‘ಜಾಗತಿಕ ಗುಣಮಟ್ಟಕ್ಕೆ ತಯಾರಿ’
ಕೆಪಿಟಿಗೆ ಸ್ವಾಯತ್ತ ಸ್ಥಾನಮಾನ ದೊರೆತಿರುವುದು ಖುಷಿಯ ವಿಚಾರ. ಇಲ್ಲಿಯವರೆಗೆ ಪರಿಮಿತಿಯ ಪಠ್ಯಕ್ರಮವನ್ನೇ ವಿದ್ಯಾರ್ಥಿಗಳು ಕಲಿಯಬೇಕಾಗಿತ್ತು. ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಅವು ಹಳೆಯದಾಗಿದ್ದು ಪ್ರಸ್ತುತ ಕೈಗಾರಿಕಾ ರಂಗ ಬೇಡುವ ಕೌಶಲ ಅಭಿವೃದ್ಧಿಪಡಿಸಬೇಕಾದ ಅಗತ್ಯವಿದೆ. ಸ್ವಾಯತ್ತ ಸ್ಥಾನಮಾನ ದೊರೆತಿರುವುದರಿಂದ ಅಗತ್ಯಕ್ಕೆ ತಕ್ಕ ಪಠ್ಯಕ್ರಮ ಸಿದ್ಧಪಡಿಸಬಹುದು. ಜಾಗತಿಕ ಗುಣಮಟ್ಟಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಪಡಿಸಬಹುದು ಎಂದು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಸಿ ಎಲೆಕ್ಟ್ರಿಕಲ್ಸ್ ಲೀಲಾ ಕನ್‌ಸ್ಟ್ರಕ್ಷನ್ಸ್ ಮಾಲೀಕ ದೇವಾನಂದ ಎಂ.ಸಿ. ತಿಳಿಸಿದರು.