ಚಳ್ಳಕೆರೆ: ‘ಮಕ್ಕಳ ಮನಸಿನಲ್ಲಿ ಮೌಲ್ಯಗಳನ್ನು ಬಿತ್ತುವುದರ ಜತೆಗೆ ಅವರನ್ನು ವಿಶ್ವಮಾನವರನ್ನಾಗಿ ರೂಪಿಸುವ ಜವಾಬ್ದಾರಿ ಶಿಕ್ಷಕರದ್ದು’ ಎಂದು ಶಾಸಕ ಟಿ. ರಘುಮೂರ್ತಿ ಸಲಹೆ ನೀಡಿದರು.

ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಕ್ಷಕರು ಕಲಿಸುವುದರಲ್ಲಿ ನಿರ್ಲಕ್ಷ್ಯ ತೋರಿದರೆ ಆ ಮಕ್ಕಳ ಇಡೀ ಜೀವನ ಅಂಧಕಾರದಲ್ಲಿ ಮುಳಗುತ್ತದೆ. ಮಾನವ ಸಂಪನ್ಮೂಲ ವೃದ್ಧಿಸುವ ಶಿಲ್ಪಿಗಳಾಗಿರುವ ಶಿಕ್ಷಕರು ಮಾತೃಹೃದಯದಿಂದ ನಿರ್ವಂಚನೆಯಿಂದ ಮಕ್ಕಳಿಗೆ ಕಲಿಸುವುದರ ಜತೆಗೆ ವೃತ್ತಿ ನೈಪುಣ್ಯ ಎತ್ತಿ ಹಿಡಿಯಬೇಕು’ ಎಂದು ಕಿವಿಮಾತು ಹೇಳಿದರು.

ಮಕ್ಕಳ ಮನಸ್ಥಿತಿ ಅರಿತುಕೊಂಡು ಬೋಧನೆ ನೀಡುವುದರ ಮೂಲಕ ಅವರ ಉತ್ತಮ ಭವಿಷ್ಯ ರೂಪಿಸಬೇಕು ಎಂದು ಸಂಪನ್ಮೂಲ ವ್ಯಕ್ತಿ ಶ್ರೀಕಾಂತ್ ಹುಲಿಮನೆ ಸಲಹೆ ನೀಡಿದರು.

ವಿವಿಧ ಜನಪದ ಕಲಾ ಮೇಳದೊಂದಿಗೆ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು. ನಿವೃತ್ತ ಶಿಕ್ಷಕರನ್ನು ಅಭಿನಂದಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್. ಸುರೇಶ್, ಗ್ಯಾರಂಟಿ ಯೋಜನೆ ಅನುಷ್ಠಾನ ತಾಲ್ಲೂಕು ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ನಗರಸಭೆ ಅಧ್ಯಕ್ಷೆ ಜೈತುನ್ಬಿ, ಉಪಾಧ್ಯಕ್ಷೆ ಒ. ಸುಜಾತಾ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಜಿ.ರಾಘವೇಂದ್ರ, ಮಾಜಿ ಅಧ್ಯಕ್ಷ ರಮೇಶ್ಗೌಡ, ಸದಸ್ಯೆ ಕವಿತಾ, ನಾಮ ನಿರ್ದೇಶಕ ಸದಸ್ಯ ನೇತಾಜಿ ಪ್ರಸನ್ನ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಟಿ.ವೀರಭದ್ರಸ್ವಾಮಿ, ತಾಲ್ಲೂಕು ಪಂಚಾಯಿತಿ ಇಒ ಶಶಿಧರ, ಶಿಕ್ಷಕರ ವಿವಿಧ ಸಂಘಗಳ ಶ್ರೀನಿವಾಸ್, ಬಿ. ರಾಜಕುಮಾರ್, ಡಿ. ವೀರಣ್ಣ, ಡಿ. ಮಹಾಲಿಂಗಪ್ಪ, ಡಿ.ಎಸ್. ಪಾಲಯ್ಯ, ಕೆ.ಪಿ. ತಿಪ್ಪೇಸ್ವಾಮಿ, ಆರ್.ಸಿದ್ದಲಿಂಗಪ್ಪ, ಶಿಕ್ಷಕಿ ಚಾರುಮತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.