ಚಿತ್ರದುರ್ಗ: ಗತ ವೈಭವ ಸಾರುವ ಐತಿಹಾಸಿಕ ಏಳುಸುತ್ತಿನ ಕೋಟೆ ನೋಡುವ ಉತ್ಸಾಹದಲ್ಲಿ ದೂರದ ಊರುಗಳಿಂದ ಚಿತ್ರದುರ್ಗಕ್ಕೆ ಬರುವವರು ಕೋಟೆ ಪ್ರವೇಶ ದ್ವಾರಕ್ಕೆ ತಲುಪುವಷ್ಟರಲ್ಲಿ ಹೈರಾಣಾಗುತ್ತಿದ್ದಾರೆ. ‘ಮೂಲ ಸೌಲಭ್ಯದ ವಿಚಾರ ಬದಿಗಿಟ್ಟು ಮೊದಲು ಸರಿಯಾದ ದಾರಿ ಮಾಡಿ...’ ಎಂಬ ಅಸಮಾಧಾನದ ಮಾತು ಕೋಟೆ ಅಂಗಳದಲ್ಲಿ ಪ್ರತಿಧ್ವನಿಸುತ್ತಿವೆ.

ಚಿತ್ರದುರ್ಗ ನಗರ ಐತಿಹಾಸಿಕವಾಗಿ ಪ್ರಾಮುಖ್ಯತೆ ಪಡೆದಿರುವುದೇ ಏಳುಸುತ್ತಿನ ಕೋಟೆ ಹಾಗೂ ಸ್ಮಾರಕಗಳಿಂದ. ವರ್ಷ ಪೂರ್ತಿ ಪ್ರವಾಸಿಗರು ಬರುತ್ತಿದ್ದರೂ ಸಮಸ್ಯೆಯಿಂದ ಮುಕ್ತವಾಗಿಲ್ಲ. ವಾಹನ ನಿಲುಗಡೆ, ಕೋಟೆಗೆ ಸಂಪರ್ಕ ಕಲ್ಪಿಸುವ ರಸ್ತೆ, ಕುಡಿಯುವ ನೀರು, ಶೌಚಾಲಯದ ಸಮಸ್ಯೆ ಜೀವಂತವಾಗಿವೆ. ಈ ಕಾರಣಕ್ಕೆ ಇತ್ತೀಚಿನ ವರ್ಷಗಳಲ್ಲಿ ಒಮ್ಮೆ ಬಂದವರು ಪುನಃ ಕೋಟೆ ನೋಡಲು ಬರುತ್ತಿಲ್ಲ ಎಂಬ ಮಾತು ಸಾಮಾನ್ಯ ಎಂಬಂತಾಗಿದೆ.

ಪ್ರವಾಸಿಗರು ಆನೆಬಾಗಿಲು, ರಂಗಯ್ಯನ ಬಾಗಿಲಿನಿಂದ ಕಾರು, ಬೈಕ್ಗಳಲ್ಲಿ ಮಾತ್ರ ಪ್ರವೇಶಿಸಬಹುದು. ಬಸ್ಗಳು ಮದಕರಿ ನಾಯಕ ವೃತ್ತದಿಂದ ಜೋಗಿಮಟ್ಟಿ ಮಾರ್ಗವಾಗಿ ಕರುವಿನಕಟ್ಟೆ ಮೂಲಕ ಇಲ್ಲವೇ ಅಗಳೇರಿ ಪ್ರದೇಶ ರಸ್ತೆಯಿಂದ ಕೋಟೆ ತಲುಪಬಹುದು. ಆದರೆ ರಸ್ತೆ ಒತ್ತುವರಿಯಾಗಿರುವ ಕಾರಣ ಈ ಮಾರ್ಗಗಳಲ್ಲಿ ಸಂಚರಿಸುವುದೇ ದುಸ್ಥರವಾಗಿದೆ.

ಬಸ್ಗಳಲ್ಲಿ ಬರುವವರಿಗೆ ಕಿಲೋಮೀಟರ್ ಕಾಲ್ನಡಿಗೆ ಅನಿವಾರ್ಯವಾಗಿದೆ. ಕರುವಿನಕಟ್ಟೆ ಮಾರ್ಗದಲ್ಲಿ ಹೋಗುವ ಬಸ್ಗಳು ಏಕನಾಥೇಶ್ವರಿ ಪಾದಗುಡಿ ರಸ್ತೆ ಕಿರಿದಾಗಿರುವುದರಿಂದ ಕೋಟೆ ಮುಂಭಾಗಕ್ಕೆ ತಲುಪಲು ಸಾಹಸಪಡುವಂತಾಗಿದೆ. ಈ ಕಾರಣಕ್ಕೆ ಜೋಗಿಮಟ್ಟಿ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಲಾಗುತ್ತಿದೆ. ಇಷ್ಟೆಲ್ಲಾ ಕಷ್ಟ ಪಟ್ಟು ಕೋಟೆ ಪ್ರವೇಶ ದ್ವಾರಕ್ಕೆ ಬರುತ್ತಿದ್ದಂತೆ ಆನ್ಲೈನ್ ಟಿಕೆಟ್ ವ್ಯವಸ್ಥೆ ಎದುರಾಗುತ್ತದೆ.

ಟಿಕೆಟ್ ಪಡೆಯಲು ಕ್ಯೂಆರ್ ಕೋಡ್ ಫಲಕ ಅಳವಡಿಸಲಾಗಿದೆ. ಫೋನ್ನಲ್ಲಿ ಕೋಡ್ ಸ್ಕ್ಯಾನ್ ಮಾಡಿದಾಗ ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆಯ ಜಾಲತಾಣ ತೆರೆದುಕೊಳ್ಳುತ್ತದೆ. ಪ್ರವಾಸಿಗರ ಹೆಸರು, ಗುರುತಿನ ಚೀಟಿ ಸಂಖ್ಯೆ ಸೇರಿ ಇತರ ಮಾಹಿತಿ ಭರ್ತಿ ಮಾಡಿ, ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಅಥವಾ ಯುಪಿಐ ಮೂಲಕ ಹಣ ಪಾವತಿಸಿದರೆ ಟಿಕೆಟ್ ಲಭ್ಯವಾಗುತ್ತದೆ. ಆದರೆ, ಸರ್ವರ್ ಸಮಸ್ಯೆಯಿಂದ ಟಿಕೆಟ್ ಪಡೆಯುವುದು ಸುಲಭವಾಗಿಲ್ಲ. ಒಮ್ಮೆ ಐದು ಪ್ರವಾಸಿಗರಿಗೆ ಮಾತ್ರ ಅವಕಾಶವಿರುವುದು ಸಮಸ್ಯೆ ತಂದೊಡ್ಡಿದೆ. ಇದು ಪ್ರವಾಸಿ ಸ್ನೇಹಿಯಾಗಿಲ್ಲ ಎಂಬುದು ಜನರ ಆರೋಪ.

ಗ್ರಾಮೀಣರಿಗೆ ಆನ್ಲೈನ್ ಟಿಕೆಟ್ ಪಡೆಯುವುದು ದುಸ್ತರವಾಗಿದೆ. ಸಿಬ್ಬಂದಿ ಮತ್ತೊಬ್ಬರ ಮೊಬೈಲ್ನಲ್ಲಿ ಟಿಕೆಟ್ ವ್ಯವಸ್ಥೆ ಮಾಡುತ್ತಾರೆ. ಬಹುತೇಕರು ಇದಕ್ಕೆ ಸಮ್ಮತಿಸುತ್ತಿಲ್ಲ. ಇಂತಹ ಸಮಯದಲ್ಲಿ ಪ್ರವಾಸಿಗರು ಸಿಬ್ಬಂದಿ ಜೊತೆ ಗಲಾಟೆ ನಡೆಸಿದ ನಿದರ್ಶನಗಳೂ ಇವೆ.

‘ದೂರದ ಊರುಗಳಿಂದ ಬಂದರೆ ಇಲ್ಲಿನ ಅವ್ಯವಸ್ಥೆ ಬೇಸರ ತರಿಸುತ್ತದೆ. ಟಿಕೆಟ್ಗೆ ಆನ್ಲೈನ್, ಆಫ್ಲೈನ್ ವ್ಯವಸ್ಥೆ ಮಾಡಿದರೆ ಸಮಸ್ಯೆ ಆಗುವುದಿಲ್ಲ. ಕುಟುಂಬದವರನ್ನು ರಸ್ತೆಯಲ್ಲಿ ನಿಲ್ಲಿಸುವುದು ಯಾರಿಗೂ ಬೇಡ’ ಎಂದು ಚಿಕ್ಕಬಳ್ಳಾಪುರದ ಸುಷ್ಮಾ ಬೇಸರಿಸಿದರು.

