ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೊ ಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ಕಂಪನಿಯು 2024–25ನೇ ಹಣಕಾಸು ವರ್ಷದ ಪ್ರಥಮ ತ್ರೈಮಾಸಿಕದ ಲಾಭದ ಪ್ರಮಾಣ ಗಣನೀಯವಾಗಿ ಕುಸಿದಿದೆ.

2023–24ನೇ ಸಾಲಿನ ಪ್ರಥಮ ತ್ರೈಮಾಸಿಕದಲ್ಲಿ ಕಂಪನಿಯು ₹1,013 ಕೋಟಿ ಲಾಭ ಗಳಿಸಿತ್ತು. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್–ಜೂನ್ ತ್ರೈಮಾಸಿಕದಲ್ಲಿ ಕಂಪನಿಯು ತೆರಿಗೆ ನಂತರ ₹66 ಕೋಟಿ ಲಾಭ ಗಳಿಸಿದೆ.

ಇಲ್ಲಿ ಸೋಮವಾರ ನಡೆದ ಕಂಪನಿಯ ಆಡಳಿತ ಮಂಡಳಿ ಸಭೆಯಲ್ಲಿ ಪ್ರಥಮ ತ್ರೈಮಾಸಿಕ ವರದಿಗೆ ಅನುಮೋದನೆ ನೀಡಲಾಯಿತು.

ಕಂಪನಿಯು ಪ್ರಥಮ ತ್ರೈಮಾಸಿಕದಲ್ಲಿ ಕಾರ್ಯಾಚರಣೆಯಿಂದ ಒಟ್ಟು ₹27,289 ಕೋಟಿ ಗಳಿಸಿದೆ. 2023–24ನೇ ಸಾಲಿನಲ್ಲಿ ಕಂಪನಿ ₹24,825 ಕೋಟಿ ವರಮಾನ ಗಳಿಸಿತ್ತು. ಕಂಪನಿಯು ಕಚ್ಚಾ ತೈಲದ ಪ್ರತಿ ಬ್ಯಾರೆಲ್ಗೆ ₹393.18 ನಿವ್ವಳ ಸಂಸ್ಕರಣಾ ಲಾಭಾಂಶ ಗಳಿಸಿದೆ. ಕಳೆದ ವರ್ಷ ಇದು ಪ್ರತಿ ಬ್ಯಾರೆಲ್ ಕಚ್ಚಾ ತೈಲಕ್ಕೆ ₹820.65 ಇತ್ತು.

2024ರ ಮೇ ತಿಂಗಳಲ್ಲಿ ಕಂಪನಿಯು 15.93 ಲಕ್ಷ ಟನ್ ಕಚ್ಚಾ ತೈಲವನ್ನು ಸಂಸ್ಕರಿಸಿದೆ. ಇದು ಕಂಪನಿಯ ಇದುವರೆಗಿನ ಗರಿಷ್ಠ ಸಾಧನೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 15.57 ಲಕ್ಷ ಟನ್ ಕಚ್ಚಾ ತೈಲವನ್ನು ಸಂಸ್ಕರಿಸಿತ್ತು. ಮೇ ತಿಂಗಳಲ್ಲಿ ಕಂಪನಿಯು 2.30 ಲಕ್ಷ ಟನ್ ವಿಮಾನ ಇಂಧನವನ್ನು (ಎಟಿಎಫ್) ಉತ್ಪಾದಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 2.27 ಲಕ್ಷ ಟನ್ ಎಟಿಎಫ್ ಅನ್ನು ಉತ್ಪಾದಿಸಿತ್ತು.

ಕಂಪನಿಯು ಇದೇ ಮೊದಲ ಬಾರಿಗೆ ರಷ್ಯಾದ ಕಲಿನಿಂಗ್ರ್ಯಾಡ್ ಕಚ್ಚಾ ತೈಲವನ್ನು (ಏಪ್ರಿಲ್ನಲ್ಲಿ) ಸಂಸ್ಕರಣೆ ಮಾಡಿದೆ. ರಷ್ಯಾದ ವರಾಂಡೆ ಕಚ್ಚಾ ತೈಲ ಮತ್ತು ಹಾಗೂ ಕುವೈತ್ನ ಇಯೋಸಿನ್ ಕಚ್ಚಾ ತೈಲವನ್ನು ಮೊದಲ ಸಲ (ಜೂನ್ ತಿಂಗಳಿನಲ್ಲಿ) ಸಂಸ್ಕರಣೆ ಮಾಡಿದೆ ಎಂದು ಎಂಆರ್ಪಿಎಲ್ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.