ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ: ರೈಲ್ವೆ ಕೆಳ ಸೇತುವೆ ಸಂಚಾರ; ವಾಹನ ಸವಾರಿ ಬಲು ದುಸ್ತರ

ಮಳೆಗಾಲದಲ್ಲಿ ಸೃಷ್ಟಿಯಾಉವ ಗುಂಡಿಗಳು, ಬಿದ್ದು ಗಾಯಗೊಳ್ಳುತ್ತಿರುವ ವಾಹನ ಸವಾರರು
Published : 21 ಅಕ್ಟೋಬರ್ 2024, 7:31 IST
Last Updated : 21 ಅಕ್ಟೋಬರ್ 2024, 7:31 IST
ಫಾಲೋ ಮಾಡಿ
Comments
ಹೊಸದುರ್ಗದ ರೈಲ್ವೆ ಕೆಳೆ ಸೇತುವೆ ರಸ್ತೆಯಲ್ಲಿ ನೀರು ನಿಂತಿರುವುದು
ಹೊಸದುರ್ಗದ ರೈಲ್ವೆ ಕೆಳೆ ಸೇತುವೆ ರಸ್ತೆಯಲ್ಲಿ ನೀರು ನಿಂತಿರುವುದು
ನಗರದಾದ್ಯಂತ ಇರುವ ರಸ್ತೆಯ ದುರವಸ್ತೆಯನ್ನು ಸರಿಪಡಿಸಲು ಯೋಜನೆ ರೂಪಿಸಲಾಗಿದೆ. ಮೆದೇಹಳ್ಳಿ ರೈಲ್ವೆ ಕೆಳಸೇತುವೆಯಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಲಾಗುವುದು
ಟಿ. ವೆಂಕಟೇಶ್‌ ಜಿಲ್ಲಾಧಿಕಾರಿ
ಜೀವ ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ಶ್ವೇತಾ ಜಿ.
ಹೊಸದುರ್ಗ: ಇಲ್ಲಿನ ರೈಲ್ವೆ ನಿಲ್ದಾಣದ ಸಮೀಪವಿರುವ ಕೆಳಸೇತುವೆಯು ಮಳೆ ಬಂದಾಗ ಕೆಸರು ಗದ್ದೆಯಂತಾಗುತ್ತದೆ. ಈ ಸೇತುವೆಗುಂಟ ಸಂಚರಿಸುವ ಜನರು ಕಷ್ಟಪಡುವಂತಿದೆ. ಕೆಳಸೆತುವೆಯಲ್ಲಿ ನೀರು ಸಂಗ್ರಹವಾಗುತ್ತದೆ. ಮಣ್ಣಿನ ರಸ್ತೆಯಲ್ಲಿಯೇ ಜನರು ಓಡಾಡಬೇಕು. ನಿತ್ಯ ನೂರಾರು ಜನರು ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ನಡೆದು ಬರುವವರು ಕೈಯಲ್ಲಿ ಜೀವ ಹಿಡಿದು ನಡೆಯಬೇಕು. ವಾಹನ ಸವಾರರ ಕಷ್ಟವಂತೂ ಹೇಳತೀರದು. ಹೊಸದುರ್ಗ ರಸ್ತೆಯಿಂದ ಬಿದರಿಕೆರೆ ಮಲ್ಲೇನಹಳ್ಳಿ ಅರಬಘಟ್ಟ ರಾಮಗಿರಿ ನವಣೆಕೆರೆ ಮುದ್ದಾಪುರ ಕಣಿವೆಹಳ್ಳಿ ಶಿವನಿ ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ತಲುಪುವವರು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ವಾಹನಗಳು ಓಡಾಡಲು ಏಕಮುಖ ರಸ್ತೆ ನಿರ್ಮಿಸಬೇಕು. ಒಮ್ಮೊಮ್ಮೆ ಸಂಚಾರ ದಟ್ಟಣೆಯೂ ಉಂಟಾಗುತ್ತದೆ. ಮಳೆ ಬಂದರಂತೂ ಈ ಮಾರ್ಗದಲ್ಲಿ ಓಡಾಡುವುದು ಕಷ್ಟವಾಗುತ್ತದೆ. ಧಾರಾಕಾರ ಮಳೆ ಬಂದಾಗ ವಾರದವರೆಗೂ ಈ ಮಾರ್ಗದಲ್ಲಿ ಓಡಾಡಲು ಆಗದು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು  ಒತ್ತಾಯಿಸಿ‌ದ್ದಾ‌ರೆ.
