ಮಂಗಳೂರು: ‘ಸೋನಿ ಲಿವ್’ ಓಟಿಟಿ ಫ್ಲಾಟ್ಫಾರ್ಮ್ನಲ್ಲಿ ಮುಂಬೈನಲ್ಲಿ ಆಯೋಜಿಸಿದ್ದ ‘ಮಾಸ್ಟರ್ ಶೆಫ್ ಇಂಡಿಯಾ’ ಸ್ಪರ್ಧೆಯಲ್ಲಿ ನಗರದ ಮುಹಮ್ಮದ್ ಆಶಿಕ್ (24) ಜಯಶಾಲಿಯಾ ಗಿದ್ದಾರೆ.

ಶುಕ್ರವಾರ ಸ್ಪರ್ಧೆಯ ಫೈನಲ್ ಸಂಚಿಕೆ ಪ್ರಸಾರವಾಯಿತು.

ಇಲ್ಲಿಯ ಜೆಪ್ಪು ಮಹಾಕಾಳಿ ಪಡ್ಪುವಿನ ಅಬ್ದುಲ್ ಖಾದರ್–ಸಾರಮ್ಮ ದಂಪತಿಯ ಪುತ್ರ ಮುಹಮ್ಮದ್ ಆಶಿಕ್, ಮಂಗಳೂರಿನ ಕಾಶಿಯಾ ಮತ್ತು ರೋಝಾರಿಯೊ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದರು. ಪಿಯುಸಿ ನಂತರ, ಬಡತನದ ಕಾರಣಕ್ಕೆ ಫಿಝಾ ಮಾಲ್ನಲ್ಲಿ ಬಟ್ಟೆ ಅಂಗಡಿಯೊಂದರಲ್ಲಿ ಸೇಲ್ಸ್ಮೆನ್ ಆಗಿ ಕೆಲಸ ಮಾಡಿದರು.

ಸಂಬಂಧಿಯೊಬ್ಬರು ಆರ್ಥಿಕ ನೆರವು ನೀಡಿದ್ದರಿಂದ ನಗರದ ಬಲ್ಮಠದಲ್ಲಿ ‘ಕುಲ್ಕಿ ಹಬ್’ ಆರಂಭಿಸಿದ್ದರು. ಆ ನಂತರ ವಿವಿಧೆಡೆ ಶೆಫ್ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.