ಬದಿಯಡ್ಕ: ಪೆರ್ಲದ ಸತ್ಯನಾರಾಯಣ ಎಎಲ್‌ಪಿ ಶಾಲೆಯ ನಾಲ್ಕನೇ ತರಗತಿಯನ್ನು ಕ್ಲಾಸ್ ರಕ್ಷಕ ಶಿಕ್ಷಕ ಸಂಘದ ನೇತೃತ್ವದಲ್ಲಿ ಅತ್ಯಾಧುನಿಕ ಸೌಲಭ್ಯದ ಸ್ಮಾರ್ಟ್ ಕ್ಲಾಸ್ ರೂಂ ಆಗಿ ಮಾರ್ಪಡಿಸಿದ್ದು ಉದ್ಘಾಟನೆ ಈಚೆಗೆ ನಡೆಯಿತು.

₹ 90 ಸಾವಿರ ವೆಚ್ಚದಲ್ಲಿ ನಿರ್ಮಿಸಿದ ಸ್ಮಾರ್ಟ್ ತರಗತಿಯ ವ್ಯವಸ್ಥೆ ಕಿರಿಯ ಪ್ರಾಥಮಿಕ ಶಾಲಾ ಮಟ್ಟದಲ್ಲಿ ಜಿಲ್ಲೆಯಲ್ಲೇ ಮೊದಲ ಪ್ರಯೋಗ ಎಂದು ಉದ್ಘಾಟಿಸಿದ ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಶಶಿಧರ್ ಎಂ.ತಿಳಿಸಿದರು.

ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಜ್ಯೋತಿ ಲಕ್ಷ್ಮಿ ಕಾಕುಂಜೆ ಅಧ್ಯಕ್ಷತೆ ವಹಿಸಿದ್ದರು. ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್, ಸತ್ಯನಾರಾಯಣ ಫ್ರೌಢಶಾಲಾ ಮುಖ್ಯೋಪಾಧ್ಯಾಯ ಕೇಶವ ಪ್ರಕಾಶ್ ಎನ್, ಆಡಳಿತ ಸಮಿತಿ ಉಪಾಧ್ಯಕ್ಷ ಸದಾಶಿವ ಭಟ್ ಹರಿನಿಲಯ, ಪ್ರೋಗ್ರಾಂ ಸಮಿತಿ ಅಧ್ಯಕ್ಷ ರಮೇಶ್ಚಂದ್ರ ರೈ ನಡುಬೈಲ್, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರವಿಚಂದ್ರ ಸೂರ್ಡೇಲು, ಕ್ಲಾಸ್ ಪಿಟಿಎ ಅಧ್ಯಕ್ಷರಾದ ಸುನಂದ ರೈ ಪೆರ್ಲ, ರಾಮಣ್ಣ ನಾಯ್ಕ್ ಬಜಕೂಡ್ಲು ಹಾಗೂ ಶಾಲಾ ನಾಯಕಿ ದಿಯಾ ಇದ್ದರು. ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಭಟ್ ಕೋಟೆ ಸ್ವಾಗತಿಸಿದರು. ಶಿಕ್ಷಕ ಉದಯ ಸಾರಂಗ್ ವಂದಿಸಿದರು. ಬೀವಿ ಟೀಚರ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.