ಸುಳ್ಯ: ಅನರ್ಹರ ಬಿಪಿಎಲ್ ಪಡಿತರ ಚೀಟಿ ರದ್ದತಿ ಪ್ರಕ್ರಿಯೆ ಆರಂಭವಾಗಿದ್ದು, ಸುಳ್ಯ ತಾಲ್ಲೂಕಿನಲ್ಲಿ 2,998 ಕಾರ್ಡ್ ರದ್ದಾಗುವ ಸಂಭವ ಇದೆ.

ಸುಳ್ಯ ತಾಲ್ಲೂಕಿನಲ್ಲಿ 16 ಸಾವಿರಕ್ಕಿಂತ ಹೆಚ್ಚು ಬಿಪಿಎಲ್ ಪಡಿತರ ಚೀಟಿ ಇದ್ದು, ಇದರಲ್ಲಿ ನಕಲಿ ಹಾಗೂ ಆದಾಯ ತೆರಿಗೆ ಪಾವತಿದಾರರು ಎಂಬ ಎರಡು ಪಟ್ಟಿಯನ್ನು ಸರ್ಕಾರವೇ ಸಾಫ್ಟ್ವೇರ್ ಮೂಲಕ ಸಿದ್ಧಪಡಿಸಿದೆ. ಸುಳ್ಯ ತಾಲ್ಲೂಕಿನಲ್ಲಿ ಇಂಥ ಸುಮಾರು 2,998 ಪಡಿತರ ಚೀಟಿ ದಾರರನ್ನು ಗುರುತಿಸಿ ಸುಳ್ಯ ತಾಲ್ಲೂಕು ಕಚೇರಿಯಲ್ಲಿರುವ ಆಹಾರ ಇಲಾಖೆಗೆ ಪಟ್ಟಿ ರವಾನಿಸಿದೆ.

ಈ ಪೈಕಿ 257 ಕುಟುಂಬಗಳು ಆದಾಯ ತೆರಿಗೆ ಪಾವತಿದಾರರೆಂದು ಗುರುತಿಸಲಾಗಿದ್ದು, ಅವರಿಗೆ ಸುಳ್ಯ ಆಹಾರ ಇಲಾಖೆ ನೋಟಿಸ್ ನೀಡಿ ಕಚೇರಿಗೆ ಬರುವಂತೆ ಸೂಚನೆ ನೀಡಿತ್ತು. ಅವರಲ್ಲಿ ಹೆಚ್ಚಿನವರು ಕಚೇರಿಗೆ ಬಂದು ವರದಿ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ. ಈ ಪೈಕಿ ಬಂದವರಲ್ಲಿ 42 ಕುಟುಂಬಗಳು ಬಿಪಿಎಲ್ ಅರ್ಹತೆಗಿಂತ ಹೆಚ್ಚಿನ ಆದಾಯ ಹೊಂದಿರುವುದು ಗೊತ್ತಾಗಿದ್ದು, ಅವರ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಮಾಡಲಾಗಿದೆ. ಅಲ್ಲದೆ 9 ಬಿಪಿಎಲ್ ಪಡಿತರ ಚೀಟಿಗಳನ್ನು ಎಪಿಎಲ್ ಮಾಡಲಾಗಿದೆ. 136 ಬಿಪಿಎಲ್ ಪಡಿತರ ಚೀಟಿದಾರರು ಹೆಚ್ಚಿನ ಆದಾಯ ಹೊಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ವಿಶೇಷ ತಂಡ ಪರಿಶೀಲನೆ ನಡೆಸಲಿದ್ದು, ಸರ್ಕಾರ ನೀಡಿರುವ 2.098 ಕುಟುಂಬಗಳ ಮಾಹಿತಿಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಲಿದೆ. ಸುಮಾರು 6 ತಿಂಗಳಿಂದ ಪಡಿತರ ಅಕ್ಕಿ ಪಡೆಯದೆ ಇರುವ ಸುಮಾರು 126 ಚೀಟಿಗಳು ರದ್ದಾಗಿವೆ.