ದಾರಿ ಹುಡುಕಿ, ಟಿಕೆಟ್ ಪಡೆದು ಕೋಟೆ ಪ್ರವೇಶಿಸುವ ಪ್ರವಾಸಿಗರಿಗೆ ಪಾರ್ಥೇನಿಯಂ, ಪ್ಲಾಸ್ಟಿಕ್ ಬಾಟಲಿ, ಐಸ್ ಕ್ರೀಂ ಪ್ಯಾಕೆಟ್ಗಳು ಸ್ವಾಗತ ಕೋರುತ್ತವೆ! ಕಣ್ಣು ಹಾಯಿಸಿದ ಕಡೆಯಲ್ಲೆಲ್ಲಾ ದಟ್ಟವಾಗಿ ಬೆಳೆದಿರುವ ಹುಲ್ಲು, ಪಾರ್ಥೇನಿಯಂ ಗಿಡಗಳೇ ಕಾಣುತ್ತವೆ.

ವಿಶ್ರಾಂತಿಗೆಂದು ಹಾಕಿರುವ ಕಲ್ಲು ಬೆಂಚುಗಳು ಕಾಣದಂತಾಗಿವೆ. ಕೋಟೆಯ ಗೋಡೆಗಳನ್ನು ಬೇವು, ಆಲ ಸೇರಿದಂತೆ ಇತರೆ ಗಿಡಗಳು ಆವರಿಸಿವೆ. ಕೋಟೆ ಆವರಣದಲ್ಲಿ ಸ್ವಚ್ಛತೆ ಸಂಪೂರ್ಣವಾಗಿ ಮರೆಯಾಗಿದೆ.

ಕೋಟೆ ವೀಕ್ಷಿಸಲು ಕನಿಷ್ಠ ಎರಡು ಗಂಟೆಯಾದರೂ ಬೇಕಾಗುತ್ತದೆ. ಬೆಟ್ಟ ಹತ್ತಿ ಎಲ್ಲೆಡೆ ಸುತ್ತಾಡುವ ಪ್ರವಾಸಿಗರಿಗೆ ಜಲಬಾಧೆ ಕಾಡಿದರೆ ಸಮರ್ಪಕ ಶೌಚಾಲಯಗಳಿಲ್ಲ. ಕೋಟೆಯ ಕೆಳಭಾಗ ಹಾಗೂ ಮೇಲುದುರ್ಗದಲ್ಲಿ ನಿರ್ಮಿಸಿರುವ ಎರಡು ಶೌಚಾಲಯಗಳು ಇದ್ದೂ ಇಲ್ಲದಂತಹ ಸ್ಥಿತಿಯಲ್ಲಿವೆ. ಕುಡಿಯುವ ನೀರಿನ ಬೋರ್ಡ್ ನೋಡಿಯೇ ದಾಹ ನೀಗಿಸಿಕೊಳ್ಳಬೇಕಾದ ಸ್ಥಿತಿ ಇದೆ!

ಕೋಟೆ ಮುಂಭಾಗದಲ್ಲಿ ನಿರ್ಮಿಸಿರುವ ಟಿಕೆಟ್ ಕೌಂಟರ್, ಪುರಾತತ್ವ ಇಲಾಖೆಯ ಪುಸ್ತಕ ಮಳಿಗೆ, ಪ್ರವಾಸಿಗರ ಲಗೇಜ್ ಕೊಠಡಿ, ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಶೌಚಾಲಯಗಳು ವರ್ಷಗಳೇ ಕಳೆದರೂ ಉದ್ಘಾಟನೆ ಆಗಿಲ್ಲ. ಭಾರತೀಯ ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆ, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೋಟೆಗೆ ಬರುವ ಪ್ರವಾಸಿಗರು ಸಮಸ್ಯೆಗೆ ಸಿಲುಕುತ್ತಿದ್ದಾರೆ ಎಂಬುದು ಜನರ ಆರೋಪ.

ಕೋಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಕಿರಿದಾಗಿರುವುದು ಪಾರ್ಥೇನಿಯಂ ಕಳೆಗಿಡ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಅಧಿಕಾರಿಗಳ ಜತೆ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗುತ್ತದೆ ಟಿ
ವೆಂಕಟೇಶ್ ಜಿಲ್ಲಾಧಿಕಾರಿ

- ಕೋಟೆಗೆ ಬರುವ ಮಾರ್ಗ ಅವ್ಯವಸ್ಥೆಯಿಂದ ಕೂಡಿದೆ. ಎಲ್ಲೆಂದರಲ್ಲಿ ಸಂಚರಿಸಿ ಕೋಟೆ ತಲುಪುವ ಹೊತ್ತಿಗೆ ಆಸಕ್ತಿ ಕುಗ್ಗುತ್ತದೆ. ಮೊದಲು ರಸ್ತೆ ಸಂಪರ್ಕ ಕಲ್ಪಿಸಿ
ವಿ.ಹರೀಶ್ ಶೆಟ್ಟಿ ಪ್ರವಾಸಿ

