ಚಿಕ್ಕಮಗಳೂರು: ‘ರೈತರಿಗೆ ಸೋಯಾ ಬಿತ್ತನೆ ಬೀಜಗಳನ್ನು ಉಚಿತವಾಗಿ ಒದಗಿಸಿ ಬೆಳೆಯಲು ಪ್ರೇರೇಪಣೆ ನೀಡಿರುವುದು ಒಳ್ಳೆಯ ನಡೆ. ರೈತರು ಪ್ರಯೋಜನ ಪಡೆದು ಆರ್ಥಿಕವಾಗಿ ಬೆಳವಣಿಗೆ ಸಾಧಿಸಬೇಕು’ ಎಂದು ಶಾಸಕ ಬೆಳ್ಳಿ ಪ್ರಕಾಶ್ ಹೇಳಿದರು.

ಲೈಫ್ ಲೈನ್ ಫೀಡ್ಸ್ (ಇಂಡಿಯಾ) ಪ್ರೈವೆಟ್ ಲಿಮಿಟೆಡ್ ವತಿಯಿಂದ ನಗರದ ಕನಕ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸೋಯಾ ಬಿತ್ತನೆ ಬೀಜ ಉಚಿತ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು. ಸೋಯಾ ಬೀಜವು ಕೋಳಿಗೆ ಒಳ್ಳೆಯ ಆಹಾರ. ಸೋಯಾದಿಂದ ಹಾಲು, ಅಡುಗೆ ಎಣ್ಣೆ ಉತ್ಪಾದಿಸಬಹುದು ಎಂದು ಹೇಳಿದರು.

ಜಿಲ್ಲೆಯ ಬೆಳೆ ಪಟ್ಟಿಯಲ್ಲಿ ಸೋಯಾವನ್ನು ಸೇರಿಸಲು ಅಧಿಕಾರಿಗಳು ಕ್ರಮ ವಹಿಸಬೇಕು. ಈ ಬೆಳೆಯನ್ನು ವಿಮೆ ವ್ಯಾಪ್ತಿಗೆ ತರಲು ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.

ಉದ್ಯಮಿ ಕಿಶೋರ್ ಕುಮಾರ್ ಹೆಗ್ಡೆ ಅವರು ರೈತರಿಗೆ ಉಚಿತವಾಗಿ ಸೋಯಾ ಬೀಜಗಳನ್ನು ನೀಡುತ್ತಿರುವುದು ಶ್ಲಾಘನೀಯ. ಉದ್ಯಮಿ ತಾನು ಬೆಳೆಯುವುದರೊಂದಿಗೆ ಜೊತೆಗಿರುವ ವರನ್ನು ಬೆಳೆಸಬೇಕು. ಆ ಕೆಲಸವನ್ನು ಕಿಶೋರ್ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, ಜಮೀನಿನ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಬೇಕು. ಫಲವತ್ತತೆ ವೃದ್ಧಿಸದಿದ್ದರೆ ಇಳುವರಿ ಕಡಿಮೆಯಾಗುತ್ತದೆ. ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಲು ಸೋಯಾ ಬೆಳಯು ಅನುಕೂಲಕಾರಿಯಾಗಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ ಮಾತನಾಡಿ, ಲೈಫ್ ಲೈನ್‌ನ ಸಾಮಾಜಿಕ ಸಂಸ್ಥೆ ಹೊಣೆಗಾರಿಕೆ (ಸಿಎಸ್ಆರ್) ಚೆನ್ನಾಗಿದೆ. ಸಮಾಜ ಕಾರ್ಯಗಳನ್ನು ಉತ್ತಮವಾಗಿ ನಿರ್ವಹಿಸುತ್ತಾರೆ ಎಂದರು .

ಲೈಫ್ ಲೈನ್ ಅಧ್ಯಕ್ಷ ಕಿಶೋರ್ ಕುಮಾರ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಜಂಟಿ ನಿರ್ದೇಶಕ ಡಾ.ತಿರುಮಲೇಶ್, ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಕೃಷ್ಣಮೂರ್ತಿ, ವೆಂಕಟೇಶ್ವರ ಹ್ಯಾಚರೀಸ್ ವ್ಯವಸ್ಥಾಪಕ ಡಾ.ಹರ್ಷಕುಮಾರ್, ಲೈಫ್ ಲೈನ್ ಉಪಾಧ್ಯಕ್ಷ ಡಾ.ಸುಬ್ರಹ್ಮಣ್ಯ ಭಟ್, ನಿರ್ದೇಶಕಿ ಸುಲೇಖಾ ಕೆ.ಹೆಗ್ಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.