ಹಿರಿಯೂರು: ಸಾಮಾನ್ಯವಾಗಿ ಹೆಚ್ಚು ಉಷ್ಣಾಂಶವಿರುವ ಪ್ರದೇಶದಲ್ಲಿ ಅಥವಾ ಮರುಭೂಮಿಯಲ್ಲಿ ಬೆಳೆಯುವ ಬೆಳೆ ಖರ್ಜೂರ. ಆದರೆ, ತಾಲ್ಲೂಕಿನ ಚಳಮಡು ಗ್ರಾಮದಲ್ಲಿ ಅಣ್ಣ–ತಂಗಿಯರಿಬ್ಬರು ತಮ್ಮ ಅಲ್ಪ ಜಮೀನಿನಲ್ಲಿಯೇ ಭರಪೂರ ಖರ್ಜೂರ ಬೆಳೆ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಗ್ರಾಮದ ಸೈಯದ್ ಅಬು ಅಹಮ್ಮದ್ ಗಝಾಲಿ ಅವರು ತಮ್ಮ ಪಾಲಿನ 1 ಎಕರೆ ಭೂಮಿಯಲ್ಲಿ ಹಾಗೂ ಅವರ ಸಹೋದರಿ ಫಾತಿಮಾ ಒಂದೂವರೆ ಎಕರೆಯಲ್ಲಿ ಖರ್ಜೂರ ಬೆಳೆದಿದ್ದು, ಈಚೆಗೆ ಮೊದಲ ಫಸಲು ಪಡೆದಿದ್ದಾರೆ.

‘ಗುಜರಾತ್ನ ಅತುಲ್ ಕಂಪನಿಯಿಂದ ಪ್ರತಿ ಖರ್ಜೂರ ಸಸಿಗೆ ‘ಬರ್ಹಿ’ ತಳಿಯ 138 ಅಂಗಾಂಶ (ಟಿಶ್ಯುಕಲ್ಚರ್) ಸಸಿಗಳನ್ನು ನಾಲ್ಕು ವರ್ಷಗಳ ಹಿಂದೆ ಖರೀದಿಸಿ ತಂದಿದ್ದೆವು. ಅಂಗಾಂಶ ತಳಿಯ ಸಸಿ ಬೇಕೆಂದರೆ ಮುಂಗಡ ಹಣ ಪಾವತಿಸಿ ಆರು ತಿಂಗಳು ಕಾಯಬೇಕಾಗುತ್ತದೆ (ಖರ್ಜೂರದ ಸಸಿಗಳನ್ನು ಬೀಜದಿಂದಲೂ ಉತ್ಪಾದನೆ ಮಾಡಬಹುದು). ನಾಟಿ ಮಾಡಿದ ನಾಲ್ಕನೇ ವರ್ಷದಿಂದ ಫಸಲು ಆರಂಭವಾಗುತ್ತದೆ. 138 ಗಿಡಗಳಲ್ಲಿ ಈ ಬಾರಿ 30 ಗಿಡಗಳಲ್ಲಿ ಮಾತ್ರ ಹಣ್ಣು ಬಿಟ್ಟಿದೆ. ಮುಂದಿನ ವರ್ಷ ಎಲ್ಲಾ ಗಿಡಗಳಲ್ಲೂ ಹಣ್ಣು ಬರುವ ಸಾಧ್ಯತೆ ಇದೆ’ ಎಂದು ಫಾತಿಮಾ ತಿಳಿಸಿದರು.

‘ಖರ್ಜೂರದ ಫಸಲು ಬರಲು ಕೃತಕ ಪರಾಗಸ್ಪರ್ಶ ಅಗತ್ಯ. ಅದಕ್ಕಾಗಿ ಹತ್ತು ಗಂಡು ಗಿಡಗಳನ್ನು ಬೆಳೆಸಿದ್ದೇವೆ. ಗಂಡು ಗಿಡಗಳಲ್ಲಿ ಬಿಡುವ ಹೂವಿನ ಮೇಲಿನ ಪುಡಿ (ಪೌಡರ್)ಯನ್ನು ಹೆಣ್ಣು ಗಿಡದ ಗೊಂಚಲಿನ ಮೇಲೆ ಸಿಂಪಡಿಸಬೇಕು. ಈ ಕ್ರಿಯೆಯನ್ನು ತುಂಬಾ ಎಚ್ಚರಿಕೆಯಿಂದ ಮಾಡಬೇಕು. ಆಗ ಮಾತ್ರ ಭರಪೂರ ಫಸಲು ಪಡೆಯಲು ಸಾಧ್ಯ’ ಎಂದು ವಿವರಿಸುತ್ತಾರೆ ಅಬು ಅಹಮ್ಮದ್.

