ಕಾಸರಗೋಡು: ‘ತುಳು ಭಾಷೆಯನ್ನೂ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸಬೇಕು’ ಎಂದು ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಸಂಸತ್ತಿನಲ್ಲಿ ಒತ್ತಾಯಿಸಿದ್ದಾರೆ.

‘ಕಾಸರಗೋಡು ಮತ್ತು ಕರ್ನಾಟಕದ ಎರಡು ಜಿಲ್ಲೆಗಳಲ್ಲಿ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಹೆಚ್ಚಿನ ಜನರ ಮಾತೃಭಾಷೆ ಯಾಗಿದೆ. 2011ರ ಜನಗಣತಿಯಂತೆ 18,46,427 ಮಂದಿ ತುಳು ಮಾತನಾಡುತ್ತಿದ್ದಾರೆ. 8ನೇ ಪರಿಚ್ಛೇದದಲ್ಲಿ ಸೇರಿರುವ ಮಣಿಪುರಿ ಭಾಷೆ ಮಾತನಾಡುವವರು 17,61,079 ಮಂದಿ ಹಾಗೂ ಸಂಸ್ಕೃತ ಭಾಷೆ ಮಾತನಾಡುವವರು 24,821 ಮಂದಿ ಮಾತ್ರ ಇದ್ದಾರೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ತುಳು ಸೇರ್ಪಡೆಯಾದರೆ ಸಾಹಿತ್ಯ ಅಕಾಡೆಮಿಯ ಅಂಗೀಕಾರ ಸಿಗಲಿದೆ. ತುಳು ಗ್ರಂಥಗಳು ಹಾಗೂ ಸಾಹಿತ್ಯ ಕೃತಿಗಳು ಇತರ ಭಾರತೀಯ ಭಾಷೆಗಳಿಗೆ ಭಾಷಾಂತರಗೊಳ್ಳಲಿವೆ. ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಸಂಸದರಿಗೆ ಹಾಗೂ ಶಾಸಕರಿಗೆ ತುಳುವಿನಲ್ಲೇ ಪ್ರಶ್ನೆ ಕೇಳಬಹುದಾಗಿದೆ. ಅಖಿಲ ಭಾರತ ಮಟ್ಟದ ಸಿವಿಲ್ ಸರ್ವೀಸ್ ಪರೀಕ್ಷೆಗಳನ್ನು ತುಳುವಿನಲ್ಲೇ ಬರೆಯುವ ಅವಕಾಶ ಲಭಿಸಲಿದೆ. ತುಳು ಭಾಷಿಕರ ಬಹುಕಾಲದ ಈ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಬೇಕು’ ಎಂದು ಸಂಸತ್ತಿನ ಶೂನ್ಯ ವೇಳೆಯಲ್ಲಿ ರಾಜಮೋಹನ್ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.