ಕಡೂರು: ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಗೊ.ರು.ಚೆನ್ನಬಸಪ್ಪ ಅವರಿಗೂ ಕಡೂರು ತಾಲ್ಲೂಕಿಗೂ ಅವಿನಾಭಾವ ಸಂಬಂಧವಿದೆ.

ಗೊರುಚ ಅವರ ಪತ್ನಿ ಮಲ್ಲಮ್ಮ ಗಿರಿಯಾಪುರದವರು.

ಗೊರುಚ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದದ್ದು ಕಡೂರು ತಾಲ್ಲೂಕಿನ ಹಡಗಲು ಮತ್ತು ಬೀರೂರಿನಲ್ಲಿ. ಪತ್ನಿ ಮಲ್ಲಮ್ಮ ಅವರ ಊರು ಗಿರಿಯಾಪುರ ಗೊರುಚ ಪಾಲಿಗೆ ತವರೂರಿನಂತೆಯೇ ಆಯಿತು. ಗಿರಿಯಾಪುರದ ಶಿವಾದ್ವೈತ ಪ್ರಸಾರ ಕೇಂದ್ರ ಪ್ರತಿವರ್ಷ ನಡೆಸುವ ಶಿವಾನುಭವ ಗೋಷ್ಠಿಯ ಮುಖ್ಯ ಪ್ರವರ್ತಕರು ಗೊರುಚ. 96ವರ್ಷ ವಯಸ್ಸಿನ ಇವರು, ಕಳೆದ ಏಳು ದಶಕಗಳಿಂದ ಕೇಂದ್ರದಲ್ಲಿ ಸಕ್ರಿಯರಾಗಿದ್ದಾರೆ.

ಹಿಂದೊಮ್ಮೆ ಮೈಸೂರು ಮಹಾರಾಜ ಜಯ ಚಾಮರಾಜೇಂದ್ರ ಒಡೆಯರ್ ಅವರನ್ನು ಶಿವಾನುಭವ ಗೋಷ್ಠಿಗೆ ಕರೆತಂದು ಗ್ರಾಮೀಣ ಜನರಿಗೂ ಮಹಾರಾಜರ ದರ್ಶನ ಮಾಡಿಸಿದ್ದರು ಎಂಬ ನೆನಪು ಗಿರಿಯಾಪುರದ ಹಿರಿತಲೆಗಳಲ್ಲಿದೆ. ತಾಲ್ಲೂಕಿನ ಚಟ್ನಳ್ಳಿಯಲ್ಲಿ 2000ರಲ್ಲಿ ನಡೆದ 5ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಚಿಕ್ಕಮಗಳೂರಿನ ಹಿರಿಯ ಸಾಂಸ್ಕೃತಿಕ ಚೇತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಜಿಲ್ಲೆಗೆ ಸಂದ ಗೌರವ ಎಂದು ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್ ಹರ್ಷ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.