ಮುಡಿಪು: ಕಲ್ಲಾಪುವಿನಿಂದ ಸಜಿಪದವರೆಗೆ ನದಿ ಬದಿಯ ರಸ್ತೆ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದರ ಭಾಗವಾಗಿ ಕಲ್ಲಾಪು ಭಾಗದಲ್ಲಿ ಮೊದಲ ಹಂತ, ಹರೇಕಳದಿಂದ ಪಾವೂರು- ಸಜಿಪ ಎರಡನೇ ಹಂತದ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಹರೇಕಳ ಗ್ರಾಮದಿಂದ ಆರಂಭವಾಗಿ ಪಾವೂರು ಗ್ರಾಮ ಕೋಟೆಕಣಿ, ಸಜಿಪದವರೆಗಿನ ನದಿಬದಿಯ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಹರೇಕಳದಿಂದ ಸಜಿಪದವರೆಗೆ ದೋಣಿಯಲ್ಲಿ ತೆರಳಿ ಪರಿಶೀಲನೆ ನಡೆಸಿ ಎರಡು ಬದಿಯಲ್ಲಿ ಶಿಲಾನ್ಯಾಸ ನೆರವೇರಿಸಿದರು.

ಪಾವೂರಿನಿಂದ ಮೊದಲ ಹಂತ ₹ 10 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ಆರಂಭವಾಗಿದೆ. ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದರು.

ಕಲ್ಲಾಪುವಿನಿಂದ ಸಜಿಪವರೆಗಿನ ರಸ್ತೆ ನಿರ್ಮಾಣಕ್ಕೆ ₹ 100 ಕೋಟಿಯ ಪ್ರಸ್ತಾವನೆಯನ್ನು ಸಣ್ಣ ನೀರಾವರಿ ಇಲಾಖೆಗೆ ಸಚಿವರ ಮೂಲಕ ಸಲ್ಲಿಸಲಾಗಿದೆ. ಶೀಘ್ರವೇ ಅಂಕಿತ ಬೀಳುವ ವಿಶ್ವಾಸವಿದೆ. ಉಳ್ಳಾಲಕ್ಕೆ ಎರಡು ಬಹುದೊಡ್ಡ ಯೋಜನೆ ಕೊನೆಯ ಹಂತದಲ್ಲಿರುವ ಕಾರಣ ತುಸು ವಿಳಂಬ ಮಾಡಲಾಗಿದೆ. ಪಾವೂರು ಉಳಿಯ ತೂಗುಸೇತುವೆಯೂ ಶೀಘ್ರದಲ್ಲೇ ನಿರ್ಮಾಣವಾಗಲಿದೆ ಎಂದರು.

ಮಂಗಳೂರು ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಮೊಹಮ್ಮದ್ ಮೋನು, ಪಾವೂರು ಗ್ರಾಪಂ ಅಧ್ಯಕ್ಷ ಅಬ್ದುಲ್ ಮಜೀದ್, ಸದಸ್ಯರಾದ ರಿಯಾಜ್ ಅಹ್ಮದ್ ಪಾವೂರು, ರವಿಕಲಾ, ಪುಷ್ಪ ಭಂಡಾರಿ, ಚೆನ್ನಮ್ಮ, ಅನ್ಸಾರ್ ಇನೋಳಿ, ಇಕ್ಬಾಲ್ ಇನೋಳಿ, ವಲೇರಿಯನ್ ಡಿಸೋಜ, ಪ್ರಮುಖರಾದ ಪ್ರಭಾಕರ್ ಶೆಟ್ಟಿ, ಹನೀಫ್ ಕೆ.ಎಂ., ದಿನೇಶ್ ಪೂಜಾರಿ, ವಿವೇಕ್ ರೈ, ಅಬ್ದುಲ್ ಖಾದರ್, ಮಹಮ್ಮದ್ ಬದ್ರಿಯಾ ನಗರ, ಹಸನ್ ಎಂ.ಪಿ., ಇರ್ಫಾನ್ ಡಿ., ಮುಬಾರಕ್ ಇನೋಳಿ, ಶಬೀರ್ ಇನೋಳಿ, ಹೈದ್ರೂಸ್, ಆಸೀಫ್ ಇನೋಳಿ, ಇಮ್ತಿಯಾಜ್ ಎಂ.ಎಚ್., ಸಮದ್ ಇನೋಳಿ, ಹುಸೈನ್ ಕಡವು, ಫಾರೂಕ್ ಇನೋಳಿ, ಇಕ್ಬಾಲ್, ಇನೋಳಿ ಮಸೀದಿ ಅಧ್ಯಕ್ಷರಾದ ಅಬ್ಬಾಸ್ ಟಿ.ಎಚ್, ಹೈದರ್ ಸಖಾಫಿ, ಅಝೀಜ್ ಸಖಾಫಿ, ಕ್ಯಾನಟ್ ಡಿಸೋಜ, ಅನಿಲ್ ಡಿಸೋಜ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.