ಪುತ್ತೂರು: ‘ಕ್ಯಾಂಪ್ಕೊ ಸಂಸ್ಥೆ ರೈತ, ಬೆಳೆಗಾರರ ಬೇಡಿಕೆಗೆ ಸ್ಪಂದಿಸುತ್ತಾ ಬಂದಿದ್ದು, ರೈತರ ಬೇಡಿಕೆಯಂತೆ ಸಣ್ಣ ಮಟ್ಟದ ಮಣ್ಣು ಪರೀಕ್ಷಾ ಯಂತ್ರವನ್ನು ಈಗಾಗಲೇ ಖರೀದಿಸಲಾಗಿದ್ದು, ಮೊಬೈಲ್ ಕೇಂದ್ರವನ್ನು ಪುತ್ತೂರಿನಲ್ಲಿ ಸ್ಥಾಪಿಸಲಾಗುವುದು’ ಎಂದು ಸಂಸ್ಥೆಯ ಅಧ್ಯಕ್ಷ ಎ.ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.

ಪುತ್ತೂರಿನ ಮಹಾಮಾಯಿ ದೇವಳದ ಬಳಿ ಸಂಸ್ಥೆಯ ಪುತ್ತೂರು ಶಾಖೆಯ ನವೀಕೃತ ಕಚೇರಿಯ ಉದ್ಘಾಟನೆ ಮತ್ತು ಸದಸ್ಯ ಬೆಳೆಗಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಡಿಕೆ ಹಾಗೂ ಇತರ ಕೃಷಿಯನ್ನು ಬಾಧಿಸುತ್ತಿರುವ ರೋಗಗಳಿಗೆ ಪರಿಹಾರ ಕಂಡುಕೊಳ್ಳಲು ವಿಜ್ಞಾನಿಗಳೊಂದಿಗೆ ಸಂಪರ್ಕ ಕೊಂಡಿಯಾಗಿ ಕ್ಯಾಂಪ್ಕೊ ಕೆಲಸ ಮಾಡುತ್ತಿದೆ. ರೈತರ ಬೇಡಿಕೆಯನ್ನು ಸಂಘದ ಸಭೆಯಲ್ಲಿ ಮುಂದಿಟ್ಟು ಚರ್ಚಿಸಿ ಈಡೇರಿಸಲಾಗುವುದು ಎಂದರು.

ಸಂಸ್ಥೆಯಲ್ಲಿ 1.45 ಲಕ್ಷ ಸದಸ್ಯರಿದ್ದು, ಎಲ್ಲರ ಹಿತಕಾಯಲು ಆಡಳಿತ ಮಂಡಳಿ ಬದ್ಧವಾಗಿದೆ. ಸಂಸ್ಥೆಯ ವತಿಯಿಂದ ಕೊಬ್ಬರಿ ಖರೀದಿಯ ಜತೆಗೆ ತೆಂಗಿನಕಾಯಿ ಖರೀದಿಗೂ ನಿರ್ದೇಶನ ನೀಡಲಾಗಿದೆ. ಕೆಲವು ಭಾಗಗಳಲ್ಲಿ ಈಗಾಗಲೇ ತೆಂಗಿನಕಾಯಿ ಖರೀದಿ ಆರಂಭಿಸಲಾಗಿದೆ. ರೈತರ ಅಧ್ಯಯನ ಪ್ರವಾಸ ಹಮ್ಮಿಕೊಳ್ಳುವ ಬಗ್ಗೆಯೂ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು. ಮನೆಯಲ್ಲಿ ಪ್ರತಿಯೊಬ್ಬರೂ ಅಡಿಕೆ ತಿನ್ನುವುದನ್ನು ರೂಡಿಸಿಕೊಂಡರೆ ಸ್ವಲ್ಪ ಮಟ್ಟಿಗಾದರೂ ಧಾರಣೆ ಏರಿಕೆಯಾಗಬಹುದು ಎಂದು ಅವರು ಹೇಳಿದರು.

ಸಂಸ್ಥೆಯ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ ಮಾತನಾಡಿ, ರೈತರೂ ಬೆಳೆಯಬೇಕು, ಜತೆಗೆ ಸಂಸ್ಥೆಯೂ ಬೆಳೆಯಬೇಕು ಎಂಬುದು ನಮ್ಮ ಉದ್ದೇಶ. ಮೌಲ್ಯಾಧಾರಿತ ಉತ್ಪನ್ನಗಳನ್ನು ಸಂಸ್ಥೆ ಮಾರಾಟ ಮಾಡುತ್ತಿದೆ ಎಂದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿ.ವಿ.ಸತ್ಯನಾರಾಯಣ ಮಾತನಾಡಿ, ಪ್ರಸ್ತುತ ಅಡಿಕೆ ಧಾರಣೆಯನ್ನು ಹೆಚ್ಚಿಸಲು ಕಾರ್ಯಕ್ರಮ ಕೈಗೊಳ್ಳಲಾಗುತ್ತಿದ್ದು, ಬೆಳೆಗಾರರಿಗೆ ಉತ್ತಮ ಧಾರಣೆ ಸಿಗಬೇಕೆನ್ನುವುದು ಸಂಸ್ಥೆಯ ಉದ್ದೇಶವಾಗಿದೆ. ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎಂಬುದನ್ನು ದೃಢಪಡಿಸುವ ವಿಚಾರದಲ್ಲಿ ಪ್ರಯತ್ನ ಮುಂದುವರಿದಿದೆ ಎಂದರು.

