ಕಡೂರು: ‘ನಾನವನಲ್ಲ ಅವಳು’ ಚಿತ್ರದಲ್ಲಿ ಅಮೋಘವಾಗಿ ನಟಿಸಿ ರಾಷ್ಟ್ರ ಪ್ರಶಸ್ತಿ ಪಡೆದ ನಂತರವೇ ಸಂಚಾರಿ ವಿಜಯ್ ಕಡೂರಿನವರು ಎಂಬ ವಿಚಾರ ಬಹುತೇಕ ಮಂದಿಗೆ ತಿಳಿದಿದ್ದು. ಉನ್ನತ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಕನ್ನಡ ಚಿತ್ರರಂಗಕ್ಕೊಬ್ಬ ಭರವಸೆಯ ನಟ ದೊರಕಿದ ಎಂದು ಕನ್ನಡಿಗರು ಸಂಭ್ರಮಿಸುತ್ತಿದ್ದಾಗಲೇ ವಿಧಿಯಾಟಕ್ಕೆ ಸಂಚಾರಿ ವಿಜಯ್ ತಲೆಬಾಗಿದರು. ಅಪಘಾತದಲ್ಲಿ ಗಾಯಗೊಂಡ ಅವರು 2021ರ ಜೂನ್ 15ರಂದು ವಿಧಿವಶರಾದರು.

ಅವರ ಪಾರ್ಥಿವ ಶರೀರವನ್ನು ಅವರ ಹುಟ್ಟೂರಾದ ಪಂಚನಹಳ್ಳಿಗೆ ತಂದಾಗ ಸಾವಿರಾರು ಜನರು ಅಶ್ರುತರ್ಪಣ ಸಲ್ಲಿಸಿದರು. ವಿಜಯ್ ಸ್ನೇಹಿತ ರಾಘವೇಂದ್ರ ತಮ್ಮ ತೋಟದಲ್ಲಿಯೇ ಸ್ಥಳ ನೀಡಿದರು. ಹುಟ್ಟೂರಿನ ಮಣ್ಣಿನಲ್ಲೇ ವಿಜಯ್ ಮಣ್ಣಾದರು. ಅವರ ಅಂತಿನ ಸಂಸ್ಕಾರದ ವೇಳೆಯಲ್ಲಿ ನಟ ನೀನಾಸಂ ಸತೀಶ್ ಸೇರಿದಂತೆ ಅವರೊಡನೆ ರಂಗಭೂಮಿಯಲ್ಲಿ ಬೆರೆತಿದ್ದ ದೊಡ್ಡ ಬಳಗವೇ ಅಂದು ಅಲ್ಲಿ ಸೇರಿತ್ತು.

ಅವರ ಭೌತಿಕ ಕಾಯ ಮರೆಯಾದರೂ ನೆನಪು ಜನಮಾನಸದಿಂದ ಮರೆಯಾಗಲಿಲ್ಲ. ವಿಜಯ್ ಅವರ ಮನೋಜ್ಞ ನಟನೆ ಅಷ್ಟು ಆಳವಾಗಿ ಎಲ್ಲರನ್ನು ಸೆಳೆದಿತ್ತು. ಅಂತಹ ವಿಜಯ್ ಇನ್ನಿಲ್ಲವೆಂದರೆ ಅದು ಅವರ ಕುಟುಂಬಕ್ಕಂತೂ ಬಹುದೊಡ್ಡ ಆಘಾತವಾಗಿತ್ತು. ಕಡುಬಡತನದಿಂದ ಓದಿದರೂ ಸ್ವಂತ ಪರಿಶ್ರಮದಿಂದಲೇ ಮೇಲೇರಿದ ಸಂಚಾರಿಗೆ ಹೆಗಲೆಣೆಯಾಗಿ ನಿಂತು ಪ್ರೋತ್ಸಹ ಕೊಟ್ಟವರು ವಿರೂಪಾಕ್ಷಪ್ಪ. ವಿಜಯ್ ಅವರ ಅಣ್ಣ. ಅವರಿಗೆ ಇಂದೂ ಸಂಚಾರಿ ವಿಜಯ್ ಇನ್ನಿಲ್ಲವೆಂಬುದನ್ನು ಅರಗಿಸಿಕೊಳ್ಳಲಾಗಿಲ್ಲ. ಅವರ ಒಡನಾಡಿಗಳೆಲ್ಲ ಸೇರಿ ಸಂಚಾರಿ ವಿಜಯ್ ನೆನಪಲ್ಲಿ ‘ಅನಂತವಾಗಿರು’ ಎಂಬ ಪುಸ್ತಕ ಪ್ರಕಟಿಸಿದರು.

ಜುಲೈ 4ರಂದು ವಿಜಯ್ ಹುಟ್ಟಿದ ದಿನ. ಅಂದು ಪಂಚನಹಳ್ಳಿಯ ಅವರ ಸಮಾಧಿಯ ಮೇಲೆ ಸಂಚಾರಿ ವಿಜಯ್ ಅವರ ಕಂಚಿನ ಪ್ರತಿಮೆ ಮಾಡಿಸಿ ಸ್ಥಾಪಿಸಿದ್ದಾರೆ.

ವಿಜಯ್ ನೆನಪಿನಲ್ಲಿ ನಿರಂತರವಾಗಿ ರಂಗ ಚಟುವಟಿಕೆಗಳನ್ನು ಮಾಡುವ ನಿಟ್ಟಿನಲ್ಲಿ ಟ್ರಸ್ಟ್ ಮಾಡಿ ಅದರ ಮೂಲಕ ರಂಗಭೂಮಿಯಲ್ಲಿ ವಿಜಯ್ ಹೆಸರು ಚಿರಸ್ಥಾಯಿಯಾಗಿಸಲು ಹೆಜ್ಜೆಯಿಟ್ಟಿದ್ದಾರೆ.

ಪಂಚನಹಳ್ಳಿಯ ಮನೆಮನೆಯಲ್ಲೂ ಬೆಳೆದಿದ್ದ ವಿಜಯ್ ಅವರನ್ನು ಮರೆಲಾಗದು. ಅವರ ಸೌಜನ್ಯದ ನಡವಳಿಕೆ ಅವರನ್ನು ಅಷ್ಟು ಎತ್ತರಕ್ಕೇರಿಸಿತ್ತು. ಆದರೆ, ಅಷ್ಟೇ ಬೇಗ ನಮ್ಮಿಂದ ದೂರಾದರು ಎನ್ನುತ್ತಾರೆ ಅವರ ಒಡನಾಡಿಯಾಗಿದ್ದ ಮಲ್ಲೇನಹಳ್ಳಿ ಜಗದೀಶ್.

ತಾಲ್ಲೂಕಿನ ಪಂಚನಹಳ್ಳಿಯಿಂದ ಅನತಿ ದೂರದಲ್ಲಿರುವ ರಾಘವೇಂದ್ರ ಅವರ ತೋಟದಲ್ಲಿ ಸಂಚಾರಿ ವಿಜಯ್ ಅವರ ಪ್ರತಿಮೆಯನ್ನು ನೋಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.