‘ಈ ವರ್ಷ 30 ಗಿಡಗಳಿಂದ ಸುಮಾರು 150 ಕೆ.ಜಿ. ಹಣ್ಣು ಸಿಕ್ಕಿದೆ. ಸ್ಥಳೀಯವಾಗಿಯೇ ಕೆ.ಜಿ.ಗೆ ₹ 200ರಂತೆ ಮಾರಾಟ ಮಾಡಿದೆವು. ಹಲವರು ನಮ್ಮ ತೋಟದ ಹಣ್ಣಿನ ರುಚಿ ನೋಡಿ ಹೆಚ್ಚಿನ ಬೇಡಿಕೆ ಸಲ್ಲಿಸುತ್ತಿದ್ದಾರೆ. ಈ ಬಾರಿ ಒಂದೊಂದು ಗಿಡದಲ್ಲಿ ನಾಲ್ಕೈದು ಗೊನೆಗಳು ಬಿಟ್ಟಿದ್ದವು. ಐದಾರು ವರ್ಷ ಕಳೆಯುವ ವೇಳೆಗೆ ಒಂದೊಂದು ಗಿಡದಲ್ಲಿ 15ರಿಂದ 20 ಗೊಂಚಲು ಬಿಡುತ್ತವೆ. ಒಂದು ಗಿಡದಿಂದ 150 ಕೆ.ಜಿ.ವರೆಗೆ ಹಣ್ಣು ಪಡೆಯಬಹುದು. ಖರ್ಜೂರ ಹಣ್ಣಿಗೆ ಮಾರುಕಟ್ಟೆ ಸಮಸ್ಯೆ ಇಲ್ಲ. ಹಣ್ಣು ಹದಕ್ಕೆ ಬಂದ ಮೇಲೆ ಗೊನೆಯನ್ನು ಕತ್ತರಿಸಿ ಕಡ್ಡಿ ಸಮೇತ ತೂಕಹಾಕಿ ಮಾರುತ್ತೇವೆ. ಹಣ್ಣು ಮೆತ್ತಗಿದ್ದರೆ ತಿನ್ನಲು ಚನ್ನಾಗಿರುವುದಿಲ್ಲ. ‘ರಾ’ ತಿಂದರೆ ಕೆಜಿಗಟ್ಟಲೆ ತಿಂದರೂ ತಿಂದದ್ದು ಗೊತ್ತಾಗುವುದಿಲ್ಲ’ ಎಂಬುದು ಫಾತಿಮಾ ಅವರ ಅನುಭವದ ನುಡಿ.

‘ತೋಟದಲ್ಲಿ ಖರ್ಜೂರವಲ್ಲದೇ ಡ್ರ್ಯಾಗನ್ ಫ್ರೂಟ್, ನೇರಳೆ, ಸೀಬೆ, ಸೇಬು, ಪಪ್ಪಾಯ, ಮಾವು, ಸೀತಾಫಲ ಗಿಡಗಳೂ ಇವೆ. ಇಲ್ಲಿ ಎಲ್ಲಾ ಕಾಲದಲ್ಲೂ ಒಂದಲ್ಲಾ ಒಂದು ಬಗೆಯ ಹಣ್ಣುಗಳು ಕಣ್ಣಿಗೆ ಬೀಳುತ್ತವೆ. ಖರ್ಜೂರಕ್ಕೆ ತೆಂಗಿನ ಬೆಳೆಗೆ ಕಾಣಿಸಿಕೊಳ್ಳುವ ‘ರೆಡ್ ಪಾಮ್ ವೇಲ್’ (ಕೆಂಪು ತಲೆ) ಹುಳುವಿನ ಕಾಟ ಹೆಚ್ಚು. ಆಗಿಂದಾಗ್ಗೆ ಮರದ ಸುಳಿಗಳನ್ನು ಎಚ್ಚರದಿಂದ ನೋಡುತ್ತಿರಬೇಕು. ಹಣ್ಣಿಗೆ ಬಂದ ಸಮಯದಲ್ಲಿ ಹಕ್ಕಿ–ಪಕ್ಷಿಗಳು ಹಣ್ಣನ್ನು ಕುಕ್ಕಿ ಗಾಯ ಮಾಡುವುದನ್ನು ತಡೆಯಲು ಗೊಂಚಲಿಗೆ ಚೀಲದ ರೀತಿಯಲ್ಲಿ ಹೊದಿಕೆ ಹಾಕಬೇಕು’ ಎಂದು ಅವರು ಮಾಹಿತಿ ನೀಡಿದರು.

