ಮಾರುಕಟ್ಟೆಗೆ ಬರಲು ಸಿದ್ದಗೊಂಡಿರುವ ಎತ್ತರದ ಗಣೇಶ ಮೂರ್ತಿಗಳು
ರಾಜ್ಯದಲ್ಲಿ ಮಳೆ ಕಡಿಮೆಯಾಗಿ ಬರಗಾಲದ ಛಾಯೆ ಆವರಿಸಿದೆ. ಕೆರೆಗಳಲ್ಲಿ ನೀರು ಇಲ್ಲವಾಗಿದೆ. ನಗರದಲ್ಲಿ ನಗರಸಭೆ ವತಿಯಿಂದ ಗಣೇಶ ಮೂರ್ತಿ ವಿಸರ್ಜನೆಗೆ ಕಲ್ಯಾಣಿ ನಿರ್ಮಿಸಿರುವುದು ಒಳ್ಳೇಯದು. ಪ್ರತಿಯೊಬ್ಬರು ಗಣೇಶೋತ್ಸವವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು.
– ಚೇತನ್ ಏಕಾಂತ ರಾಮು, ವಿಗ್ರಹ ಶಿಲ್ಪಿ
ಅಂಗಡಿಗಳಲ್ಲಿ ಖರೀದಿ ಜೋರು
ಹಬ್ಬದ ಹಿನ್ನೆಲೆ ಮಾರುಕಟ್ಟೆಯಲ್ಲಿ ಹೂ ಹಣ್ಣು ದರ ದುಬಾರಿಯಾಗುವ ಸಾಧ್ಯತೆ ಇದೆ. ಹಬ್ಬಕ್ಕೆ ಮುಂಚಿತವಾಗಿ ಗ್ರಾಹಕರು ಅಂಗಡಿಗಳಿಗೆ ತೆರಳಿ ಕುಟುಂಬದ ಸದಸ್ಯರಿಗೆ ಹೊಸಬಟ್ಟೆ ಖರೀದಿ ಹೆಣ್ಣುಮಕ್ಕಳಿಗೆ ಬಾಗಿನ ನೀಡಲು ಮೊರ ತೆಂಗಿನಕಾಯಿ ಮೊದಲಾದ ಸಾಮಾಗ್ರಿಗಳನ್ನು ಖರೀದಿ ಮಾಡುತ್ತಿರುವ ದೃಶಗಳು ನಗರದ ಮಾರುಕಟ್ಟೆಯಲ್ಲಿ ಕಂಡು ಬಂತು.