ಮಂಗಳೂರು: ಪಣಂಬೂರಿನಲ್ಲಿರುವ ಮಂಗಳೂರು ಬಂದರಿಗೆ (ಎನ್‌ಎಂಪಿಟಿ) ಇದೇ ಪ್ರಥಮ ಬಾರಿಗೆ ಅತಿ ಹೆಚ್ಚು ಭಾರದ ಸರಕು ಹೊತ್ತು ಭಾರಿ ಗಾತ್ರದ ಹಡಗು ಸೋಮವಾರ ದಕ್ಕೆಯಲ್ಲಿ ಲಂಗರು ಹಾಕಿದ್ದು, 25,864.40 ಟನ್(1142/1521 ಪೆಟ್ಟಿಗೆ) ಗೋಡಂಬಿ ತುಂಬಿದ ಕಂಟೇನರ್ ತಂದಿಳಿಸಿದೆ.

ಇಲ್ಲಿ ಲಂಗರು ಹಾಕುತ್ತಿರುವ ಮೊದಲ ಬೃಹತ್ ಗಾತ್ರದ ಸರಕು ಸಾಗಣೆ ಹಡಗು ‘ಎಂ.ವಿ.ಎಸ್‌ಎಸ್‌ಎಲ್ ಬ್ರಹ್ಮಪುತ್ರ–ವಿ.084’ 260 ಮೀಟರ್ ಉದ್ದ, 32.35 ಮೀಟರ್ ಅಗಲ, 50,900 ಟನ್ ತೂಕ ಹೊಂದಿದೆ. ಮೆ.ಶ್ರೇಯಸ್ ಶಿಪಿಂಗ್ ಸಂಸ್ಥೆ ಇದನ್ನು ನಿರ್ವಹಿಸುತ್ತಿದ್ದು, ಮಂಗಳೂರಿನ ಅಮೋಘ ಶಿಪಿಂಗ್ ಸಂಸ್ಥೆ ಸ್ಥಳೀಯವಾಗಿ ಪ್ರತಿನಿಧಿಸುವ ಏಜೆಂಟರಾಗಿದ್ದಾರೆ ಎಂದು ಬಂಧರು ಮಂಡಳಿ ತಿಳಿಸಿದೆ.

ಸಂತಸ: ‘ಭಾರಿ ಗಾತ್ರದ ಸರಕು ವ್ಯವಹಾರ ಹಾಗೂ ಬೃಹತ್ ಗಾತ್ರದ ಹಡಗು ಲಂಗರು ಹಾಕಲು ಸಾಧ್ಯವಾಗಿರುವುದಕ್ಕೆ ಎನ್‌ಎಂಪಿಟಿ ಅಧ್ಯಕ್ಷ ಡಾ. ಎ.ವಿ. ರಮಣ ಹರ್ಷ ವ್ಯಕ್ತಪಡಿಸಿದ್ದಾರೆ. ಬಂದರಿನಲ್ಲಿ ಬಹುಮುಖಿ ವಾಣಿಜ್ಯ ವ್ಯವಹಾರಗಳಿಗೆ ಪೂರಕ ವ್ಯವಸ್ಥೆ ಅಭಿವೃದ್ಧಿ, ಆನ್‌ಲೈನ್ ಪ್ರವೇಶಾನುಮತಿ, ಸುಧಾರಿತ ದಾಸ್ತಾನು ಸೌಲಭ್ಯ, ಗುಣಮಟ್ಟದ ಸೇವೆ ಹಾಗೂ ಶುಲ್ಕ ಅನುಬಂಧಿತ ವ್ಯವಸ್ಥೆಗಳನ್ನು ನೀಡಲಾಗಿರುವುದರಿಂದ ಇದು ಸಾಧ್ಯವಾಗಿದೆ. ಇನ್ನೂ ಹೆಚ್ಚಿನ ವಾಣಿಜ್ಯಿಕ ಪ್ರಗತಿಯ ಗುರಿ ಇರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

‘ದಕ್ಕೆಯಲ್ಲಿ ಯಾಂತ್ರೀಕೃತ ಸರಕು ವ್ಯವಹಾರ’: ‘ನವಮಂಗಳೂರು ಬಂದರು ಮಂಡಳಿ (ಎನ್‌ಎಂಪಿಟಿ) ಸರಕು ಸಾಗಣೆ ವ್ಯವಹಾರದಲ್ಲಿ ಕಳೆದ 20 ವರ್ಷಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದು, 2000ನೇ ಇಸವಿ ಸಂದರ್ಭದಲ್ಲಿ 2000 ಟಿಇಯು (ಟ್ವೆಂಟಿ ಫೂಟ್ ಕಂಟೇನರ್, 1 ಟಿಇಯು 6 ಮೀಟರ್ ಕಂಟೇನರ್ ಗಾತ್ರ) ಕ್ಕಿಂತ ಕಡಿಮೆ ವ್ಯವಹಾರ ನಡೆಸುತ್ತಿದ್ದರೆ, 2020–21ರಲ್ಲಿ ಇದರು 1.5 ಲಕ್ಷ ಟಿಇಯು ಕಂಟೇನರ್ ವ್ಯವಹಾರ ನಡೆಸುವಷ್ಟು ಪ್ರಗತಿ ಸಾಧಿಸಿದೆ. ಭಾರಿ ಗಾತ್ರದ ಸರಕು ಸಾಗಣೆ ಹಡಗುಗಳ ಬಳಕೆಗಾಗಿ ಆಳ ಕಾಲುವೆ ದಕ್ಕೆ ಸಂಖ್ಯೆ 14 ರಲ್ಲಿ ಹಡಗಿಗೆ ತುಂಬಲು– ಇಳಿಸಲು ಪೂರ್ಣಪ್ರಮಾಣದಲ್ಲಿ ಕಂಟೇನರ್ ವ್ಯವಹಾರವನ್ನು ಯಾಂತ್ರಿಕರಣಗೊಳಿಸಲಾಗುತ್ತಿದೆ. ಇದರ ಗುತ್ತಿಗೆಯನ್ನು ಮೆ. ಮಂಗಳೂರು ಕಂಟೇನರ್ ಟರ್ಮಿನಲ್ ಪ್ರೈ.ಲಿ.(ಜೆಎಸ್‌ಡಬ್ಲ್ಯು)ಗೆ ಪಿಪಿಪಿ ಆಧಾರದಲ್ಲಿ ನೀಡಲಾಗಿದೆ. ಯಾಂತ್ರಿಕರಣ ಪೂರ್ಣಗೊಳ್ಳುವುದರೊಂದಿಗೆ ಕಂಟೇನರ್ ಸಾಗಣೆ ವ್ಯವಹಾರ ದುಪ್ಪಟ್ಟಾಗುವ ನಿರೀಕ್ಷೆ ಇದೆ’ ಎಂದು ಬಂದರು ಮಂಡಳಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.