ಕಡಬ (ಉಪ್ಪಿನಂಗಡಿ): ಕಡಬ ತಾಲ್ಲೂಕು ಆಡಳಿತ ಸೌಧದ ಹಿಂಭಾಗದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕಾಗಿ 3 ಎಕರೆ ಜಮೀನು ಕಾದಿರಿಸಲಾಗಿದ್ದು, ದ.ಕ.ಜಿಲ್ಲಾ ಪ್ರಧಾನ ಸೆಷನ್ಸ್ ನ್ಯಾಯಾಧೀಶ ರವೀಂದ್ರ ಎಂ.ಜೋಶಿ ಸ್ಥಳ ಪರಿಶೀಲನೆ ನಡೆಸಿದರು.

ಅಧಿಕಾರಿಗಳು ಹಾಗೂ ಸ್ಥಳೀಯ ವಕೀಲರ ಜತೆ ಚರ್ಚಿಸಿದರು.

ಕಡಬ ತಾಲ್ಲೂಕು ಕೇಂದ್ರಕ್ಕೆ ಸಿವಿಲ್ ನ್ಯಾಯಾಲಯ ಸಂಕೀರ್ಣ, ನ್ಯಾಯಾಧೀಶರ ವಸತಿಗೃಹ, ವಕೀಲರ ಭವನ ಹಾಗೂ ನ್ಯಾಯಾಲಯ ಸಿಬ್ಬಂದಿಯ ವಸತಿಗೃಹ ನಿರ್ಮಾಣಕ್ಕೆ ಕಾದಿರಿಸಿರುವ ಜಮೀನು ಪೊಲೀಸ್ ಇಲಾಖೆ ಹಾಗೂ ಕಂದಾಯ ಇಲಾಖೆ ಕಚೇರಿಗಳಿಗೆ ಹತ್ತಿರದಲ್ಲಿದ್ದು, ಸಾರ್ವಜನಿಕರಿಗೆ ಅನುಕೂಲಕರವಾಗಿದ್ದು, ಸೂಕ್ತವಾಗಿದೆ. ಕಾದಿರಿಸದ ಜಾಗದಲ್ಲಿ ಯಾವ ರೀತಿ ಕಟ್ಟಡ ನಿರ್ಮಿಸಬಹುದು ಎಂಬ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ ಅಧಿಕೃತ ನಕಾಶೆ ತಯಾರಾಗಿದೆ ಎಂದರು.

ನ್ಯಾಯಾಲಯಕ್ಕಾಗಿ ಕಾದಿರಿಸಿರುವ ಜಾಗಕ್ಕೆ ನೇರ ಸಂಪರ್ಕ ಕಲ್ಪಿಸಲು ತಾಲ್ಲೂಕು ಆಡಳಿತ ಸೌಧದ ಪಕ್ಕದ ರಸ್ತೆಯನ್ನು ನ್ಯಾಯಾಲಯ ಸಂಕೀರ್ಣಕ್ಕೂ ಸಂಪರ್ಕ ಕಲ್ಪಿಸುವಂತೆ ನಕ್ಷೆಯಲ್ಲಿ ನಮೂದಿಸಲು ಕಂದಾಯ ಅಧಿಕಾರಿಗಳು ಮತ್ತು ಭೂ ಮಾಪನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕಡಬ ವಕೀಲರ ಬಳಗದ ಮುಂದಾಳು ಶಿವಪ್ರಸಾದ್ ಪುತ್ತಿಲ ಮಾತನಾಡಿ, ಕಡಬದಲ್ಲಿಯೇ ನ್ಯಾಯಾಲಯ ಸಂಕೀರ್ಣ ಶೀಘ್ರ ಪ್ರಾರಂಭವಾಗಬೇಕು ಎನ್ನುವುದು ನಮ್ಮ ಆಗ್ರಹವಾಗಿದೆ ಎಂದರು.

ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಪ್ರಮೋದ್‌ಕುಮಾರ್ ಕೆ.ಕೆ. ನ್ಯಾಯಾಧೀಶರಿಗೆ ಮಾಹಿತಿ ನೀಡಿದರು. ಕಡಬ ಉಪ ತಹಶೀಲ್ದಾರ್ ಶಾಹಿದುಲ್ಲಾ ಖಾನ್ ಜಮೀನಿನ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಪಿ.ವರ್ಗೀಸ್, ನ್ಯಾಯಾಲಯ ಕಚೇರಿಯ ವ್ಯವಸ್ಥಾಪಕ ಸುಭಾಷ್, ಕಡಬ ಎಸ್ಐ ಅಭಿನಂದನ್, ಕಂದಾಯ ನಿರೀಕ್ಷಕ ಪೃಥ್ವಿರಾಜ್, ತಾಲ್ಲೂಕು ಭೂ ಮಾಪಕ ಗಿರಿಗೌಡ, ಕಡಬ ವಕೀಲರ ಬಳಗದ ಪ್ರಮುಖರಾದ ಲೋಕೇಶ್ ಎಂ.ಜೆ.ಕೊಣಾಜೆ, ಕೃಷ್ಣಪ್ಪ ಗೌಡ ಕಕ್ವೆ, ರಶ್ಮಿ ಜಿ., ಅಶ್ವಿತ್ ಖಂಡಿಗ, ಅವಿನಾಶ್ ಬೈತಡ್ಕ, ಸುಮನಾ ಎಂ. ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.