ಕೋಟೆಯಲ್ಲಿ ಶೌಚಾಲಯ ವ್ಯವಸ್ಥೆ ಸರಿಯಿಲ್ಲ. ಪ್ರವೇಶ ದ್ವಾರದಲ್ಲೇ ಮಾಹಿತಿ ಫಲಕ ಆಳವಡಿಸಿದರೆ ಉತ್ತಮ. ಕುಡಿಯುವ ನೀರಿನ ಘಟಕದಲ್ಲಿ ನೀರೇ ಬರುತ್ತಿಲ್ಲ. ವಿಶ್ರಾಂತಿ ಕೊಠಡಿ ಬೇಕಿದೆ
ವಿ.ಎಚ್.ಪ್ರೀತಿ ಪ್ರವಾಸಿ

ಕಾಡುತ್ತಿದೆ ಪಾರ್ಕಿಂಗ್ ಸಮಸ್ಯೆ

ಐತಿಹಾಸಿಕ ಕೋಟೆಯ ಮುಂಭಾಗದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಸಮರ್ಪಕವಾಗಿಲ್ಲ. ಕೋಟೆಯ ಪ್ರವೇಶದ್ವಾರಕ್ಕೆ ತೆರಳುವ ಮಾರ್ಗದ ಎರಡೂ ಬದಿಯಲ್ಲಿ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಪ್ರವಾಸಿಗರ ಸಂಚಾರಕ್ಕೆ ತೊಡಕುಂಟಾಗಿದೆ. ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವುದರಿಂದ ಸ್ಥಳೀಯರೂ ಕಿರಿಕಿರಿ ಅನುಭವಿಸುತ್ತಿದ್ದಾರೆ. ಪಾರ್ಕಿಂಗ್ ಅವ್ಯವಸ್ಥೆಯಿಂದಾಗಿ ಶೈಕ್ಷಣಿಕ ಪ್ರವಾಸಕ್ಕೆ ಬರುವ ಮಕ್ಕಳು ಶಿಕ್ಷಕರಲ್ಲಿ ಅಸುರಕ್ಷತೆಯ ಭಾವ ಕಾಡುತ್ತಿದೆ.

ಸೂಚನಾ ಫಲಕ ಅಳವಡಿಸದೆ ಕಾಮಗಾರಿ

ಜೋಗಿಮಟ್ಟಿ ಮುಖ್ಯ ರಸ್ತೆಯಿಂದ ಅಗಳೇರಿ ಮಾರ್ಗವಾಗಿ ಕೋಟೆಗೆ ಸಂಪರ್ಕ ಕಲ್ಪಿಸಲಾಗಿದೆ. ಈ ರಸ್ತೆಯಲ್ಲಿ ಕುಸಿಯುವ ಹಂತದಲ್ಲಿದ್ದ ಹಳೇ ಕಾಲದ ಸೇತುವೆ ತೆರವುಗೊಳಿಸಿ ನಗರಸಭೆಯಿಂದ ಹೊಸ ಸೇತುವೆ ನಿರ್ಮಿಸಲಾಗುತ್ತಿದೆ. ಆದರೆ ಸೂಚನಾ ಫಲಕ ಅಳವಡಿಸದೆ ಕಾಮಗಾರಿ ನಡೆಸುತ್ತಿರುವುದು ಸಮಸ್ಯೆ ತಂದೊಡ್ಡಿದೆ. ಕಾಮಗಾರಿ ನಡೆಯುವ ಸ್ಥಳದಲ್ಲಿ ಮಾತ್ರ ನಾಮಕಾವಸ್ತೆಗೆ ಬ್ಯಾರಿಕೇಡ್ ಹಾಕಲಾಗಿದೆ. ಜೋಗಿಮಟ್ಟಿ ರಸ್ತೆಯಿಂದ ಬರುವ ಪ್ರವಾಸಿಗರು ವಾಹನಗಳನ್ನು ತಿರುಗಿಸಿಕೊಂಡು ಪುನಃ ರಸ್ತೆ ಹುಡುಕುವಂತಾಗಿದೆ.

ವಾಸಿ ಸ್ನೇಹಿಯಾಗದ ವಿ.ವಿ ಸಾಗರ

- ಸುವರ್ಣಾ ಬಸವರಾಜ್

ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಪ್ರದೇಶವನ್ನು ಪ್ರವಾಸಿ ಸ್ನೇಹಿಯಾಗಿಸುವ ಎಲ್ಲಾ ಅವಕಾಶಗಳಿವೆ. ಆದರೆ ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯದಿಂದ ಇದು ಸಮಸ್ಯೆಗಳ ತಾಣವಾಗಿದೆ.

