಿಕೊಂಡಿದ್ದಾರೆ. ಆದರೆ, ಇದೀಗ ಡಿಸಿಸಿ ಬ್ಯಾಂಕ್ ಸಾಲ ಸೌಲಭ್ಯ ನಿಲ್ಲಿಸಲಾಗಿದೆ. ಇದು ರೈತರಿಗೆ ಸಂಕಷ್ಟ ತಂದಿದೆ.

ಡಿಸಿಸಿ ಬ್ಯಾಂಕ್ನ ಕೇಂದ್ರ ಕಚೇರಿಯಲ್ಲಿ ಇದೀಗ ಆಡಳಿತ ಮಂಡಳಿ ಇಲ್ಲ. ಇದರಿಂದ ಬಡ್ಡಿರಹಿತ ಸಾಲ ಸೌಲಭ್ಯ ನಿಲ್ಲಿಸಲಾಗಿದೆ. ಮಹಿಳೆಯರು, ರೈತರಿಗೆ ಬಡ್ಡಿರಹಿತ ಸಾಲ ಸಿಗದೆ ಅತಂತ್ರ ಪರಿಸ್ಥಿತಿಯಲ್ಲಿ ಇದ್ದಾರೆ. ಕೃಷಿ ಕೂಲಿಕಾರ್ಮಿಕರು ಮನೆ, ಇಟ್ಟಿಗೆ, ಮರಗೆಲಸ, ಸಿಮೆಂಟ್ ಕೆಲಸ, ಕೃಷಿ ಹಾಗೂ ತರಕಾರಿ ಬಿಡಿಸುವುದು, ಸ್ವಚ್ಛ ಮಾಡುವುದು, ವಿವಿಧ ಕೆಲಸಗಳಿಗೆ ಹೋಗುತ್ತಿದ್ದಾರೆ. ಕೂಲಿ ಹಣದಲ್ಲಿ ಜೀವನ ಸಾಗಿಸುವಂತೆ ಆಗಿದೆ.

ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಆಂಧ್ರಪ್ರದೇಶದ ಮೈಕ್ರೊ ಫೈನಾನ್ಸ್ನವರು ಪಟ್ಟಣಕ್ಕೆ ಲಗ್ಗೆ ಇಟ್ಟಿದ್ದಾರೆ. ಬಡಜನರಿಗೆ ಸಾಲ ನೀಡುವ ನೆಪದಲ್ಲಿ ಹೆಚ್ಚುವರಿ ಬಡ್ಡಿ ವಸೂಲಿ ಮಾಡುತ್ತಿದ್ದಾರೆ. ಕೆಲವರು ಲಕ್ಷಾಂತರ ಹಣ ಜನರಿಗೆ ವಿತರಿಸಿ, ಬಡ್ಡಿ ರೂಪದಲ್ಲಿ ಸಾಲ ನೀಡಿದ್ದಾರೆ. ಬಡ್ಡಿ ಹಣ ಇಟ್ಟುಕೊಂಡು ಉಳಿದ ಹಣ ನೀಡುತ್ತಾರೆ. ಕೆಲ ಮೈಕ್ರೊ ಫೈನಾನ್ಸ್ನವರು ಪ್ರತಿದಿನ ಸಂಜೆ ವಸೂಲಿ ಮಾಡಿದರೆ, ಕೆಲವರು ವಾರಕ್ಕೊಮ್ಮೆ ವಸೂಲಿ ಮಾಡುತ್ತಿದ್ದಾರೆ.

ಹೂವು, ಹಣ್ಣು, ತರಕಾರಿ ಸೇರಿದಂತೆ ತಳ್ಳುವ ಗಾಡಿಗಳ ವ್ಯಾಪಾರಸ್ಥರು, ಬಡತನ ರೇಖೆಗಿಂತ ಕಡಿಮೆ ಇರುವವರು, ಕೂಲಿಕಾರ್ಮಿಕರ ಕುಟುಂಬಗಳ ನಿರ್ವಹಣೆಗೆ ಸಣ್ಣ ಪುಟ್ಟ ವ್ಯಾಪಾರಕ್ಕೆ, ಮಕ್ಕಳ ವಿದ್ಯಾಭ್ಯಾಸಕ್ಕೆ, ಪೋಷಕರ ಆಸ್ಪತ್ರೆ ಖರ್ಚಿಗಾಗಿ ಹಣ ಪಡೆದವರಿಗೆ ತೀವ್ರ ತೊಂದರೆ ಆಗಿದೆ. ಸಾಲ ಹಾಗೂ ಬಡ್ಡಿ ಹಣ ತೀರಿಸಲಾಗದೆ ಪರಿತಪಿಸುತ್ತಿದ್ದಾರೆ.

ತಳ್ಳುವ ಗಾಡಿಗಳಲ್ಲಿ ವ್ಯಾಪಾರ ಆಗದೆ ಕೂಲಿ ಕೆಲಸ ಹಣ ಸಿಗದೇ ಇರುವವರ ಪರಿಸ್ಥಿತಿ ಹೇಳತೀರದಾಗಿದೆ. ಒಂದು ವಾರ ತಪ್ಪಿದರೆ, ಮೈಕ್ರೊ ಫೈನಾನ್ಸ್ನವರು ಸಾಲದ ಹಾಗೂ ಬಡ್ಡಿ ಹಣ ವಸೂಲಿ ಮಾಡಲು ಮನೆಗಳ ಮುಂದೆ ಬರುತ್ತಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ ಎನ್ನುವುದು ಸ್ಥಳೀಯರ ಆರೋಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.