ಬೆಳ್ತಂಗಡಿ: ‘ಬೆಳ್ತಂಗಡಿಯಲ್ಲಿ ಭಾರತ ಬೀಡಿ ಕಂಪನಿ ಉಳಿಸಲು ನಡೆಸಿದ ಹೋರಾಟ ಯಶಸ್ವಿಯಾಯಿತು’ ಎಂದು ಬೆಳ್ತಂಗಡಿ ತಾಲ್ಲೂಕು ಬೀಡಿ ಕೆಲಸಗಾರರ ಸಂಘದ ಅಧ್ಯಕ್ಷ ಬಿ.ಎಂ.ಭಟ್ ತಿಳಿಸಿದ್ದಾರೆ.

ಸರ್ಕಾರದ ಅನುಮತಿ ಪಡೆಯದೆ ಭಾರತ ಬೀಡಿ ಕಂಪನಿಯನ್ನು ಮುಚ್ಚಲು ನಿರ್ಧರಿಸಿದ ಮಾಲೀಕರ ನಡೆ ಖಂಡಿಸಿ ‘ಭಾರತ ಬೀಡಿ ಉಳಿಸಿ ಕಾರ್ಮಿಕರ ಬದುಕು ರಕ್ಷಿಸಿ’ ಎಂದು ಈಚೆಗೆ ಬೆಳ್ತಂಗಡಿ ತಾಲ್ಲೂಕು ಬೀಡಿ ಕೆಲಸಗಾರರ ಸಂಘ ಹಾಗೂ ಬೆಳ್ತಂಗಡಿ ತಾಲ್ಲೂಕು ಬೀಡಿ ಗುತ್ತಿಗೆದಾರರ ಸಂಘ ಅನಿರ್ದಿಷ್ಟ ಕಾಲದ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಮಾಲೀಕರು ಮಾತುಕತೆಗೆ ಮುಂದಾಗಿದ್ದರು.

ಮಂಗಳೂರಿನಲ್ಲಿ ನಡೆದ ಬೀಡಿ ಕಂಪನಿ ಮಾಲೀಕರು, ಕಾರ್ಮಿಕರ ಪ್ರತಿನಿಧಿಗಳು ಹಾಗೂ ಬೀಡಿ ಗುತ್ತಿಗೆದಾರರ ಪ್ರತಿನಿಧಿಗಳ ಸಭೆಯಲ್ಲಿ ಬೆಳ್ತಂಗಡಿ ಕಂಪನಿ ಮುಚ್ಚದಿರುವ ತೀರ್ಮಾನಕ್ಕೆ ಬರಲಾಯಿತು ಎಂದು ತಿಳಿಸಿದ್ದಾರೆ.

ಜೆ.ಬಾಲಕೃಷ್ಣ ಶೆಟ್ಟಿ, ಬಿ.ಎಂ.ಭಟ್, ಈಶ್ವರಿ, ರವಿ ಪೂಜಾರಿ, ಕೃಷ್ಣಪ್ಪ ಮಂಗಳೂರು, ರಾಧಾಕೃಷ್ಣ ಶೆಟ್ಟಿ, ಗಂಗಾಧರ ಶೆಟ್ಟಿ, ಸಿ.ಮಹಮ್ಮದ್, ಶಿವಾನಂದ ರಾವ್ ಕಕ್ಕನಾಜೆ, ರಾಮಯ್ಯ ಗೌಡ ಮಾಚಾರು, ಆನಂದ ಪೂಜಾರಿ, ಅರುಣ, ಮಹಮ್ಮದ್ ಮದ್ದಡ್ಕ, ತುಂಗಪ್ಪ ಬಂಗೇರ, ಸುಂದರ ಪೂಜಾರಿ, ಅತ್ತೂಸ್ ವೇಗಸ್, ಹೊನ್ನಪ್ಪ ಗೌಡ, ಬಾಬು ಪೂಜಾರಿ, ಶಶಿಧರ ಶೆಟ್ಟಿ, ಲಕ್ಷ್ಮಣ ಫರಂಗಿಪೇಟೆ, ಮಾಲೀಕರ ಪರವಾಗಿ ಸತೀಶ್ ಪೈ ಮತ್ತು ಉಮೇಶ್ ಶೆಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.