ವಾಣಿವಿಲಾಸ ಜಲಾಶಯಕ್ಕೆ ಮಳೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿದು ಬರುತ್ತಿರುವ ಕಾರಣ ಮೂರನೇ ಬಾರಿಗೆ ಕೋಡಿ ಹರಿಯುವ ದಿನಗಳು ಸನ್ನಿಹಿತವಾಗಿವೆ. ಆದರೆ ಅಣೆಕಟ್ಟೆಯ ಕೆಳಭಾಗದಲ್ಲಿರುವ ಪ್ರಕೃತಿವನ ಮತ್ತು ಪ್ರವಾಸೋದ್ಯಮ ಇಲಾಖೆ ನೇತೃತ್ವದಲ್ಲಿ ಹತ್ತು ವರ್ಷದಿಂದ ನಿರ್ಮಾಣವಾಗುತ್ತಿರುವ ಮತ್ತೊಂದು ಉದ್ಯಾನ ಅವ್ಯವಸ್ಥೆಯಿಂದ ಕೂಡಿದೆ.

ಕೆ.ಎಚ್.ರಂಗನಾಥ್ ಅರಣ್ಯ ಸಚಿವರಾಗಿದ್ದಾಗ 2004ರಲ್ಲಿ ವಾಣಿವಿಲಾಸ ಜಲಾಶಯದ ಕೆಳಭಾಗದಲ್ಲಿ ‘ಪ್ರಕೃತಿ ವಿಹಾರ ವನ’ ಉದ್ಘಾಟನೆಯಾಗಿತ್ತು. ಅರಣ್ಯ ಇಲಾಖೆ ನಿರ್ಮಿಸಿದ್ದ ಈ ವನ ಪ್ರವಾಸಿಗರನ್ನು ಸೆಳೆಯುತ್ತಿತ್ತು. ನಿರ್ವಹಣೆ ಕೊರತೆಯಿಂದ ಪ್ರಕೃತಿವನ ಈಗ ಹಾಳಾಗಿದೆ.

ಪ್ರವಾಸೋದ್ಯಮ ಸಚಿವರಾಗಿದ್ದ ಆರ್.ವಿ. ದೇಶಪಾಂಡೆ 2014ರಲ್ಲಿ ₹ 5 ಕೋಟಿ ವೆಚ್ಚದಲ್ಲಿ ಪ್ರವಾಸಿ ಸೌಲಭ್ಯ ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಿದ್ದರು. ಒಂದು ವರ್ಷದೊಳಗೆ ಅಭಿವೃದ್ಧಿ ಪಡಿಸಿದ ಸ್ಥಳವನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವಂತೆ ನಿರ್ಮಿತಿ ಕೇಂದ್ರಕ್ಕೆ ತಾಕೀತು ಮಾಡಲಾಗಿತ್ತು. ಹತ್ತು ವರ್ಷ ಗತಿಸಿದರೂ ಕಾಮಗಾರಿ ಪೂರ್ಣಗೊಳಿಸದ ಕಾರಣ ಇಡೀ ಆವರಣದ ತುಂಬ ಗಿಡಗಳು ಬೆಳೆದಿವೆ.

ಹೈಟೆಕ್ ಶೌಚಾಲಯ ಹೊರಗೆ ನೋಡಲು ಮಾತ್ರ ಚಂದವಿದ್ದು ಪ್ರವಾಸಿಗರ ಬಳಕೆಗೆ ಮುಕ್ತವಾಗಿಲ್ಲ. ಪಾದಚಾರಿ ಮಾರ್ಗಕ್ಕೆ ಹಾಕಿರುವ ಟೈಲ್ಸ್ ಹಾಳಾಗಿವೆ. ಒಂದೆರಡು ವಾರ ಮಳೆ ಬೀಳದಿದ್ದರೆ ಇಡೀ ಆವರಣ ಬೀಳು ಭೂಮಿಯಂತೆ ಕಾಣುತ್ತದೆ. ವಾಣಿವಿಲಾಸ ಅಣೆಕಟ್ಟೆ ನೋಡಲು ನಿರ್ಬಂಧ ವಿಧಿಸಿರುವ ಕಾರಣ ಪ್ರವಾಸಿಗರ ಸಂಖ್ಯೆ ಕಡಿಮೆ ಆಗಿದೆ. ಆದರೆ ಕಣಿವೆ ಮಾರಮ್ಮ ದೇಗುಲಕ್ಕೆ ನಿತ್ಯ ನೂರಾರು ಭಕ್ತರು ಬಂದು ಹೋಗುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.