ಮಂಗಳೂರು: ಫಿಸಿಯೊಥೆರಪಿ ಶಿಕ್ಷಣದಲ್ಲಿ ಇಡೀ ದೇಶಕ್ಕೆ ಒಂದೇ ಪಠ್ಯಕ್ರಮ ಅಳವಡಿಸಲು ಯೋಚಿಸಲಾಗಿದ್ದು, ಇದು ಶೀಘ್ರ ಅನುಷ್ಠಾನಗೊಳ್ಳಲಿದೆ ಎಂದು ಭಾರತೀಯ ಫಿಸಿಯೊಥೆರಪಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಡಾ. ಸಂಜೀವ್ ಝಾ ಹೇಳಿದರು.

ಸೌತ್ ಕೆನರಾ ಫಿಸಿಯೊಥೆರಪಿ ಶಿಕ್ಷಕರ ಸಂಘದ ಆಶ್ರಯಲ್ಲಿ ಶುಕ್ರವಾರ ಇಲ್ಲಿ ಉದ್ಘಾಟನೆಗೊಂಡ ‘ಮಂಗಳೂರು ಫಿಸಿಯೊಕಾನ್’ ಎರಡು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

2030ರ ವೇಳೆಗೆ ಫಿಸಿಯೊಥೆರಪಿ ವಿಭಾಗವನ್ನು ವೈದ್ಯಕೀಯ ಕ್ಷೇತ್ರದ ಪ್ರಮುಖ ವ್ಯವಸ್ಥೆಯಾಗಿ ರೂಪಿಸಿ, ಹೊರದೇಶದ ವಿದ್ಯಾರ್ಥಿಗಳನ್ನು ಭಾರತದತ್ತ ಸೆಳೆಯಲು ಅಸೋಸಿಯೇಷನ್ ಕಾರ್ಯತಂತ್ರ ರೂಪಿಸಿದೆ ಎಂದರು.

ವಿಚಾರ ಸಂಕಿರಣ ಉದ್ಘಾಟಿಸಿದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು, ‘ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಫಿಸಿಯೊಥೆರಪಿ ವಿಭಾಗ ಪ್ರಾರಂಭಿಸಬೇಕು’ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.