‘ಅನಾಥಾಶ್ರಮಗಳಿಗೂ ದುಡ್ಡು ಬಂದಿಲ್ಲ’
‘ನಮ್ಮಲ್ಲಿ 300 ಅನಾಥರಿದ್ದಾರೆ. ಕೊರೊನಾ ನಂತರ ಧನಸಹಾಯ ಸರಿಯಾಗಿ ಬರುತ್ತಿಲ್ಲ. ಮಂಜೂರಾದ ಮೊತ್ತದ ಬಿಡುಗಡೆಗೂ ಸತಾಯಿಸಲಾಗುತ್ತಿದೆ’ ಎಂದು ಜೆಪ್ಪು ಪ್ರಶಾಂತಿ ನಿಲಯದ ಡೊರೊತಿ ಸಲ್ಡಾನ ದೂರಿದರು. ‘ಕೇಂದ್ರ ಸರ್ಕಾರವು ಪ್ರತಿ ಅನಾಥಾಶ್ರಮದ 25 ಮಂದಿಗೆ ವರ್ಷಕ್ಕೆ ₹ 21 ಲಕ್ಷ ನೀಡುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಅನಾಶ್ರಮಗಳಿಗೆ ನೀಡುವ ಮೊತ್ತವನ್ನು ₹8 ಲಕ್ಷದಿಂದ ₹ 15 ಲಕ್ಷಕ್ಕೆ ಹೆಚ್ಚಿಸಿದೆ. ಆದರೆ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಈಗಲೂ ಪ್ರತಿ ವ್ಯಕ್ತಿಗೆ ತಿಂಗಳಿಗೆ ₹ 2456 ನೀಡುತ್ತಿದೆ. ಇದು ಏನೇನೂ ಸಾಲದು. ಆಹಾರ ಸಾಮಗ್ರಿ ಔಷಧ ಬೆಲೆ ಗಗನಕ್ಕೆ ಏರಿದೆ. ಈ ವರ್ಷದ ಅನುದಾನ ಇನ್ನೂ ಬಿಡುಗಡೆ ಆಗಿಲ್ಲ’ ಎಂದು ಬೆಳ್ತಂಗಡಿ ಗಂಡಿಬಾಗಿಲು ಸಿಯೋನ್ ಅನಾಥಾಶ್ರಮದ ಯು.ಸಿ.ಪೌಲೋಸ್ ಅಳಲು ತೋಡಿಕೊಂಡರು.