ಚಿಕ್ಕಮಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನದ ಹೆಸರಿನಲ್ಲಿ ಕಾಡಂಚಿನ ಜನರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಶುರುವಾಗಿ ನಾಲ್ಕೈದು ದಶಕಗಳೇ ಕಳೆದಿವೆ. ಅತಂತ್ರ ಸ್ಥಿತಿಯ ನಡುವೆ ಕಾಡಿನ ಜನರ ಬದುಕು ಅಕ್ಷರಶಃ ಮೂರಾಬಟ್ಟೆಯಾಗಿದೆ. ಪುನರ್ವಸತಿಯೂ ಇಲ್ಲ, ನೆಮ್ಮದಿಯೂ ಇಲ್ಲ, ಉಳಿದದ್ದು ಬಂದೂಕಿನ ಸದ್ದು, ರಕ್ತದ ಕಲೆಗಳು ಮಾತ್ರ...

ಕುದುರೆಮುಖ ಸುತ್ತಮುತ್ತಲ ಗುಡ್ಡಗಳನ್ನು ಬ್ರಿಟಿಷ್ ಆಡಳಿತದ 1914ರಿಂದ 1916ರ ಅವಧಿಯಲ್ಲಿ ಮೀಸಲು ಅರಣ್ಯ ಮತ್ತು ಅಭಯಾರಣ್ಯ ಎಂದು ಘೋಷಣೆ ಮಾಡಲಾಗಿತ್ತು. ಅದು ಕಾಡಾಗಿಯೇ ಮುಂದುವರಿದಿತ್ತು. 1987ರಲ್ಲಿ ರಾಷ್ಟ್ರೀಯ ಉದ್ಯಾನ ಎಂದು ಘೋಷಣೆ ಮಾಡಲಾಯಿತು. ಘೋಷಿತ ಪ್ರದೇಶವಲ್ಲದೆ, ಗುಡ್ಡಗಳ ನಡುವೆ ಕಂದಾಯ ಜಾಗವನ್ನು ಪರಿಸರ ಸೂಕ್ಷ್ಮ ವಲಯ (ಇಎಸ್ಝೆಡ್) ಎಂದು ಗುರುತಿಸಿ ಅಲ್ಲಿನ ಗಿರಿಜನರನ್ನು ಒಕ್ಕಲೆಬ್ಬಿಸುವ ಕಾರ್ಯ ಆರಂಭವಾಯಿತು.

ಕಾಡಿನಿಂದ ಒಕ್ಕಲೆಬ್ಬಿಸುವ ವಿರುದ್ಧ ನಿರಂತರವಾಗಿ ಹೋರಾಟ ನಡೆದವು. ಪೊಲೀಸ್ ಮತ್ತು ಅರಣ್ಯ ಇಲಾಖೆ ಹಾಕುತ್ತಿದ್ದ ಮೊಕದ್ದಮೆಗಳಿಂದ ಬೇಸತ್ತು ಕೆಲವರು ಬಂದೂಕು ಹಿಡಿದು ನಕ್ಸಲ್ ಚಳವಳಿ ಸೇರಿಕೊಂಡರು. ಮಲೆನಾಡಿನ ಹಸಿರ ನೆಲದಲ್ಲಿ ರಕ್ತಸಿಕ್ತ ಕೆಂಪು ಹಾದಿಗೆ ಕುದುರೆಮುಖ ರಾಷ್ಟ್ರೀಯ ಉದ್ಯಾನ ಘೋಷಣೆ ಅಡಿಗಲ್ಲು ಹಾಕಿತು.

ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿರುವ ಯಾವುದೇ ಊರಿಗೆ ಹೋದರೂ ರಸ್ತೆಗಳಿಲ್ಲ, ವಿದ್ಯುತ್ ಸೌಕರ್ಯವಿಲ್ಲ, ಮೊಬೈಲ್ ದೂರವಾಣಿಗೆ ಸಂಪರ್ಕವಿಲ್ಲ. ಅತ್ತ ಪುನರ್ವಸತಿಯೂ ಇಲ್ಲ, ಇತ್ತ ಕಾಡಿನಲ್ಲಿ ಬದುಕುವ ಸ್ಥಿತಿಯೂ ಇಲ್ಲದಂತಾಗಿದೆ.

ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಯಲ್ಲಿ 600 ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ಇದೆ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳು ನೀಡುವ ಮಾಹಿತಿ. ಅದರೊಳಗಿನ ಕಂದಾಯ ಜಾಗದಲ್ಲಿರುವ ಮನೆಗಳಿಗೆ ಸಾಗಲು ರಾಷ್ಟ್ರೀಯ ಉದ್ಯಾನದ ಚೆಕ್ಪೋಸ್ಟ್ಗಳನ್ನು ದಾಟಿಕೊಂಡೇ ಹೋಗಬೇಕು. ಅಂತಹ 1300 ಕುಟುಂಬಗಳನ್ನು ಅರಣ್ಯ ಇಲಾಖೆ ಗುರುತಿಸಿದೆ. ಅವುಗಳ ಪೈಕಿ 650 ಕುಟುಂಬಗಳು ಸ್ವಇಚ್ಛೆಯಿಂದ ಹೊರಬರಲು ಒಪ್ಪಿದ್ದು, 350 ಕುಟುಂಬಗಳ ಸ್ಥಳಾಂತರವೂ ಆಗಿದೆ. ಇನ್ನೂ 300ಕ್ಕೂ ಹೆಚ್ಚು ಕುಟುಂಬಗಳು ಹೊರಬರಲು ಸಾಧ್ಯವಾಗಿಲ್ಲ. ಅದಕ್ಕೆ ಬೇಕಿರುವ ಪ್ರಕ್ರಿಯೆ ಮತ್ತು ಜಾಗ ಗುರುತಿಸುವ ಕೆಲಸ ಆಗಿಲ್ಲ. ಸ್ಥಳಾಂತರದ ಕನವರಿಕೆಯಲ್ಲೇ ಕಾಡಿನ ವಾಸ ಮುಂದುವರಿದಿದೆ.

ಸ್ವಯಂ ಸ್ಥಳಾಂತರಕ್ಕೆ ಒಪ್ಪದ ಕುಟುಂಬಗಳು 650ಕ್ಕೂ ಹೆಚ್ಚಿವೆ. ಅವುಗಳಲ್ಲಿ ಬಹುತೇಕ ಗಿರಿಜನರಿಗೆ ತಾವು ವಾಸವಿರುವ ಜಾಗದ ಹಕ್ಕುಪತ್ರವೂ ಇಲ್ಲ. ಅಲ್ಲಿಂದ ಹೊರಬಂದರೆ ಬರಿಗೈ ಆಗುವ ಅಂತಕ ಅವರದು.

‘1914–16ರ ಅವಧಿಯಲ್ಲಿ ಮೀಸಲು ಅರಣ್ಯ ಎಂದು ಗುರುತಿಸಿದ್ದು ಗುಡ್ಡಗಾಡು ಪ್ರದೇಶ ಮಾತ್ರ. ಅದೇ ಜಾಗವನ್ನು ಕುದುರೆಮುಖ ರಾಷ್ಟ್ರೀಯ ಉದ್ಯಾನ ಎಂದು ಆ ನಂತರ ಘೋಷಣೆ ಮಾಡಲಾಯಿತು. ಆ ಜಾಗದಲ್ಲಿ ಆಗಲೂ ಜನವಸತಿ ಇರಲಿಲ್ಲ, ಈಗಲೂ ಇಲ್ಲ. ಪರಿಸರ ಸೂಕ್ಷ್ಮ ವಲಯ ಎಂದು ಗುರುತಿಸಿರುವ ಕಂದಾಯ ಜಾಗದಲ್ಲಿ ಜನವಸತಿ ಇದೆ. ಕಂದಾಯ ಭೂಮಿಯಲ್ಲಿರುವ ಜನ ಸ್ವಇಚ್ಛೆಯಿಂದ ಪುನರ್ವಸತಿ ಕೋರಬೇಕು ಎನ್ನುವುದು ಎಷ್ಟುಸರಿ’ ಎಂಬುದು ಹೋರಾಟಗಾರ ಕಲ್ಕುಳಿ ವಿಠಲ ಹೆಗ್ಡೆ ಅವರ ಪ್ರಶ್ನೆ.

