ನರಸಿಂಹರಾಜಪುರ: ಮಕ್ಕಳಿಗೆ ಬಿಸಿಯೂಟದ ಜತೆಗೆ ವಾರದಲ್ಲಿ ಎರಡು ದಿನ ನೀಡಲಾಗುತ್ತಿರುವ ಮೊಟ್ಟೆಯ ದರವು ಏರಿಕೆಯಾಗಿರುವುದು ಶಿಕ್ಷಕರಿಗೆ ಸಂಕಷ್ಟ ತಂದಿದೆ. ಪ್ರತಿ ಮೊಟ್ಟೆಗೆ ಸರ್ಕಾರ ನೀಡುವ ಹಣ ಹಾಗೂ ಮಾರುಕಟ್ಟೆ ಬೆಲೆಗೂ ವ್ಯತ್ಯಾಸ ಇರುವುದರಿಂದ, ದರ ಹೊಂದಿಸುವುದು ಮುಖ್ಯಶಿಕ್ಷಕರಿಗೆ ತಲೆನೋವಿನ ವಿಷಯವಾಗಿದೆ.

1ಮೊಟ್ಟೆ ಖರೀದಿಸಲು ₹5, ಮೊಟ್ಟೆ ಬೇಯಿಸಲು ಅಡುಗೆ ಅನಿಲ ವೆಚ್ಚಕ್ಕೆ 50ಪೈಸೆ, ಮೊಟ್ಟೆ ಸಿಪ್ಪೆ ತೆಗೆಯಲು 30ಪೈಸೆ, ಮೊಟ್ಟೆ ಸಾಗಾಣಿಕಾ ವೆಚ್ಚಕ್ಕೆ 20ಪೈಸೆ ಸೇರಿ 1ಮೊಟ್ಟೆಗೆ ₹6 ಸರ್ಕಾರ ನೀಡುತ್ತದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಹಣ ಜಮೆಯಾಗುತ್ತದೆ. ಮೊಟ್ಟೆ ತಿನ್ನದವರಿಗೆ ಅದೇ ಮೊತ್ತದಲ್ಲಿ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿ ನೀಡಬಹುದು.

ಕಳೆದ ಸೆಪ್ಟೆಂಬರ್ನಿಂದ ಅಜೀಂ ಪ್ರೇಮ್ ಜಿ ಫೌಂಡೇಷನ್ನಿಂದ ವಾರದ ಉಳಿದ 4 ದಿನವೂ ಮೊಟ್ಟೆ ನೀಡಲು ಪ್ರಾರಂಭಿಸಿದ್ದು, ಸದ್ಯ ಎಲ್ಲ ಸರ್ಕಾರಿ ಎಲ್ಕೆಜಿ, ಯುಕೆಜಿ , ಸರ್ಕಾರಿ/ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಯ ಮಕ್ಕಳಿಗೆ ಬಿಸಿಯೂಟದ ಜತೆಗೆ ಪ್ರತಿನಿತ್ಯ ಮೊಟ್ಟೆ ನೀಡಲಾಗುತ್ತಿದೆ. ವಾರದ 6 ದಿನವೂ ಮೊಟ್ಟೆ ನೀಡಲು ಶಾಲೆಗಳ ಖಾತೆಗೆ ಹಣ ಬರುತ್ತಿದೆ.

ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆ ಏರಿಳಿತವಾಗುತ್ತಿರುವುದರಿಂದ ಸರ್ಕಾರ ನಿಗದಿಪಡಿಸಿದ ₹5ರದರಲ್ಲಿ ಮೊಟ್ಟೆ ಖರೀದಿಸಲು ಸಾಧ್ಯವಾಗದೆ ಸಮಸ್ಯೆಯಾಗಿ ಪರಿಣಮಿಸಿದೆ. ಮೊಟ್ಟೆಗೆ ಹೆಚ್ಚುವರಿಯಾಗಿ ತಗುಲುವ ವೆಚ್ಚವನ್ನು ಹೇಗೆ ಮತ್ತು ಯಾರು ಭರಿಸಬೇಕು ಎಂಬುದು ಪ್ರಶ್ನೆಯಾಗಿದೆ ಎನ್ನುತ್ತಾರೆ ಶಾಲಾ ಮುಖ್ಯಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು.

ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಮೊಟ್ಟೆ ಧಾರಣೆ ವ್ಯತ್ಯಾಸವಾಗುತ್ತಿರುವುದರಿಂದ ಉಂಟಾಗಿರುವ ಸಮಸ್ಯೆ ಬಗ್ಗೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ಮೊಟ್ಟೆ ಖರೀದಿಗೆ ಶಾಲೆಗಳಿಗೆ ಹಣ ನೀಡುವುದಕ್ಕಿಂತ ಅಕ್ಕಿ, ಬೇಳೆ, ಅಡುಗೆಎಣ್ಣೆ,, ಗೋದಿ ಪೂರೈಸಿದಂತೆ ಯಾವುದಾರೂ ಸಗಟು ಮೊಟ್ಟೆ ಮಾರಾಟ ಮಾಡುವ ಏಜೆನ್ಸಿಯ ಮೂಲಕ ಶಾಲೆಗಳಿಗೆ ಪೂರೈಸಿದರೆ ಸಮಸ್ಯೆ ಪರಿಹಾರವಾಗುತ್ತದೆ. ಪ್ರಾಯೋಗಿಕವಾಗಿ ಚಿಕ್ಕಮಗಳೂರು ಜಿಲ್ಲೆ ಅಥವಾ ಶೃಂಗೇರಿ ಕ್ಷೇತ್ರಕ್ಕಾದರೂ ಖಾಸಗಿ ಏಜೆನ್ಸಿ ಮೂಲಕವಾಗಿ ಎಲ್ಲಾ ಶಾಲೆಗಳಿಗೂ ಮೊಟ್ಟೆ ಪೂರೈಸಲು ಕ್ರಮಕೈಗೊಳ್ಳಲಿ ಎಂದು ಬಿಸಿಯೂಟ ಮತ್ತು ಮೊಟ್ಟೆ ನೀಡುವ ವ್ಯವಸ್ಥೆ ನೋಡಿಕೊಳ್ಳುವ ಮುಖ್ಯಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಅಭಿಪ್ರಾಯಪಡುತ್ತಾರೆ.

ಸರ್ಕಾರ ಮೊಟ್ಟೆ ಖರೀದಿಗೆ ಒಂದು ಮೊಟ್ಟೆಗೆ ₹5ನೀಡುತ್ತಿದೆ. ಮಾರುಕಟ್ಟೆಯಲ್ಲಿ ಇದಕ್ಕಿಂತ ಹೆಚ್ಚಿನದರ ನಿಗಧಿಯಾಗುತ್ತಿದೆ. ಹಾಗಾಗಿ ಖಾಸಗಿ ಏಜೆನ್ಸಿಮೂಲಕ ಮೊಟ್ಟೆ ಪೂರೈಸಲು ಕ್ರಮಕೈಗೊಂಡರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ಶಾಸಕರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಂಜುಂಡಪ್ಪ ತಿಳಿಸಿದರು.

ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆವಿತರಿಸಲು ಸರ್ಕಾರ ನೀಡುತ್ತಿರುವ ಹಣ ಕಡಿಮೆಯಾಗುತ್ತಿರುವ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಪರ್ಯಾಯ ಮಾರ್ಗಕಂಡು ಕೊಂಡು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.

ಅಂಕಿ ಅಂಶಗಳು

*ತಾಲ್ಲೂಕಿನಲ್ಲಿ 5432 ಮೊಟ್ಟೆ ವಿತರಣೆ

*1ರಿಂದ10ನೇತರಗತಿಯ 94 ಶಾಲೆಗಳ 5241ಮಕ್ಕಳು

*ಎಲ್ ಕೆಜಿ, ಯುಕೆಜಿ, ಪ್ರಿನರ್ಸರಿಯ 101 ಮಕ್ಕಳು

*ತಾಲ್ಲೂಕಿನಲ್ಲಿ ಅತಿಹೆಚ್ಚು ಬಿಸಿಯೂಟ ನೀಡುತ್ತಿರುವುದು ಕೆಪಿಎಸ್ ಎನ್.ಆರ್,ಪುರ

ಎಲ್ ಕೆಜಿ, ಯುಕೆಜಿ, ಪ್ರಾಥಮಿಕಮತ್ತು ಪ್ರೌಢಶಾಲೆ ಸೇರಿ 631ಮಕ್ಕಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.