ಕಾಸರಗೋಡು: ಪ್ರವಾಸಿ ಬಸ್ ಶನಿವಾರ ಕೋಯಿಕೋಡ್ ಜಿಲ್ಲೆಯ ಮಣ್ಣೂರು ಎಂಬಲ್ಲಿ ನಿಯಂತ್ರಣ ಕಳೆದುಕೊಂಡು ಮಗುಚಿ ಬಿದ್ದು ಒಬ್ಬರು ಮೃತಪಟ್ಟಿದ್ದಾರೆ.

ಕೊಲ್ಲಂ ಆಲಂಗೋಡು ನಿವಾಸಿ ಅಮಲ್ ಎಂಬವರ ಮೃತಪಟ್ಟವರು. 20 ಮಂದಿ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ತಿರುವನಂತಪುರದಿಂದ ಪ್ರವಾಸಕ್ಕೆ ಕಾಸರಗೋಡಿಗೆ ಬರುತ್ತಿದ್ದಾಗ ಅವಘಡ ನಡೆದಿದೆ.

ಗಾಯಾಳು ಸಾವು

ಕಾಸರಗೋಡು: ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಬಂಬ್ರಾಣ ಅಂಡಿತ್ತಡ್ಕ ನಿವಾಸಿ ಯೂಸುಫ್ ಕೈಫ್ (30) ಮೃತಪಟ್ಟಿದ್ದಾರೆ. 7 ದಿನಗಳ ಹಿಂದೆ ಮಂಗಲ್ಪಾಡಿ ಕುಕ್ಕಾರಿನಲ್ಲಿ ಅವರು ಸಂಚರಿಸಿದ್ದ ಬೈಕ್ ಮತ್ತು ಟ್ಯಾಂಕರ್ ಲಾರಿ ಅಪಘಾತಕ್ಕೀಡಾಗಿದ್ದವು. ಈ ವೇಳೆ ಯೂಸುಫ್ ಅವರ ತಲೆಗೆ ಗಂಭೀರ ಗಾಯಗಳಾಗಿದ್ದವು. ಅವರು ಖಾಲಿದ್-ಹಮೀದಾ ದಂಪತಿ ಪುತ್ರ. ಮಂಗಳೂರಿನ ಖಾಸಗಿ ಕಾಲೇಜು ವಿದ್ಯಾರ್ಥಿ.

ಯುವತಿ ಆತ್ಮಹತ್ಯೆ

ಕಾಸರಗೋಡು: ಮಾವುಂಗಾಲ್ ನಿವಾಸಿ ದೇವಿಕಾ ದಾಸ್ (22) ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ದೇವದಾಸ್-ಸ್ಮಿತಾ ದಂಪತಿ ಪುತ್ರಿ. ಕೋಟಯಂನ ಕಾಲೇಜೊಂದರ ವಿದ್ಯಾರ್ಥಿನಿ.

ಪರ್ತಕರ್ತರಿಗೆ ಹಲ್ಲೆ: 10 ಮಂದಿ ವಿರುದ್ಧ ಪ್ರಕರಣ

ಕಾಸರಗೋಡು: ಚೆರ್ಕಳ ಸೆಂಟ್ರಲ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಮತಗಟ್ಟೆಯೊಂದರಲ್ಲಿ ಕರ್ತವ್ಯ ನಿರತ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 10 ಮಂದಿ ವಿರುದ್ಧ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಾತೃಭೂಮಿ ನ್ಯೂಸ್ ವರದಿಗಾರ ಸಾರಂಗ್ ಸುರೇಶ್, ಮಾತೃಭೂಮಿ ಪತ್ರಿಕೆಯ ವರದಿಗಾರ ಪ್ರದೀಪ್ ನಾರಾಯಣ್, ಕೈರಳಿ ಚಾನೆಲ್ ವರದಿಗಾರ ಸಿಜು ಕಣ್ಣನ್, ಕ್ಯಾಮೆರಾಮನ್ ಷೈಜು ಪಿಲಾತ್ತರ ಎಂಬುವರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.