ಮಂಗಳೂರು: ಪರಿಸರ ಉತ್ಕೃಷ್ಟತೆಯಲ್ಲಿ ನಡೆಯುತ್ತಿರುವ ಪ್ರಯತ್ನಗಳು ಹಾಗೂ ಸಂಗ್ರಹಣೆ ಮತ್ತು ಪೂರೈಕೆ ಸರಪಳಿಯಲ್ಲಿ ವೃತ್ತಿಪರತೆ ಈ ಎರಡು ಕ್ಷೇತ್ರಗಳ ಸಾಧನೆಗಾಗಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಎಂಜಿಐಎ) ಎರಡು ಪ್ರಶಸ್ತಿ ಲಭಿಸಿವೆ.

ನವದೆಹಲಿಯ ಗ್ರೀನ್‌ಟೆಕ್ ಫೌಂಡೇಶನ್ ಜಮ್ಮು ಮತ್ತು ಕಾಶ್ಮೀರದ ಸೋನ್ಮಾರ್ಗ್‌ನಲ್ಲಿ ಎಂಜಿಐಎಗೆ 23ನೇ ‘ಗ್ರೀನ್‌ಟೆಕ್ ಎನ್ವಿರಾನ್ಮೆಂಟ್ ಎಕ್ಸಲೆನ್ಸ್ ಅವಾರ್ಡ್ 2023’ ಪ್ರದಾನ ಮಾಡಲಾಯಿತು. ಒಟ್ಟಾರೆ ಪರಿಸರ ಮತ್ತು ಸುಸ್ಥಿರತೆ ಕಾಯ್ದುಕೊಳ್ಳುವಲ್ಲಿ ವಿಮಾನ ನಿಲ್ದಾಣ ಕೈಗೊಂಡ ಕ್ರಮಗಳನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತದೆ.

ವಿಮಾನ ನಿಲ್ದಾಣದ ಪರಿಸರ ಮತ್ತು ಸುಸ್ಥಿರತೆ ತಂಡದ ಶ್ರೀಧರ್ ಮಹಾವರ್ಕರ್ ಅವರು ಎನ್.ಶ್ರೀಧರ್, ಸಿಂಗರೇಣಿ ಕೊಲಿಯರೀಸ್ ಕಂಪನಿ ಲಿ.ನ ಸಿಎಂಡಿ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ವಿಮಾನ ನಿಲ್ದಾಣದ ಟೆಕ್ನೋ-ಕಮರ್ಷಿಯಲ್ (ಟಿಸಿ) ತಂಡವು ಮುಂಬೈನಲ್ಲಿ ನಡೆದ ಐಎಸ್ಎಂ ಇಂಡಿಯಾ ಸಮ್ಮೇಳನ ಮತ್ತು ಸಿಪಿಒ ಪ್ರಶಸ್ತಿ 2023 ಸಮಾರಂಭದಲ್ಲಿ ರನ್ನರ್ ಅಪ್ ಪ್ರಶಸ್ತಿಯನ್ನು ಮಂಗಳೂರು ವಿಮಾನ ನಿಲ್ದಾಣ ತನ್ನದಾಗಿಸಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.