ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೇರೆ ಕಾಲೇಜುಗಳಲ್ಲಿ ಪಿ.ಯು ಪ್ರಾಯೋಗಿಕ ಪರೀಕ್ಷೆ : ಸುತ್ತೋಲೆ ಹಿಂಪಡೆಯಲು ಒತ್ತಾಯ

Published : 4 ಅಕ್ಟೋಬರ್ 2024, 0:17 IST
Last Updated : 4 ಅಕ್ಟೋಬರ್ 2024, 0:17 IST
ಫಾಲೋ ಮಾಡಿ
Comments

ಮಂಗಳೂರು: ದ್ವಿತೀಯ ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆಯನ್ನು ಬೇರೆ ಕಾಲೇಜುಗಳಲ್ಲಿ ಆಯೋಜಿಸುವಂತೆ ಸೂಚಿಸಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ) ಮಂಗಳವಾರ ಹೊರಡಿಸಿರುವ ಸುತ್ತೋಲೆ ಯನ್ನು ಹಿಂಪಡೆಯುವಂತೆ ಕರ್ನಾಟಕ ರಾಜ್ಯ ಖಾಸಗಿ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘವು (ಕುಪ್ಮ) ಒತ್ತಾಯಿಸಿದೆ.

ಇಷ್ಟು ವರ್ಷ ದ್ವಿತೀಯ ಪಿ.ಯು. ವಿದ್ಯಾರ್ಥಿಗಳು ತಾವು ಕಲಿತ ಕಾಲೇಜಿ ನಲ್ಲೇ ದ್ವಿತೀಯ ಪಿ.ಯು  ಪ್ರಾಯೋಗಿಕ ಪರೀಕ್ಷೆಯನ್ನೂ ಬರೆಯುತ್ತಿದ್ದರು. ಆಯಾ ಪಿ.ಯು. ಕಾಲೇಜಿನ ಉಸ್ತುವಾರಿಯಲ್ಲಿ ಬಾಹ್ಯ ಪರೀಕ್ಷಾ ವೀಕ್ಷಕರು ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿದ್ದರು. ಯಾವುದೇ ಪೂರ್ವ ತಯಾರಿ ಇಲ್ಲದೇ, ಸಂಬಂಧಪಟ್ಟವರಿಂದ ಸಲಹೆಯನ್ನೂ ಪಡೆಯದೆ ಈಗಿನ ಪದ್ಧತಿಯನ್ನು ಬದಲಿಸಲು ಕೆಎಸ್‌ಇಎಬಿ ಹೊರಡಿಸಿರುವ ಸುತ್ತೋಲೆಯು ಅವೈಜ್ಞಾನಿಕ ಎಂದು ಕುಪ್ಮ ಆರೋಪಿಸಿದೆ. 

‘ಪಿ.ಯು. ಪ್ರಾಯೋಗಿಕ ಪರೀಕ್ಷೆಗಳು ನಡೆಯುವ ಸಮಯದಲ್ಲಿ ಜೆಇಇ  ಮೇನ್ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತವೆ. ಪಿ.ಯು. ಪ್ರಾಯೋಗಿಕ ಪರೀಕ್ಷೆ ಹಾಜರಾಗುವ ವಿದ್ಯಾರ್ಥಿ ಬೇರೆ ಕಾಲೇಜುಗಳಿಗೆ ಹೋಗಿ ಬರುವುದಕ್ಕೆ ಸಮಯವೂ ವ್ಯರ್ಥವಾಗುತ್ತದೆ.

ಕಾಲೇಜಿನ ಶೈಕ್ಷಣಿಕ ವಾತಾವರಣಕ್ಕೆ ಹೊಂದಿಕೊಂಡಿರುವ ವಿದ್ಯಾರ್ಥಿಗಳು ಪಾಯೋಗಿಕ ಪರೀಕ್ಷೆಗಾಗಿ ಬೇರೆ ಕಾಲೇಜುಗಳಿಗೆ ಹೋಗಬೇಕೆಂದಾಗ ಅವರಲ್ಲಿ ಮಾನಸಿಕ ತಳಮಳವೂ ಉಂಟಾಗುತ್ತದೆ. ಕೆಲವು ಪಿ.ಯು. ಕಾಲೇಜುಗಳಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲು ಅಗತ್ಯವಿರುವ ಮೂಲಸೌಕರ್ಯಗಳು ಇರುವುದಿಲ್ಲ. ಪ್ರಯೋಗಕ್ಕೆ ಬೇಕಾಗುವ ಉಪಕರಣಗಳ ಕೊರತೆ ಇರುತ್ತದೆ’ ಎಂದು ಕುಪ್ಮದ ಅಧ್ಯಕ್ಷ
ಡಾ.ಎಂ.ಮೋಹನ ಆಳ್ವ ಹಾಗೂ ಕಾರ್ಯದರ್ಶಿ

ನರೇಂದ್ರ ಎಲ್. ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT