ಮಂಗಳೂರು: ಮಂಗಳೂರು ರಿಫೈನರಿ ಮತ್ತು ಪೆಟ್ರೊಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಕಂಪನಿಯು 2022-23ನೇ ಸಾಲಿನಲ್ಲಿ, ಒಂದೇ ಸ್ಥಳದಲ್ಲಿ ತೈಲ ಸಂಸ್ಕರಣೆ ಮಾಡುವ ದೇಶದ ಸರ್ಕಾರಿ ಸ್ವಾಮ್ಯದ ರಿಫೈನರಿಗಳ ಪೈಕಿ ಅತಿದೊಡ್ಡ ರಿಫೈನರಿ ಎಂಬ ಹೆಗ್ಗಳಿಕೆ ಪಡೆದಿದೆ.

ಕಳೆದ ಹಣಕಾಸು ವರ್ಷದಲ್ಲಿ 1.71 ಕೋಟಿ ಮೆಟ್ರಿಕ್ ಟನ್ ಕಚ್ಚಾತೈಲವನ್ನು ಸಂಸ್ಕರಿಸುವ ಮೂಲಕ ಎಂಆರ್‌ಪಿಎಲ್ ಈ ಸಾಧನೆ ಮಾಡಿದೆ. ರಾಷ್ಟ್ರದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಘಟಕಗಳು ಸಂಸ್ಕರಿಸುವ ಕಚ್ಚಾತೈಲದಲ್ಲಿ ಶೇ10ರಷ್ಟನ್ನು ಎಂಆರ್‌ಪಿಎಲ್ ಸಂಸ್ಕರಿಸುತ್ತದೆ.

ಜಗತ್ತಿನ 250ಕ್ಕೂ ಹೆಚ್ಚು ಬಗೆಯ ಕಚ್ಚಾತೈಲಗಳನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಎಂಆರ್‌ಪಿಎಲ್ ಹೊಂದಿದ್ದು, ಮಧ್ಯಪ್ರಾಚ್ಯ, ರಷ್ಯಾ, ಆಫ್ರಿಕಾ, ದಕ್ಷಿಣ ಅಮೆರಿಕ, ಯುರೋಪ್‌ನ ಕಚ್ಚಾತೈಲವನ್ನು ಇಲ್ಲಿ ಸಂಸ್ಕರಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.