ಎರಡು ವರ್ಷಗಳ ಹಿಂದಷ್ಟೇ ಎರಡು ಎಕರೆ ಅಡಿಕೆ ಹಾಕಿದ್ದು ಚೆನ್ನಾಗಿ ಬೆಳೆದಿವೆ. ಈಗ ನೀರಿನ ಕೊರತೆಯಾಗಿದೆ. ಮಳೆ ಬಾರದಿದ್ದರೆ ಅಡಿಕೆ ಉಳಿಯುವುದಿಲ್ಲ.
ಶಂಕರಾನಾಯ್ಕ.ಎಂ.ಕೋಡಿಹಳ್ಳಿ.
ಆದಷ್ಟು ಬೇಗ ಮಳೆ ಬಾರದಿದ್ದರೆ ಅಡಿಕೆ ಸೇರಿದಂತೆ ತೋಟಗಾರಿಕೆ ಬಳೆಗಳಿಗೆ ತೊಂದರೆ ಖಚಿತ.
ಕೆ.ಪಿ. ಜಯದೇವ್ ಹಿರಿಯ ಸಹಾಯಕ ನಿರ್ದೇಶಕರು. ತೋಟಗಾರಿಕೆ ಇಲಾಖೆ
‘ನೀರಿಗೆ ಹಾಹಾಕಾರ ಹೆಚ್ಚಲಿದೆ’
ತಾಲ್ಲೂಕಿನಲ್ಲಿ ಕುಡಿಯುವ ನೀರಿಗೆ ತತ್ವಾರ ಹೆಚ್ಚುವ ಸಾಧ್ಯತೆ ಇದೆ. ತಾಲ್ಲೂಕಿನ ಸರಸ್ವತೀಪುರ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ತೀವ್ರವಾಗಿದೆ. ಕಿರು ನೀರು ಸರಬರಾಜು ಯೋಜನೆ ಮೂಲಕ ಗ್ರಾಮ ಪಂಚಾಯಿತಿ ಪೂರೈಸುತ್ತಿರುವ ನೀರು ಸಾಲುತ್ತಿಲ್ಲ. ಮೂರ್ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತಿದೆ. ಗಂಟೆ ಗಟ್ಟಲೆ ಕಾದು ಕುಳಿತು ಜನರು ಸಿಕ್ಕಷ್ಟು ನೀರನ್ನು ಕೊಂಡೊಯ್ಯುತ್ತಿದ್ದಾರೆ.