ಚಿಕ್ಕಮಗಳೂರು: ನಿರಂತರ ಮಳೆಯಿಂದಾಗಿ ಜಯಪುರ–ಕೊಪ್ಪ ನಡುವಿನ ನಾರ್ವೆ ಬಳಿ ರಸ್ತೆ ಬದಿಯ ಮಣ್ಣು ಕುಸಿತವಾಗಿದ್ದು, ಸಂಪರ್ಕ ಕಡಿತಗೊಂಡಿದೆ.

ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಬದಿಯ ಮಣ್ಣು ಪ್ರಪಾತಕ್ಕೆ ಜರಿದಿದ್ದು, ರಸ್ತೆ ಕೂಡ ಕುಸಿಯುವ ಆತಂಕ ಇದೆ. ಆದ್ದರಿಂದ ಪೊಲೀಸರು ಎರಡೂ ಕಡೆ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರ ಸ್ಥಗಿತಗೊಳಿಸಿದ್ದಾರೆ.

ಚಿಕ್ಕಮಗಳೂರು– ಕೊಪ್ಪಕ್ಕೆ ಪೊಲೀಸರು ಬದಲಿ ಮಾರ್ಗಗಳನ್ನು ಸೂಚಿಸಿದ್ದಾರೆ. ನಾರ್ವೆ ವೃತ್ತದಿಂದ ನಾಗಲಾಪುರ ಮೂಲಕ ಕೊಪ್ಪಕ್ಕೆ ಪರ್ಯಾಯ ಮಾರ್ಗದಲ್ಲಿ ಸಂಚರಿಸಬಹುದು. ಕೊಪ್ಪದಿಂದ ಚಿಕ್ಕಮಗಳೂರು ಕಡೆಗೆ ಬರಲು ಅಂದಗಾರು ಮೂಲಕ ಕಲ್ಕೆರೆ ಮುಖ್ಯ ರಸ್ತೆ ಸಂಪರ್ಕಿಸಿ ಚಿಕ್ಕಮಗಳೂರು ತಲುಪಬಹುದು. ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.