ಹಿರಿಯೂರು (ಚಿತ್ರದುರ್ಗ): ಇಲ್ಲಿನ ಲಕ್ಷ್ಮಮ್ಮ ಬಡಾವಣೆಯ ಇಂದ್ರಜಿತ್ ಎಂಬುವರ ಮನೆಯ ಬೀಗ ಮುರಿದು ಚಿನ್ನಾಭರಣ ಕಳವು ಮಾಡಿದ ಘಟನೆ ಬುಧವಾರ ರಾತ್ರಿ ನಡೆದಿದೆ.

ಇಂದ್ರಜಿತ್ ಅವರು ಮನೆಯಲ್ಲಿ ಇರದೇ ಇರುವುದನ್ನು ಗಮನಿಸಿ ಕಳವು ಮಾಡಲಾಗಿದೆ. ಬೀಗ ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಅಲ್ಮೆರಾದಲ್ಲಿದ್ದ ವಸ್ತುಗಳನ್ನು ದೋಚಿದ್ದಾರೆ. ಇಂದ್ರಜಿತ್ ಅವರು ಮನೆಗೆ ಮರಳಿದ ಬಳಿಕ ಕಳವಾಗಿರುವ ಚಿನ್ನಾಭರಣದ ನಿಖರ ಮಾಹಿತಿ ಸಿಗಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಿವೃತ್ತ ವಿದ್ಯಾಧಿಕಾರಿ ಎಚ್.ಎಂ. ಬಸವರಾಜ ಎಂಬುವರಿಗೆ ಸೇರಿದ ಕಟ್ಟಡದ ಮೊದಲ ಮಹಡಿಯ ಮನೆಯಲ್ಲಿ ಇಂದ್ರಜಿತ್ ವಾಸವಾಗಿದ್ದರು. ಸಾಯಿ ಗಾರ್ಡನ್ ಬಡಾವಣೆಯ ನರಸಿಂಹಮೂರ್ತಿ ಎಂಬುವರ ಮನೆಯಲ್ಲಿ ಎರಡು ದಿನಗಳ ಹಿಂದೆ ಕಳವು ನಡೆದಿತ್ತು. ನಿರಂತರವಾಗಿ ನಡೆಯುತ್ತಿರುವ ಈ ಕೃತ್ಯದಿಂದ ಜನರು ಆತಂಕಗೊಂಡಿದ್ದಾರೆ.

ಸ್ಥಳಕ್ಕೆ ಡಿವೈಎಸ್ಪಿ ರೋಷನ್ ಜಮೀರ್, ನಗರಠಾಣೆ ಇನ್ ಸ್ಪೆಕ್ಟರ್ ಶಿವಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.