ಕಡೂರು: ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರಾಗಿ ಟಿ.ಗೋವಿಂದಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದೆ ಅಧ್ಯಕ್ಷರಾಗಿದ್ದ ಎಚ್.ರಾಜೇಶ್ ಮತ್ತು ಕಾರ್ಯದರ್ಶಿ ಸುನೀತಾ ಕಲ್ಲೇಶ್ ಅವರ ಅವಧಿ ಮುಗಿದಿದ್ದರಿಂದ ಕೆಮ್ಮಣ್ಣುಗುಂಡಿಯಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ 2024-25ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಸಮಿತಿ ಕಾರ್ಯದರ್ಶಿಯಾಗಿ ಕೆ.ಎಸ್.ರೇಣುಕಾ ಪ್ರಸಾದ್, ಗೌರಾವ ಅಧ್ಯಕ್ಷರಾಗಿ ಕೆ.ಎನ್.ರಾಜಣ್ಣ, ಉಪಾಧ್ಯಕ್ಷರಾಗಿ ಬಿ.ಆರ್. ಹರೀಶ್, ಜಂಟಿ ಕಾರ್ಯದರ್ಶಿಯಾಗಿ ಎನ್.ಎನ್. ವಸಂತಕುಮಾರ್ , ಕ್ರೀಡಾ ಕಾರ್ಯದರ್ಶಿಯಾಗಿ ಪಿ.ಎಸ್. ಗೋಪಾಲ್ ಆಯ್ಕೆಯಾದರು.

ಅಧ್ಯಕ್ಷ ಗೋವಿಂದಸ್ವಾಮಿ ಮಾತನಾಡಿ, ‘ಯುವ ವಕೀಲರಿಗಾಗಿ ಕಾನೂನು ಜಾಗೃತಿ ಕಾರ್ಯಾಗಾರ ಏರ್ಪಡಿಸುವುದು, ನ್ಯಾಯವಾದಿಗಳಿಗೆ ಕಾರ್ಯನಿರ್ವಹಿಸಲು ಸೂಕ್ತ ಸೌಲಭ್ಯಗಳನ್ನು ಒದಗಿಸುವುದು, ಹಿರಿಯ ವಕೀಲರ ಅನುಭವಗಳನ್ನು ತಿಳಿಯುವ ಅವಕಾಶವನ್ನು ಕಿರಿಯ ವಕೀಲರಿಗೆ ಒದಗಿಸಿಕೊಡುವುದು ಹೀಗೆ ಹಲವು ಚಿಂತನೆಗಳಿವೆ. ಎಲ್ಲರ ಸಹಕಾರದೊಂದಿಗೆ ಈ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.