ಮೂಲ್ಕಿ: ಇಲ್ಲಿನ ಮೂಲ್ಕಿ ಪೊಲೀಸ್ ಠಾಣೆ ಹಾಗೂ ಮಂಗಳೂರಿನ ಪಾಂಡೇಶ್ವರ ಠಾಣೆ ವ್ಯಾಪ್ತಿಯಲ್ಲಿ ದುಬಾರಿ ಬೆಲೆಯ ಬೈಕ್‌ಗಳನ್ನು ಕಳವು ಮಾಡಿ ಉಡುಪಿಯತ್ತ ಸಾಗಿಸಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿಗಳಿಂದ ಗೊತ್ತಾಗಿದೆ.

ಒಂದೇ ತಂಡ ಸರಣಿ ಕಳ್ಳತನ ನಡೆಸಿದ್ದು ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಉಡುಪಿ ಜಿಲ್ಲೆಯತ್ತ ಸಾಗಿದ್ದು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಮೂಲ್ಕಿ ಬಪ್ಪನಾಡು ಪರಿಸರದ ನಿವಾಸಿ ನಿತೀಶ್ ಭಂಡಾರಿ ಅವರು ಬಪ್ಪನಾಡು ದೇವಸ್ಥಾನದ ಹತ್ತಿರ ನಿಲ್ಲಿಸಿದ್ದ ಬೈಕ್ ಕದ್ದಿರುವುದರ ತನಿಖೆ ನಡೆಸಿದ ಪೊಲೀಸರು ಹೆಜಮಾಡಿ ಟೋಲ್ ಗೇಟ್‌ನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆ ಮೂಲಕ ಕಳ್ಳರು ಸಾಗಿದ್ದು ಗೊತ್ತಾಗಿದೆ. ಪಡುಬಿದ್ರಿ, ಎರ್ಮಾಳ್ ಮೂಲಕ ಕಳ್ಳರು ಸಾಗಿದ್ದಾರೆ.

ಮಂಗಳೂರಿನಿಂದ ಬೈಕ್ ಕದ್ದವರು ಕೂಡ ಮೂಲ್ಕಿಯಲ್ಲಿ ಕದ್ದ ತಂಡದ ಜೊತೆಯಲ್ಲೇ ಸಾಗುತ್ತಿರುವುದು ಕಂಡು ಬಂದಿರುವುದರಿಂದ ಪ್ರಕರಣದಲ್ಲಿ ಭಾರಿ ಅನುಮಾನ ಉಂಟಾಗಿದೆ. ಕಳ್ಳರ ಕಾಪು ಮಜೂರು ಮತ್ತು ಉದ್ಯಾವರ ಕಡೆಗೆ ತೆರಳಿರುವುದರ ಮಾಹಿತಿ ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮೂಲ್ಕಿಯಿಂದ ಕಳವಾದ ಬೈಕ್‌ನಲ್ಲಿ ಇಬ್ಬರು ಮತ್ತು ಮಂಗಳೂರಿನಿಂದ ಕದ್ದ ಬೈಕ್‌ನಲ್ಲಿ ಒಬ್ಬನೇ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.