ಮಂಗಳೂರು: ಅಖಿಲ ಭಾರತ ಕೊಂಕಣಿ ಪರಿಷದ್ ಆಯೋಜಿಸಿರುವ 33ನೇ ಅಧಿವೇಶನ ಗೋವಾದ ಮಡಗಾಂವ್ನಲ್ಲಿರುವ ರವೀಂದ್ರ ಭವನದಲ್ಲಿ ಇದೇ 26 ಮತ್ತು 27ರಂದು ನಡೆಯಲಿದೆ ಎಂದು ಅಧಿವೇಶನದ ಸ್ವಾಗತ ಸಮಿತಿ ಅಧ್ಯಕ್ಷ ಪ್ರಶಾಂತ್ ನಾಯಕ್ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ವರ್ಷಗಳಿಗೊಮ್ಮೆ ಅಧಿವೇಶನ ನಡೆಸಲಾಗುತ್ತದೆ. ಕೊಂಕಣಿ ಶಿಕ್ಷಣ, ಭಾಷೆಯ ಅಭಿವೃದ್ಧಿಯಲ್ಲಿ ತಂತ್ರಜ್ಞಾನದ ಬಳಕೆ ಮುಂತಾದ ವಿಷಯಗಳ ಕುರಿತು ಈ ಬಾರಿ ಚರ್ಚೆ ನಡೆಯಲಿದೆ ಎಂದರು.

ಕರ್ನಾಟಕ, ಗೋವಾ, ಮಹಾರಾಷ್ಟ್ರ ಮತ್ತು ಕೇಳರದಲ್ಲಿ 10 ಲಕ್ಷಕ್ಕೂ ಹೆಚ್ಚು ಕೊಂಕಣಿ ಭಾಷಿಕರು ಇದ್ದಾರೆ. 1939ರಲ್ಲಿ ಆರಂಭಗೊಂಡ ಪರಿಷದ್ನಲ್ಲಿ ಈ ನಾಲ್ಕೂ ರಾಜ್ಯಗಳ ಪ್ರತಿನಿಧಿಗಳು ಇದ್ದಾರೆ. ಅಧಿವೇಶನಕ್ಕೆ ಬರುವವರು ಗೂಗಲ್ ಫಾರ್ಮ್ನಲ್ಲಿ ಪ್ರವೇಶಪತ್ರಗಳನ್ನು ಕಳುಹಿಸಬೇಕು. ಆಹಾರ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ವಿದ್ಯಾರ್ಥಿಗಳಿಗೆ ₹ 100, ಉಳಿದವರಿಗೆ ₹ 1,000 ಶುಲ್ಕವಿದೆ. ಎಕ್ಸಿಕ್ಯೂಟಿವ್ ಹಂತದ ಪ್ರತಿನಿಧಿಗಳು ₹ 3 ಸಾವಿರ ಶುಲ್ಕ ನೀಡಬೇಕು ಎಂದು ಅವರು ವಿವರಿಸಿದರು.

ಅಖಿಲ ಭಾರತ ಕೊಂಕಣಿ ಪರಿಷದ್ ಕಾರ್ಯಾಧ್ಯಕ್ಷ ಚೇತನ್ ಅಚಾರ್ಯ, ಪ್ರಮುಖರಾದ ಕಸ್ತೂರಿ ಮೋಹನ್ ಪೈ, ಎಚ್.ಎಂ.ಪೆರ್ನಾಲ್, ಟೈಟಸ್ ನೊರೊನ್ಹಾ ಮತ್ತು ಮೆಲ್ವಿನ್ ರಾಡ್ರಿಗಸ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.