ಕೋಲ್ಕತ್ತ: ಮೊಹಮಡನ್ ಸ್ಪೋರ್ಟಿಂಗ್ ಕ್ಲಬ್, ಬುಧವಾರ ನಡೆಯುವ ಇಂಡಿಯನ್ ಸೂಪರ್ ಲೀಗ್ ಪಂದ್ಯದಲ್ಲಿ ಪ್ರಬಲ ಬೆಂಗಳೂರು ಎಫ್ಸಿ ತಂಡವನ್ನು ಎದುರಿಸಲಿದ್ದು, ತವರಿನಲ್ಲಿ ಈ ಬಾರಿ ಮೊದಲ ಜಯ ದಾಖಲಿಸಲು ಯತ್ನಿಸಲಿದೆ.

ಮೊದಲ ಬಾರಿ ಐಎಸ್ಎಲ್ನಲ್ಲಿ ಆಡುತ್ತಿರುವ ಮೊಹಮಡನ್ ತಂಡ ಈಗ 13 ತಂಡಗಳ ಲೀಗ್ನಲ್ಲಿ 12ನೇ ಸ್ಥಾನದಲ್ಲಿದೆ. ಆಡಿರುವ ಏಳು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದು, ನಾಲ್ಕರಲ್ಲಿ ಸೋತಿದ್ದು, ಎರಡನ್ನು ಡ್ರಾ ಮಾಡಿಕೊಂಡಿದೆ. ಅದರ ಖಾತೆಯಲ್ಲಿ ಬರೇ 5 ಪಾಯಿಂಟ್ಸ್ ಇದೆ.

ಇನ್ನೊಂದು ಕಡೆ ಬಿಎಫ್ಸಿ ಎಂಟು ಪಂದ್ಯಗಳಿಂದ 17 ಪಾಯಿಂಟ್ಸ್ ಕಲೆಹಾಕಿದ್ದು ಎರಡನೇ ಸ್ಥಾನದಲ್ಲಿದೆ. ಮೋಹನ್ ಬಾಗನ್ ಸೂಪರ್ ಜೈಂಟ್ಸ್ ಕೂಡ 8 ಪಂದ್ಯಗಳಿಂದ ಇಷ್ಟೇ ಪಾಯಿಂಟ್ಸ್ ಗಳಿಸಿದರೂ ಗೋಲು ಸರಾಸರಿಯಲ್ಲಿ ಮುಂದಿದೆ. ಹೀಗಾಗಿ ಲೀಗ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಬಿಎಫ್ಸಿ ಎಲ್ಲ ಯತ್ನ ನಡೆಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.