‘ರಾಷ್ಟ್ರೀಯ ಉದ್ಯಾನದ ಒಳಗೂ ಕಂದಾಯ ಜಾಗದಲ್ಲಿ ಜನವಸತಿ ಇದೆ. ಆ ಜಾಗವನ್ನು ಅರಣ್ಯ ಎಂದು ಘೋಷಿಸಿ ಸರ್ಕಾರವೇ ಅವರಿಗೆ ಪುನರ್ವಸತಿಗೆ ಕಲ್ಪಿಸಬಹುದು. ಆದರೆ, 2006ರ ಅರಣ್ಯ ಕಾಯ್ದೆ ಪ್ರಕಾರ ಕಾಡಿನಿಂದ ಹೊರಗೆ ಬಂದವರಿಗೆ 10 ಎಕರೆ ಜಾಗ ಸೇರಿ ಮೂರು–ನಾಲ್ಕು ಪಟ್ಟು ಹೆಚ್ಚಿನ ಪರಿಹಾರ ಕೊಡಬೇಕಾಗುತ್ತದೆ. ಜನರೇ ಸ್ವಇಚ್ಛೆಯಿಂದ ಅಲ್ಲಿಂದ ಖಾಲಿ ಮಾಡಿದರೆ ಕಡಿಮೆ ಪರಿಹಾರದಲ್ಲಿ ಜನರನ್ನು ಓಡಿಸಬಹುದು ಎಂಬುದು ಅರಣ್ಯ ಇಲಾಖೆಯ ಲೆಕ್ಕಾಚಾರ’ ಎನ್ನುತ್ತಾರೆ.

‘ಯಾವುದೇ ಮೂಲಸೌಕರ್ಯ ಕಲ್ಪಿಸದೆ ಅವರು ಸ್ವಯಂ ಪುನರ್ವಸತಿಗೆ ಅರ್ಜಿ ಸಲ್ಲಿಸುವಂತೆ ಮಾಡುವುದು ಅವರ ಆಲೋಚನೆ. ಆದಕ್ಕಾಗಿಯೇ ಮೂಲಸೌಕರ್ಯ ನೀಡದೆ ಅವರನ್ನು ರೋಸಿ ಹೋಗುವಂತೆ ಸರ್ಕಾರ ಮಾಡಿದೆ. ಕಂದಾಯ ಜಾಗದಲ್ಲೇ ಗೇಟ್ಗಳನ್ನು ನಿರ್ಮಿಸಿಕೊಂಡು ಒಳಗಿರುವ ಜಾಗವೆಲ್ಲಾ ತಮ್ಮದೇ ಎಂಬಂತೆ ಅರಣ್ಯ ಇಲಾಖೆ ನಡೆದುಕೊಳ್ಳುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಕೃಷಿ ಬಿಟ್ಟು ಕೂಲಿ ಜೀವನ

ಕಾಡಿನ ನಡುವೆ ಇರುವ ಜನ ಕೃಷಿ ಮಾಡಲು ಸಾಧ್ಯವಾಗದೆ ತಮ್ಮ ಜಮೀನು ಪಾಳುಬಿಟ್ಟಿದ್ದಾರೆ. ಜಮೀನು ಉಳಿಯುವುದಿಲ್ಲ ಎಂಬ ಆತಂಕ ಕೃಷಿ ಕೈಬಿಡುವಂತೆ ಮಾಡಿದೆ. ಕೃಷಿ ಮಾಡಿದರೂ ಕಾಡುಪ್ರಾಣಿಗಳಿಂದ ರಕ್ಷಣೆ ಮಾಡಿಕೊಳ್ಳುವುದು ಕಷ್ಟ. ಕೃಷಿ ಬಿಟ್ಟು ಹಲವರು ದೂರದೂರಿನ ಕಾಫಿತೋಟಗಳಲ್ಲಿ ಕೂಲಿ ಮಾಡುತ್ತಿದ್ದಾರೆ. ವಿದ್ಯುತ್ ಕಾಣದ ಹಳ್ಳಿಗಳು ಇಂದಿಗೂ ಇವೆ. ಚಿಮಿಣಿ ದೀಪದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಕುದುರೆಮುಖ ಟೌನ್ಶಿಪ್ಗೆ ಹೊಂದಿಕೊಂಡಂತೆ ಇರುವ ವಿನೋಭ ನಗರದ ಕಾರ್ಮಿಕರ ಮನೆಗಳಿಗೆ ವಿದ್ಯುತ್ ಕಲ್ಪಿಸಲು ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ. ಸೀಮೆಎಣ್ಣೆಯೂ ಸಿಗದೆ ಕತ್ತಲಿನಲ್ಲೇ ಜೀವನ ಸಾಗಿಸುತ್ತಿದ್ದಾರೆ.

ಅಂಕಿ–ಅಂಶ

ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿರುವ ಜನವಸತಿ

* ದಕ್ಷಿಣ ಕನ್ನಡ; 51

* ಚಿಕ್ಕಮಗಳೂರು; 30

* ಉಡುಪಿ; 27 ಒಟ್ಟು;108

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.