ನವದೆಹಲಿ: ಡೋಪಿಂಗ್ ವಿಚಾರವಾಗಿ ಒಲಿಂಪಿಯನ್ ಕುಸ್ತಿಪಟು 30 ವರ್ಷದ ಬಜರಂಗ್ ಪೂನಿಯಾ ಅವರನ್ನು ನಾಲ್ಕು ವರ್ಷ ಅಮಾನತು ಮಾಡಿ ನಾಡಾ (ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ) ಕ್ರಮ ಕೈಗೊಂಡಿದೆ.

ನಾಡಾದ ಈ ಆದೇಶದ ಪ್ರಕಾರ ಪೂನಿಯಾ ಅವರು ಇನ್ನು ನಾಲ್ಕು ವರ್ಷ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಕುಸ್ತಿ ಆಡುವಂತಿಲ್ಲ

ಹರಿಯಾಣದ ಸೋನೆಪತ್ನಲ್ಲಿ ಇದೇ ವರ್ಷ ಮಾರ್ಚ್ 10ರಂದು ನಡೆದ ಕುಸ್ತಿ ಆಯ್ಕೆ ಟ್ರಯಲ್ಸ್ನಲ್ಲಿ ನಿಷೇಧಿತ ಉದ್ದೀಪನ ಮದ್ದು ಪರೀಕ್ಷೆಗಾಗಿ ಮೂತ್ರದ ಮಾದರಿ ನೀಡಲು ನಿರಾಕರಿಸಿದ್ದಕ್ಕಾಗಿ ಪೂನಿಯಾ ಅವರನ್ನು ಏಪ್ರಿಲ್ 23ರಂದು ನಾಡಾ ತಾತ್ಕಾಲಿಕವಾಗಿ ಅಮಾನತುಗೊಳಿಸಿತ್ತು. ಅದನ್ನು ಸಂಯುಕ್ತ ವಿಶ್ವ ಕುಸ್ತಿ (ಯುಡಬ್ಲ್ಯುಡಬ್ಲ್ಯು) ಸಂಸ್ಥೆಯೂ ಅಂಗೀಕರಿಸಿತ್ತು.

ಈ ಅಮಾನತು ಕ್ರಮವನ್ನು ಪ್ರಶ್ನಿಸಿ ಪೂನಿಯಾ ನಾಡಾಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಕಳೆದ ಸೆಪ್ಟೆಂಬರ್ 20 ಹಾಗೂ ಅಕ್ಟೋಬರ್ 4 ರಂದು ಅಂತಿಮ ವಿಚಾರಣೆ ನಡೆಸಿ ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ ನಿನ್ನೆ (ನ.26) ಪೂನಿಯಾ ಅವರನ್ನು ನಾಲ್ಕು ವರ್ಷ ಕುಸ್ತಿಯಿಂದ ಅಮಾನತು ಮಾಡಿ ಕ್ರಮ ಕೈಗೊಂಡಿದೆ.

ನಾಡಾದ ಕಲಂ 10.3.1 ರ ಅಡಿಯಲ್ಲಿನ ನಿರ್ಬಂಧಗಳಿಗೆ ಅಥ್ಲೀಟ್ ಬಜರಂಗ್ ಪೂನಿಯಾ ಅವರು ಹೊಣೆಗಾರ. ಇದರಿಂದ ಅವರು 4 ವರ್ಷಗಳ ಅವಧಿಯ ಅನರ್ಹತೆಗೆ ಗುರಿಯಾಗುತ್ತಾರೆ. ಈ ಅನರ್ಹತೆ ಈ ವರ್ಷ ಏಪ್ರಿಲ್ 23ರಿಂದಲೇ ಅನ್ವಯವಾಗುತ್ತದೆ ಎಂದು ನಾಡಾ ತಿಳಿಸಿದೆ.

ಇತ್ತೀಚೆಗೆ ಕಾಂಗ್ರೆಸ್ ಪಕ್ಷವನ್ನು ಸೇರಿರುವ ಪೂನಿಯಾ ಅವರು ಸದ್ಯ ಆ ಪಕ್ಷದ ರೈತ ಘಟಕದ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ನಾಡಾ ನನ್ನನ್ನು ಹೇಗೆ ಗುರಿಯಾಗಿಸಿದೆ ಎಂಬುದನ್ನು ಇದು ತೋರಿಸುತ್ತದೆ. ನಾನು ಯಾವುದೇ ಕಾರಣಕ್ಕೂ ಕುಸ್ತಿಯನ್ನು ಮುಂದುವರಿಸಲು ಅವರು ಬಯಸುವುದಿಲ್ಲ’ ಎಂದು ಬಜರಂಗ್ ಇತ್ತೀಚೆಗೆ ಹೇಳಿದ್ದರು.

‘ಅವರ (ನಾಡಾ) ಬಳಿ ಉತ್ತರಗಳಿಲ್ಲ ಮತ್ತು ಅವರು ತಮ್ಮ ತಪ್ಪುಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಲೂ ಸಿದ್ಧರಿಲ್ಲ. ಕ್ರೀಡಾಪಟುವಿಗೆ ಕಿರುಕುಳ ನೀಡುವುದು ಅವರ ಉದ್ದೇಶ. ತಪ್ಪು ಪ್ರಶ್ನಿಸಿದವರನ್ನು ಗುರಿಯಾಗಿಸಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದ್ದರು.

‘ಅವಧಿ ಮೀರಿದ ಕಿಟ್ ಬಗ್ಗೆ ನಾಡಾ ಏಕೆ ಉತ್ತರಿಸುವುದಿಲ್ಲ? ಮುಂದಿನ ಪಂದ್ಯಕ್ಕೆ ತಯಾರಿ ನಡೆಸಲು ನನಗೆ ಕೇವಲ 20 ನಿಮಿಷಗಳಿವೆ ಎಂದು ತಿಳಿದಿದ್ದರೂ ಎರಡು ಪಂದ್ಯಗಳ ನಡುವೆ ಮಾದರಿಗಳನ್ನು ಸಂಗ್ರಹಿಸಲು ನನ್ನ ಮೇಲೆ ಏಕೆ ಒತ್ತಡ ಹೇರಲಾಯಿತು ಎಂಬುದಕ್ಕೆ ಏಕೆ ಉತ್ತರಿಸುವುದಿಲ್ಲ’ ಬಜರಂಗ್ ಹೇಳಿದ್ದರು.
.IPL Auction Day 1: ಆರ್ಸಿಬಿ ಖರೀದಿಸಿದ ಆಟಗಾರರ ಪಟ್ಟಿ ಇಲ್ಲಿದೆ.IPL Auction | ಆರ್ಸಿಬಿಗೆ ಮರಳಿದ ದೇವದತ್ತ: ಭುವನೇಶ್ವರ್, ಕೃಣಾಲ್ಗೆ ಮಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.