ಉಷ್ಣಾಂಶ ಹೆಚ್ಚಿದ್ದಷ್ಟೂ ಒಳಿತು

‘ಗುಜರಾತ್ನಲ್ಲಿ ಉಷ್ಣಾಂಶ ಸರಾಸರಿ 40 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚು ಇರುವ ಕಾರಣ ಖರ್ಜೂರದ ಹಣ್ಣಿನ ಇಳುವರಿ ಮತ್ತು ಗುಣಮಟ್ಟ ಎರಡೂ ಉತ್ತಮವಾಗಿರುತ್ತದೆ. ನಮ್ಮಲ್ಲಿ 33ರಿಂದ 38 ಡಿಗ್ರಿ ಸೆಲ್ಸಿಯಸ್ವರೆಗೆ ಇರುವ ಕಾರಣ ಖರ್ಜೂರ ಬೆಳೆಯಲು ತೊಂದರೆಯಾಗದು. ಗುಜರಾತ್ನಲ್ಲಿ ದಿನಕ್ಕೆ ಗಿಡವೊಂದಕ್ಕೆ 150 ಲೀಟರ್ ನೀರು ಉಣಿಸಿದರೆ, ನಮ್ಮಲ್ಲಿ 10ರಿಂದ 15 ಲೀಟರ್ ನೀರು ಸಾಕಾಗುತ್ತದೆ. ಹೀಗಾಗಿ ಕಡಿಮೆ ನೀರಿನಲ್ಲಿ ಖರ್ಜೂರ ಬೆಳೆಯಬಹುದಾಗಿದೆ. ಕೂಲಿಯವರು ಹೆಚ್ಚು ಬೇಕಾಗಿಲ್ಲ. ಕಳ್ಳರ ಕಾಟವಿಲ್ಲ. ಹೆಚ್ಚೆಂದರೆ ಗಿಡದ ಕೆಳಗೆ ಉದುರಿದ ಹಣ್ಣುಗಳನ್ನು ಆಯ್ದು ತಿನ್ನಬಹುದು. ನಮ್ಮ ತೋಟಕ್ಕೆ ಯಾವುದೇ ದಿಕ್ಕಿನಿಂದ ಯಾರೇ ಪ್ರವೇಶಿಸಿದರೂ ಕಾಣಿಸುವಂತೆ ಸಿ.ಸಿ. ಟಿವಿ ಕ್ಯಾಮೆರಾ ಅಳವಡಿಸಿದ್ದೇವೆ. ಯಾರೇ ಬಂದರೂ ನಮ್ಮ ಮೊಬೈಲ್ಗೆ ಸಂದೇಶ ಬರುತ್ತದೆ’ ಎಂದು ಅವರು ತಿಳಿಸಿದರು.

ಬಯಲುಸೀಮೆಗೆ ಹೇಳಿ ಮಾಡಿಸಿದ ಬೆಳೆ

‘ಆರಂಭದಲ್ಲಿ ಸಸಿ ತಂದು ನಾಟಿ ಮಾಡಲು ಹೆಚ್ಚು ಹಣ ತೊಡಗಿಸಬೇಕು. ನಾಲ್ಕು ವರ್ಷ ತಾಳ್ಮೆಯಿಂದ ಗಿಡಗಳನ್ನು ನಿರ್ವಹಣೆ ಮಾಡಿದರೆ ನಮ್ಮ ನಂತರದ ತಲೆಮಾರಿನವರೂ ನೆಮ್ಮದಿಯಿಂದ ಬದುಕು ನಡೆಸಬಹುದು. ಒಮ್ಮೆ ನಾಟಿ ಮಾಡಿದ ಖರ್ಜೂರ ಗಿಡ 15ರಿಂದ 25 ಮೀಟರ್ ಎತ್ತರಕ್ಕೆ ಬೆಳೆಯಲಿದ್ದು, 150 ವರ್ಷದವರೆಗೂ ಬಾಳುತ್ತದೆ’ ಎಂದು ವಿವರಿಸಿದರು ಫಾತಿಮಾ.

ಆಸಕ್ತರ ಮಾಹಿತಿಗಾಗಿ: ಫಾತಿಮಾ ಮೊಬೈಲ್ ಸಂಖ್ಯೆ: 9343546994
.ಚಿಕ್ಕಬಳ್ಳಾಪುರ: ಬಯಲು ಸೀಮೆಯಲ್ಲಿ ಖರ್ಜೂರದ ಘಮ.ಮರಳಿ ಮಣ್ಣಿಗೆ: ತೋಟದಲ್ಲಿ ಖರ್ಜೂರದ ಘಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.