ಪಠ್ಯದಲ್ಲಿ ರೋಗಗಳ ಬಗ್ಗೆ ಮತ್ತು ವೈರಾಣುಗಳ ಕುರಿತು ಮಾಹಿತಿ ಇದ್ದರೂ ತಜ್ಞರು ಶಾಲೆಗೇ ಬಂದು ವಿವರ ನೀಡುವುದರಿಂದ ವಿದ್ಯಾರ್ಥಿಗಳ ಅರಿವು ವಿಸ್ತಾರವಾಗುತ್ತದೆ. ಈ ನಿಟ್ಟಿನಲ್ಲಿ ಇದು ಅತ್ಯುತ್ತಮ ಕಾರ್ಯಕ್ರಮವಾಗಿತ್ತು.
ಸಿಸ್ಟರ್ ಸಿಂಥಿಯಾ ಡಿ’ಕುನ್ನ ಶಾಲೆಯ ಮುಖ್ಯ ಶಿಕ್ಷಕಿ
ರೇಬಿಸ್ ಕಾಯಿಲೆ ನಾಯಿಗಳಿಂದ ಮಾತ್ರ ಬರುತ್ತದೆ ಎಂಬ ತಪ್ಪು ತಿಳಿವಳಿಕೆ ನನ್ನಲ್ಲಿತ್ತು. ಬೇರೆ ಪ್ರಾಣಿಗಳಿಂದ ಇದು ಬರುತ್ತದೆ ಎಂಬುದು ವೈದ್ಯರು ನೀಡಿದ ಮಾಹಿತಿಯಿಂದ ತಿಳಿಯಿತು. ಕಾರ್ಯಕ್ರಮ ಖುಷಿ ನೀಡಿತು.
ಸೂರ್ಯ ಆರ್ 10ನೇ ತರಗತಿ ವಿದ್ಯಾರ್ಥಿ
ನಾಯಿಯನ್ನು ಕಂಡರೆ ಓಡಬಾರದು ಅಥವಾ ಕೆಣಕಬಾರದು ಎಂದು ತಿಳಿಸಿದ್ದು ಒಳ್ಳೆಯದಾಯಿತು. ಇಂಥ ವಿಷಯಗಳು ತಿಳಿದಿರುವುದಿಲ್ಲ. ರೇಬಿಸ್ ಇದ್ದ ಪ್ರಾಣಿ ಕಚ್ಚಿದರೆ ಹೇಗೆ ಕಾಡುತ್ತದೆ ಎಂಬ ಮಾಹಿತಿ ಉಪಯುಕ್ತವಾಗಿತ್ತು.