ಹೊಳಲ್ಕೆರೆ: ವಿದ್ಯಾರ್ಥಿಗಳು ಗುರುಗಳ ಬಗ್ಗೆ ವಿನಯ, ವಿಧೇಯತೆ ಬೆಳೆಸಿಕೊಳ್ಳಬೇಕು ಎಂದು ಮುಖ್ಯಶಿಕ್ಷಕ ಜಿ.ಪ್ರಕಾಶ್ ಸಲಹೆ ನೀಡಿದರು.

ಪಟ್ಟಣದ ಎನ್ಇಎಸ್ ಸರ್ಕಾರಿ ಶಾಲೆಯಲ್ಲಿ ಸೋಮವಾರ ನಡೆದ ಗುರುಪೂರ್ಣಿಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಗುರು ಶಿಷ್ಯರ ಸಂಬಂಧ ಪವಿತ್ರವಾಗಿದ್ದು, ವಿದ್ಯೆ ಕಲಿಸಿದ ಗುರುವಿನ ಬಗ್ಗೆ ಗೌರವ ಇರಬೇಕು. ಸಮಾಜದಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನವಿದ್ದು, ಗುರುವನ್ನು ಆದರ್ಶವಾಗಿ ಇಟ್ಟುಕೊಳ್ಳಬೇಕು. ತಾನು ವಿದ್ಯೆ ಕಲಿಸಿದ ವಿದ್ಯಾರ್ಥಿಯೊಬ್ಬ ದೊಡ್ಡ ಸಾಧನೆ ಮಾಡಿದರೆ ಶಿಕ್ಷಕನಿಗೆ ಸಾರ್ಥಕ ಭಾವ ಮೂಡುತ್ತದೆ. ವಿದ್ಯಾರ್ಥಿಗಳೂ, ತಮಗೆ ಅಕ್ಷರ ಕಲಿಸಿದ ಗುರುಗಳನ್ನು ಜೀವನ ಪರ್ಯಂತ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ವಿದ್ಯೆಯ ಜತೆಗೆ ಸಂಸ್ಕಾರ ಅಳವಡಿಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳಾದ ಜೆ.ವಿಜಯ್, ದರ್ಶಿನಿ, ಭೂಮಿಕಾ, ನಿತಿನ್, ಎಂ.ಟಿ.ಯಶೋದಾ, ಜಿ.ಅಮೃತಾ, ಎಸ್.ನಂದಿತಾ ಗುರುಗಳ ಬಗ್ಗೆ ಮಾತನಾಡಿದರು.

ಸಹಶಿಕ್ಷಕರಾದ ಎನ್.ಕಾಂತರಾಜ್, ಬಿ.ಎ.ರಾಧಮ್ಮ, ಬಿ.ಆರ್.ಜ್ಯೋತಿ, ಪುಷ್ಪಾವತಿ, ನೇತ್ರಾವತಿ, ಸುಕನ್ಯಾ, ಮಮತಾ, ಶುಭಾರಾಣಿ, ಸುಮಾ ರಾಮಗಿರಿ, ರೀಟಾ, ರೂಪಾ, ಲಿಂಗರಾಜು ಹಾಗೂ ವಿದ್ಯಾರ್ಥಿಗಳು ಇದ್ದರು.

ಎಸ್.ಡಯಾನಾ ಸ್ವಾಗತಿಸಿದರು. ಜೆ.ದೀಪಿಕಾ ಕಾರ್ಯಕ್ರಮ ನಿರೂಪಿಸಿದರು. ವರ್ಷಿಣಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.