ಅರಂತೋಡು ಕಡೆಯ ಮಹಿಳೆಯೊಬ್ಬರಿಗೆ 4 ಎಕರೆ ಕೃಷಿ ಭೂಮಿ ಇದೆ. ಮಾನದಂಡ ಪ್ರಕಾರ ಅವರಿಗೆ ಬಿಪಿಎಲ್ ಕಾರ್ಡ್ ನೀಡುವಂತಿಲ್ಲ. ಅವರ ಹೆಸರೂ ಸರ್ಕಾರದಿಂದ ಬಂದ ಪಟ್ಟಿಯಲ್ಲಿತ್ತು. ಆದರೆ, ಈ ಬಗ್ಗೆ ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಆ ಮಹಿಳೆಯ ನಾಲ್ಕು ಎಕರೆ ತೋಟದ ಅಡಿಕೆ ಮರಗಳಿಗೆ ಹಳದಿ ಎಲೆ ರೋಗ ಬಾಧಿಸಿ ಆಕೆಗೆ ಆದಾಯ ಇಲ್ಲದಂತಾಗಿರುವ ಅಧಿಕಾರಿಗಳಿಗೆ ಕಂಡುಬಂದಿದೆ. ಸೊಸೈಟಿ ಸಾಲ ಪಡೆಯದೆ ಬದುಕಲು ಅಸಾಧ್ಯವಾದ ವಾತಾವರಣವಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದು, ಅವರ ಬಿಪಿಎಲ್ ಕಾರ್ಡ್ ರದ್ದಾಗದೆ ಉಳಿದಿದೆ.

ವಿಶೇಷ ತಂಡ ಪರಿಶೀಲನೆ

ತಾಲ್ಲೂಕಿನಲ್ಲಿ ಸುಮಾರು 1,382 ಅಂತ್ಯೋದೋಯ ಪಡಿತರ ಚೀಟಿ ಇದ್ದು, ಅವುಗಳಲ್ಲಿ ಕೆಲವರು ಬಿಪಿಎಲ್ಗೆ ಪರಿವರ್ತನೆ ಮಾಡುವಂತೆ ಕೇಳಿಕೊಳ್ಳುತ್ತಿದ್ದಾರೆ. ಕೆಲವು ಕುಟುಂಬದವರು ಬ್ಯಾಂಕ್ ಸಾಲಕ್ಕಾಗಿ ಗ್ರಾಮ ಆಡಳಿತಾಧಿಕಾರಿ ಮೂಲಕ ಹೆಚ್ಚು ಆದಾಯ ಬರೆಸಿಕೊಂಡಿದ್ದರಿಂದ ಸಮಸ್ಯೆಗೀಡಾಗಿದ್ದಾರೆ.

ಐವರ್ನಾಡಿನಲ್ಲಿ 6, ಮರ್ಕಂಜ 3, ಸುಳ್ಯ ಪಟ್ಟಣ 9, ಅಮರ ಮುಡ್ನೂರು 5, ಉಬರಡ್ಕ 1, ಜಾಲ್ಸೂರು 5, ಮಂಡೆಕೋಲು 4, ದೇವಚಳ್ಳ 2, ನೆಲ್ಲೂರು ಕೆಟ್ರಾಜೆ, ಕಲ್ಲಡ್ಕ, ಬೆಳ್ಳಾರೆ, ಪೆರುವಾಜೆ, ಕಳಂಜ, ಗುತ್ತಿಗಾರು, ಹರಿಹರ ಗ್ರಾಮಗಳಲ್ಲಿ ತಲಾ ಒಂದು ಕಾರ್ಡ್ ರದ್ದಾಗಿವೆ ಎಂದು ಆಹಾರ ನಿರೀಕ್ಷಕಿ ಅನಿತಾ ಟಿ.ಎ. ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.