ಜಿಲ್ಲೆಯಲ್ಲಿ ಜಲವಾಹನಗಳ ಕೊರತೆ ಇದೆ. ಅನಿವಾರ್ಯ ಸಮಯದಲ್ಲಿ ದಾವಣಗೆರೆಯಿಂದ ವಾಹನ ಕರೆಯಿಸಿಕೊಳ್ಳುತ್ತೇವೆ. ಬರದ ಕಾರಣಕ್ಕೆ ನೀರಿನ ಸಮಸ್ಯೆಯೂ ಎದುರಾಗಿದೆ. ಹೆಚ್ಚುವರಿ ವಾಹನಗಳನ್ನು ನೀಡಿದರೆ ಕಾರ್ಯಾಚರಣೆಗೆ ಅನುಕೂಲವಾಗಲಿದೆ.ಸೋಮಶೇಖರ್ ವಿ.ಅಗಡಿ ಜಿಲ್ಲಾ ಅಗ್ನಿಶಾಮಕ ಅಧಿಕಾರಿ
ಧರ್ಮಪುರದಲ್ಲಿ ಅಗ್ನಿಶಾಮಕ ಠಾಣೆ ಪ್ರಾರಂಭಿಸಬೇಕು ಎಂದು ಸ್ಥಳ ಪರಿಶೀಲನೆ ನಡೆಸಿ ಒಂದು ಹಂತದ ಸಿದ್ಧತೆ ಪೂರ್ಣಗೊಳಿಸಲಾಗಿತ್ತು. ಸಚಿವ ಸಂಪುಟದ ಒಪ್ಪಿಗೆ ಮತ್ತು ಅನುದಾನ ಮಂಜೂರಾದ ಕೂಡಲೇ ಹಸಿರು ನಿಶಾನೆ ದೊರೆಯಲಿದೆ.ಪಿ.ಎಸ್.ಜಯರಾಮಯ್ಯ ಮುಖ್ಯ ಅಗ್ನಿಶಾಮಕ ಅಧಿಕಾರಿ ಮೈಸೂರು ವಿಭಾಗ
ನಾಯಕನಹಟ್ಟಿ ತಳಕು ಹೋಬಳಿಯ ಗಡಿಗ್ರಾಮಗಳಲ್ಲಿ ಅಗ್ನಿಅವಘಡ ಸಂಭವಿಸಿದರೆ ಚಳ್ಳಕೆರೆಯಿಂದ ಅಗ್ನಿಶಾಮಕ ವಾಹನ ಬರುವಷ್ಟರಲ್ಲಿ ಬಣವೆಗಳು ಸುಟ್ಟಿರುತ್ತವೆ. ಇದರಿಂದ ರೈತರಿಗೆ ನಷ್ಟ ಹೆಚ್ಚು. ಎರಡು ಹೋಬಳಿಗೆ ಒಂದರಂತೆ ಠಾಣೆ ನಿರ್ಮಿಸಿದರೆ ಅನುಕೂಲ.ಟಿ.ಕೃಷ್ಣಮೂರ್ತಿ ಗ್ರಾಮಸ್ಥ ತಳಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.