ಚಿಕ್ಕಮಗಳೂರು: ಶೃಂಗೇರಿ ಬಳಿಯ ಪ್ರದೇಶಗಳಿಗೆ ನಕ್ಸಲರು ಭೇಟಿ ನೀಡಿರುವ ಮಾಹಿತಿ ಆಧರಿಸಿ ನಕ್ಸಲ್ ನಿಗ್ರಹ ಪಡೆ(ಎಎನ್ಎಫ್) ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶೃಂಗೇರಿ ಮತ್ತು ಕೊಪ್ಪ ತಾಲ್ಲೂಕಿನಲ್ಲಿ ನಕ್ಸಲರು ಓಡಾಡಿರುವ ಮಾಹಿತಿ ಆಧರಿಸಿ ಎರಡೂ ತಾಲ್ಲೂಕಿನ ಹಲವೆಡೆ ಕೂಂಬಿಂಗ್ ಕಾರ್ಯಾಚರಣೆ ಆರಂಭವಾಗಿದೆ. ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭವಾಗಿದೆ. ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಕೂಡ ಶೃಂಗೇರಿಯಲ್ಲಿ ಮೊಕ್ಕಾಂ ಹೂಡಿದ್ದಾರೆ.

ದೇವಾಲೆಕೊಪ್ಪ, ಕಿಗ್ಗಾ, ಕೆರೆಕಟ್ಟೆಯಲ್ಲಿ ಎಎನ್ಎಫ್ ಕ್ಯಾಂಪ್ಗಳಿದ್ದು, ಮೂರು ಕಡೆಯೂ ಕೂಂಬಿಂಗ್ ಕಾರ್ಯಾಚರಣೆ ಆರಂಭವಾಗಿದೆ. ಕೊಪ್ಪ ತಾಲ್ಲೂಕಿನ ಯಡಗುಂದ, ಮುಂಡಗಾರು, ಬುಕಡಿಬೈಲ್ ಮತ್ತು ಶೃಂಗೇರಿ ತಾಲ್ಲೂಕಿನ ಕೆರೆಕಟ್ಟೆ ಸುತ್ತಮುತ್ತ ಹಳ್ಳಿಗಳಾದ ಶೀರ್ಲು, ಹಾದಿ, ಮಾತೊಳ್ಳಿ, ಉಡ್ತಾಳ್, ದ್ಯಾವಂಟ, ಕಡಕಲ್ ಮುಂತಾದೆಡೆ ಕಾರ್ಯಚರಣೆ ನಡೆಸುತ್ತಿದ್ದಾರೆ.

ಹೆದ್ದಾರಿಗಳಲ್ಲೂ ಚೆಕ್ಪೋಸ್ಟ್ಗಳನ್ನು ಅಳವಡಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಹೊರನಾಡು– ಮೆಣಸಿನಹಾಡ್ಯ ರಸ್ತೆಯ ವಿಘ್ನೇಶ್ವರಕಟ್ಟೆ, ಜಯಪುರ– ಶೃಂಗೇರಿ ನಡುವಿನ ಗಡಿಕಲ್ಲು, ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕೆರೆಕಟ್ಟೆ ಬಳಿ ಚೆಕ್ಪೋಸ್ಟ್ ಅಳವಡಿಸಲಾಗಿದೆ.

ಭಾನುವಾರ ರಾತ್ರಿಯಿಂದಲೇ ಕಾರ್ಯಚರಣೆ ಆರಂಭವಾಗಿದ್ದು, ಎಎನ್ಎಫ್ ತಂಡ ಹಲವು ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇದು ಮಲೆನಾಡಿನಲ್ಲಿ ಮತ್ತೆ ಭಯದ ವಾತಾವರಣ ಸೃಷ್ಟಿಸಿದೆ.

ನಕ್ಸಲರು ಬಂದು ಸ್ಥಳೀಯರನ್ನು ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎನ್ನಲಾದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಅವರ ಮಾಹಿತಿ ಆಧರಿಸಿಯೇ ಕೂಂಬಿಂಗ್ ನಡೆಯುತ್ತಿದೆ. ನಾಡ ಬಂದೂಕೊಂದನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ಹೇಳಿವೆ.

‘ನಕ್ಸಲರು ಸಂಚರಿಸಿರುವ ಮಾಹಿತಿ ಆಧರಿಸಿ ಕೂಂಬಿಂಕ್ ಕಾರ್ಯಾಚರಣೆ ನಡೆಯುತ್ತಿದೆ. ಕೆಲವು ಶಸ್ತ್ರಾಸ್ತ್ರಗಳು ಕೂಡ ದೊರೆತಿವೆ. ಕೂಂಬಿಂಗ್ನಲ್ಲಿ ಇರುವ ತಂಡ ಕಾಡಿನಿಂದ ವಾಪಸ್ ಬಂದ ಬಳಿಕ ಹೆಚ್ಚಿನ ಮಾಹಿತಿ ದೊರಕಲಿದೆ’ ಎಂದು ಐಜಿಪಿ ಅಮಿತ್ ಸಿಂಗ್ ಸ್ಪಷ್ಟಪಡಿಸಿದರು.

ಮಲೆನಾಡಿನಲ್ಲಿ ಮನೆ ಮಾಡಿದ ಆತಂಕ

ಹಲವು ವರ್ಷಗಳಿಂದ ತಣ್ಣಗಿದ್ದ ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆ ಮತ್ತೆ ಕಾಣಿಸಿಕೊಂಡಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ.

ಸಾಕೇತ್ ರಾಜನ್ ಎನ್ಕೌಂಟರ್ ಬಳಿಕ ನಕ್ಸಲ್ ಚಟುವಟಿಕೆ ಕೊಂಚ ಕಡಿಮೆಯಾಗಿತ್ತು. 2007ರ ಏಪ್ರಿಲ್ 10ರಂದು ವಡೆಯರಮಠ ಗ್ರಾಮದ ಮನೆಯೊಂದರಲ್ಲಿ ಒಬ್ಬರು ನಕ್ಸಲರು ಸೇರಿ ಮೂವರ ಎನ್ಕೌಂಟರ್ ಆಗಿತ್ತು. ಬಳಿಕ ನಕ್ಸಲ್ ಚಟುವಟಿಕೆ ಜಿಲ್ಲೆಯಲ್ಲಿ ಸಂಪೂರ್ಣ ಕಡಿಮೆಯಾಗಿತ್ತು. 14 ವರ್ಷಗಳ ಬಳಿಕ ಈಗ ಮತ್ತೆ ನಕ್ಸಲರು ಕಾಣಿಸಿಕೊಂಡಿದ್ದಾರೆ. ಅರಣ್ಯ ಒತ್ತುವರಿ ತೆರವಿನ ವಿರುದ್ಧ ಜನ ಆಕ್ರೋಶಿತರಾಗಿದ್ದು, ಈ ವೇಳೆ ನಕ್ಸಲರು ಓಡಾಡುತ್ತಿರುವುದು ಮಲೆನಾಡಿನಲ್ಲಿ ಆತಂಕ ಹೆಚ್ಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.