ಹಿರಿಯ ಸದಸ್ಯರಾದ ಎನ್.ಎಸ್.ಹರಿಹರ ರಾವ್ ಕೊಡಿಪ್ಪಾಡಿ, ಸುರೇಶ್ ಬಲ್ನಾಡು, ಬಿ.ಟಿ.ನಾರಾಯಣ ಭಟ್, ಕೆ.ಟಿ.ಭಟ್ ಅವರು ನವೀಕೃತ ಕಚೇರಿ ಉದ್ಘಾಟಿಸಿದರು. ನಿರ್ದೇಶಕರಾದ ಎಸ್.ಆರ್.ಸತೀಶ್ಚಂದ್ರ, ಕೃಷ್ಣಪ್ರಸಾದ್ ಮಡ್ತಿಲ, ಕೆ.ಬಾಲಕೃಷ್ಣ ರೈ, ಜಯರಾಮ ಸರಳಾಯ, ಜಯಪ್ರಕಾಶ್ ನಾರಾಯಣ ಟಿ.ಕೆ., ರಾಧಾಕೃಷ್ಣನ್ ಕೆ., ಸತ್ಯನಾರಾಯಣ ಪ್ರಸಾದ್, ಸುರೇಶ್ಕುಮಾರ್ ಶೆಟ್ಟಿ, ಜನರಲ್ ಮ್ಯಾನೇಜರ್ ರೇಷ್ಮಾ ಮಲ್ಯ, ಡಿಜಿಎಂ ಪರಮೇಶ್ವರ್, ಎಆರ್ಡಿಎಫ್ ವಿಜ್ಞಾನಿ ಕೇಶವ ಭಟ್ ಭಾಗವಹಿಸಿದ್ದರು.

ನಿರ್ದೇಶಖ ರಾಘವೇಂದ್ರ ಭಟ್ ಕೆದಿಲ ಸ್ವಾಗತಿಸಿದರು. ಸಿಬ್ಬಂದಿ ಚೇತನ ಆಳ್ವ ಪ್ರಾರ್ಥಿಸಿದರು. ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಗೋವಿಂದ ಭಟ್ ವಂದಿಸಿದರು. ಕಾವು ಶಾಖೆಯ ಮ್ಯಾನೇಜರ್ ನಿತಿನ್ ಕೋಟ್ಯಾನ್ ನಿರೂಪಿಸಿದರು.

ಕಾಡುಪ್ರಾಣಿಗಳಿಂದಾಗಿ ಕೊಕ್ಕೊ ಬೆಳೆ ನಾಶವಾಗುತ್ತಿದ್ದು, ಇದರ ತಡೆಗಟ್ಟಲು ಅರಣ್ಯ ಇಲಾಖೆಗೆ ಮನವಿ ಮಾಡಬೇಕು. ಮಂಗಗಳನ್ನು ಹಿಡಿದು ಚಾರ್ಮಾಡಿ ಘಾಟಿಗೆ ಸ್ಥಳಾಂತರಿಸಬೇಕು. ಅಡಿಕೆ ಬೆಳೆ ಸೇರಿದಂತೆ ಕೃಷಿಯನ್ನು ಬಾಧಿಸುವ ರೋಗಗಳಿಗೆ ಪರಿಹಾರ ಒದಗಿಸಬೇಕು ಎಂದು ಬೆಳೆಗಾರರು ಮನವಿ ಮಾಡಿದರು.

ಮಂಗಗಳನ್ನು ಹಿಡಿದು ಅಂಡಮಾನ್ ದ್ವೀಪಕ್ಕೆ ಸ್ಥಳಾಂತರಿಸುವಂತೆ ಅರಣ್ಯ ಇಲಾಖೆಗೆ ಮತ್ತು ಸರ್ಕಾರಕ್ಕೆ ಮನವಿ ನೀಡಲಾಗಿದೆ. ಈ ಬಗ್ಗೆ ಇನ್ನೊಮ್ಮೆ ಪತ್ರ ಬರೆಯಲಾಗುವುದು. ಮಂಗಗಳಿಗೆ ಮಂಕಿ ಪಾರ್ಕ್, ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡುವ ಘೋಷಣೆಯನ್ನು ಸರ್ಕಾರ ಮಾಡಿದ್ದರೂ ಕಾರ್ಯಗತಗೊಂಡಿಲ್ಲ. ಎಂದು ಎ.ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.