ಚಳ್ಳಕೆರೆ: ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ತೊಗರಿ ಬೆಳೆಗೆ ಗೂಡುಮಾರು, ಕಾಯಿಕೊರಕ ಹುಳು ಹಾಗೂ ಬಂಜೆರೋಗ (ವೈರಸ್) ಕಾಣಿಸಿಕೊಂಡಿರುವ ಕಾರಣ ಕೃಷಿ ಹಾಗೂ ತೋಟಗಾರಿಕಾ ಇಲಾಖೆ ಅಧಿಕಾರಿಗಳು ಶುಕ್ರವಾರ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲಿಸಿದರು.

ಶೇಂಗಾ, ಸಜ್ಜೆ ಬೆಳೆ ನಡುವೆ ತೊಗರಿ ಅಕ್ಕಡಿಯಾಗಿ ಬೆಳೆಯಲಾಗಿದೆ. ಕೆಲವರು ಬರೀ ತೊಗರಿಯನ್ನೇ ಪ್ರಧಾನವಾಗಿ ಬಿತ್ತನೆ ಮಾಡಿದ್ದಾರೆ. ಬೆಳೆಗಾರರು ಆತಂಕಪಡುವ ಅಗತ್ಯವಿಲ್ಲ. 0.3 ಗ್ರಾಂ ಎಂ.ಎಂ. ಹ್ಯಾಕ್ಸನ್ ಬೆಂಜೋಮಿಯಾವನ್ನು ಲೀಟರ್ ನೀರಿನೊಂದಿಗೆ ಮಿಶ್ರಣ ಮಾಡಿ ಬೆಳೆಗೆ ಸಿಂಪರಣೆ ಮಾಡುವುದರಿಂದ ರೋಗ ಹತೋಟಿಗೆ ಬರುತ್ತದೆ ಎಂದು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಡಾ.ವಿರೂಪಾಕ್ಷಪ್ಪ ತಿಳಿಸಿದರು.

ಋತುಮಾನ ಹೊರತುಪಡಿಸಿ ನಾಟಿ ಮಾಡಿದ ಈರುಳ್ಳಿ ಬೆಳೆಗೆ ನೇರಳೆ ಹಾಗೂ ಕೊಳೆರೋಗ ಕಾಣಿಸಿಕೊಳ್ಳುತ್ತದೆ. ಆಯಾ ಕಾಲಮಾನಕ್ಕೆ ಅನುಸಾರವಾಗಿ ಆಯಾ ಬೆಳೆಗಳನ್ನು ಬೆಳೆಯುವುದನ್ನು ರೈತರು ರೂಢಿಸಿಕೊಳ್ಳಬೇಕು. ಸಕಾಲದಲ್ಲಿ ಬಿತ್ತನೆ ಮಾಡಿದರೆ ಉತ್ತಮ ಇಳುವರಿ ಬರುವ ಮೂಲಕ ಉತ್ತಮ ಆದಾಯವೂ ಕೈ ಸೇರುತ್ತದೆ. ಹಿಂಗಾರಿನ ನವೆಂಬರ್ ತಿಂಗಳಲ್ಲಿ ಮತ್ತು ಮುಂಗಾರಿನ ಏಪ್ರಿಲ್ ತಿಂಗಳಲ್ಲಿ ಈರುಳ್ಳಿ ಬಿತ್ತನೆ ಮಾಡುವ ಬದಲಿಗೆ ಕೆಲವರು ಅಗಸ್ಟ್ ತಿಂಗಳಲ್ಲಿ ಬಿತ್ತನೆ ಮಾಡಿರುವುದರಿಂದ ಬೆಳೆ ಕುಂಠಿತಗೊಂಡಿದೆ. ಅಲ್ಲದೇ ಅಕಾಲಿಕ ಮಳೆಗೂ ಸಿಲುಕಿ ಬೆಳೆ ನಾಶವಾಗಿದೆ ಎಂದು ಹೇಳಿದರು.

ನಾಯಕನಹಟ್ಟಿ ಕೃಷಿ ಅಧಿಕಾರಿ ಹೇಮಂತಕುಮಾರ್, ರೈತ ಶಿವಕುಮಾರ್, ಮಂಜುನಾಥ, ರಾಜಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.