ಅಬುಧಾಬಿಯಲ್ಲಿ ನಡೆದ ಸ್ಪರ್ಧೆಯೊಂದರಲ್ಲಿ ₹50 ಲಕ್ಷಗಳನ್ನು ಗೆದ್ದ ಪುತ್ತೂರಿನ ಕುಂಜೂರು ಪಂಜದ ಹನೀಫ್ ಈ ಹಣವನ್ನು ವ್ಯಯಿಸಿದ್ದು ತನ್ನ ಬಾಲ್ಯದ ಕನಸಿಗಾಗಿ. ಗ್ರಾಮೀಣ ಪ್ರದೇಶದ, ಕಂಪ್ಯೂಟರ್ ಶಿಕ್ಷಣ ವಂಚಿತ ಸರ್ಕಾರಿ ಶಾಲೆಯ ಮಕ್ಕಳಿಗಾಗಿ ವಿಶೇಷ ಬಸ್ ಒಂದನ್ನು ನಿರ್ಮಿಸಿ ಕ್ಲಾಸ್ ಆನ್ ವೀಲ್ಸ್ ಎನ್ನುವ ಹೆಸರಿಡಲಾಗಿದೆ. ಇದಕ್ಕಾಗಿ ಹನೀಫ್ ₹50 ಲಕ್ಷವನ್ನೂ ವ್ಯಯಿಸಿದ್ದಾರೆ. ಇದೀಗ ಪುತ್ತೂರಿನ 15 ಶಾಲೆಯ ಅಂಗಳದಲ್ಲಿ ಮಕ್ಕಳಿಗೆ ಈ ಬಸ್ ಮೂಲಕ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ಹನೀಫ್ ಅವರ ಈ ಪ್ರಯತ್ನಕ್ಕೆ ಮಂಗಳೂರಿನ ಸಮಾಜ ಸೇವಾ ಸಂಘಟನೆ ಎಂ. ಫ್ರೆಂಡ್ಸ್ ಚಾರಿಟೆಬಲ್ ಟ್ರಸ್ಟ್ ಕೈಜೋಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.