ಆರ್‌ಯುಬಿಗಳ ಅವಾಂತರ ಜೆ. ತಿಮ್ಮಪ್ಪ
ಚಿಕ್ಕಜಾಜೂರು: ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ ರೈಲ್ವೆ ಕೆಳ ಸೇತುವೆ (ಆರ್‌ಯುಬಿ)ಗಳ ಮೂಲಕ ಮಳೆಗಾಲದಲ್ಲಿ ಸಂಚರಿಸುವುದು ದುಸ್ತರವಾಗುತ್ತದೆ. ಚಿಕ್ಕಜಾಜೂರು ಮೂಲಕ ಹಾದು ಹೋಗುವ ರೈಲು ಮಾರ್ಗದಲ್ಲಿ ನಿರ್ಮಿಸಲಾದ ಕೆಳ ಸೇತುವೆಗಳು ಪ್ರಯಾಣಿಕರಿಗೆ ಮಳೆಗಾಲದಲ್ಲಿ ನರಕ ತೋರಿಸುತ್ತವೆ. ವಾಹನ ಚಾಲಕರು ಪಾದಚಾರಿಗಳು ರೈಲ್ವೆ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ. ಚಿಕ್ಕಜಾಜೂರು– ಚಿತ್ರದುರ್ಗ ಚಿಕ್ಕಜಾಜೂರು–ಬೀರೂರು ಚಿಕ್ಕಜಾಜೂರು– ದಾವಣಗೆರೆ ರೈಲ್ವೆ ಮಾರ್ಗಗಳಲ್ಲಿ ಕೆಳ ಸೇತುವೆಗಳನ್ನು ನಿರ್ಮಿಸಲಾಗಿದೆ. ಆದರೆ ಈ ಎಲ್ಲಾ ಕೆಳ ಸೇತುವೆಗಳು ಅವೈಜ್ಞಾನಿಕವಾಗಿವೆ. ಮಳೆಗಾಲದಲ್ಲಿ ಕೆಳ ಸೇತುವೆಗಳಲ್ಲಿ ನೀರು ನಿಂತು ಪ್ರಯಾಣಿಕರು ಪರದಾಡುವುದು ಮಾಮೂಲು. ಸಮೀಪದ ಹೊಸನಗರ ಬಡಾವಣೆ ಹಾಗೂ ಜಮೀನುಗಳಿಗೆ ಹೋಗುವ ಮಾರ್ಗದಲ್ಲಿ ನಿರ್ಮಿಸಿರುವ ಕೆಳ ಸೇತುವೆಯಲ್ಲಿ ಮಳೆ ಬಂದಾಗ ಎರಡು ಅಡಿಗಳಷ್ಟು ನೀರು ಸಂಗ್ರಹಗೊಳ್ಳುತ್ತದೆ. ಸಮೀಪದ ಚಿಕ್ಕಂದವಾಡಿ ಹನುಮನಕಟ್ಟೆ ಹಾಗೂ ಅಮೃತಾಪುರ ಗ್ರಾಮಗಳ ಬಳಿ ನಿರ್ಮಿಸಿರುವ ಕೆಳ ಸೇತುವೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಇದರಿಂದಾಗಿ ಅಮೃತಾಪುರ ಕಾಶೀಪುರ ಚಿತ್ರಹಳ್ಳಿ ಚಿಕ್ಕಜಾಜೂರು ಕೇಶವಾಪುರ ಹನುಮನಕಟ್ಟೆ ಅರಸನಘಟ್ಟ ಬಿಜ್ಜೆನಾಳ್‌ ಮೊದಲಾದ ಗ್ರಾಮಸ್ಥರು 25-30 ಕಿ.ಮೀ. ದೂರದ ಪರ್ಯಾಯ ಮಾರ್ಗದಲ್ಲಿ ಸಂಚರಿಸುವ ಅನಿವಾರ್ಯ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT