ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೆರೆ ಒತ್ತುವರಿ ವಿರುದ್ಧ ತೆರವು ಕಾರ್ಯಾಚರಣೆಯನ್ನು ಜಿಲ್ಲಾಡಳಿತ ಆರಂಭಿಸಿದೆ. ಒಟ್ಟು 1,729 ಕೆರೆಗಳ ಪೈಕಿ 760 ಕೆರೆಗಳ 1,241 ಎಕರೆ ಜಾಗ ಒತ್ತುವರಿಯಾಗಿದೆ ಎಂದು ಗುರುತಿಸಿದೆ.

ಕೆರೆಗಳ ಒತ್ತುವರಿ ಇತ್ತೀಚಿನ ವರ್ಷಗಳಲ್ಲಿ ವ್ಯಾಪಕವಾದ ಬಳಿಕ ತೆರವುಗೊಳಿಸಬೇಕು ಎಂಬ ಕೂಗು ಹಲವು ವರ್ಷಗಳಿಂದ ಇತ್ತು. ಅಳತೆ ಮಾಡದೆ ತೆರವುಗೊಳಿಸುವುದು ಕಷ್ಟ ಎಂಬ ಕಾರಣಕ್ಕೆ ಜಿಲ್ಲಾಡಳಿತ ಮೊದಲ ಹಂತದಲ್ಲಿ ಅಳತೆ ಕಾರ್ಯ ಆರಂಭಿಸಿ ಬಹುತೇಕ ಪೂರ್ಣಗೊಳಿಸಿದೆ.

1,729 ಕೆರೆಗಳ ಪೈಕಿ 1,727 ಕೆರೆಗಳ ಅಳತೆ ಕಾರ್ಯವನ್ನು ಭೂದಾಖಲೆಗಳ ಇಲಾಖೆ ಪೂರ್ಣಗೊಳಿಸಿದೆ. ಇನ್ನು ಎರಡು ಕೆರೆಗಳ ಅಳತೆ ಮಾತ್ರ ಬಾಕಿ ಇದೆ. ಈಗಾಗಲೇ ಅಳತೆಯಾಗಿರುವ ಕೆರೆಗಳ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಹಂತ–ಹಂತವಾಗಿ ಆರಂಭಿಸಿದೆ. 123 ಕೆರೆಗಳಲ್ಲಿ ಒತ್ತುವರಿಯಾಗಿರುವ 164 ಎಕರೆಯಷ್ಟು ಜಾಗವನ್ನು ತೆರವುಗೊಳಿಸಲಾಗಿದೆ.

ಚಿಕ್ಕಮಗಳೂರು, ಕಡೂರು ಮತ್ತು ತರೀಕೆರೆ ತಾಲ್ಲೂಕಿನಲ್ಲೇ ಅತೀ ಹೆಚ್ಚು ಕೆರೆಗಳಿದ್ದು, ಈ ಮೂರು ತಾಲ್ಲೂಕಿನಲ್ಲೇ ಹೆಚ್ಚು ಕೆರೆಗಳ ಒತ್ತುವರಿಯಾಗಿದೆ. ಚಿಕ್ಕಮಗಳೂರು ತಾಲ್ಲೂಕಿನ 344 ಕೆರೆಗಳ 262 ಎಕರೆ ಒತ್ತುವರಿಯಾಗಿದ್ದು, ತರೀಕೆರೆ ತಾಲ್ಲೂಕಿನ 106 ಕೆರೆಗಳ 191 ಎಕರೆ ಒತ್ತುವರಿಯಾಗಿದ್ದರೆ, ಕಡೂರು ತಾಲ್ಲೂಕಿನ 120 ಕೆರೆಗಳ 527 ಎಕರೆ ಒತ್ತುವರಿಯಾಗಿದೆ ಎಂದು ಜಿಲ್ಲಾಡಳಿತ ಗುರುತಿಸಿದೆ.

ಅತೀ ಕಡಿಮೆ ಎಂದರೆ ಕಳಸ ತಾಲ್ಲೂಕಿನಲ್ಲಿ ಎರಡೇ ಕೆರೆಗಳಿದ್ದು, ಎರಡೂ ಕೆರೆಗಳಲ್ಲಿ ಒತ್ತುವರಿಯಾಗಿವೆ. ಶೃಂಗೇರಿ ತಾಲ್ಲೂಕಿನಲ್ಲಿರುವ 16 ಕೆರೆಗಳ ಪೈಕಿ 8 ಕೆರೆಗಳಲ್ಲಿ ಒಂದು ಕೆರೆಯಷ್ಟು ಒತ್ತುವರಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.